ಮೈಸೂರು: ರೋಹಿಣಿ ಸಿಂಧೂರಿ V/S ಸಾ ರಾ ಮಹೇಶ್ ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ನಾಳೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಛೇರಿ ಮುಂದೆ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ. ರಾ. ಮಹೇಶ್ ಏಕಾಂಗಿ ಧರಣಿ ಕೂರಲು ನಿರ್ಧರಿಸಿದ್ದಾರೆ.

ಸಾರಾ ಕನ್ವೆಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಾಣ ಆಗಿದೆ ಎಂಬ ರೋಹಿಣಿ ಸಿಂಧೂರಿ ಹೇಳಿಕೆ ಆಧರಿಸಿ ವೆಬ್‌ಫೋರ್ಟಲ್‌ನಲ್ಲಿ ವರದಿ ಪ್ರಕಟವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣ ಸತ್ಯವಾಗಿದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಧರಣಿ ಸಂಬಂಧ ಪ್ರಾದೇಶಿಕ ಆಯುಕ್ತರಿಗೆ ಸಾರಾ ಮಹೇಶ್ ಪತ್ರ ಬರೆದಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪ, ಮುಖ್ಯ ಕಾರ್ಯದರ್ಶಿಯವರಿಗೂ ಧರಣಿ ಪ್ರತಿಗಳ ರವಾನೆ ನೀಡಿದ್ದಾರೆ.

The post ರೋಹಿಣಿ ವಿರುದ್ಧ ಪ್ರತಿಭಟನೆಗೆ ಸಾರಾ ಮಹೇಶ್ ನಿರ್ಧಾರ; ಭೂ ಅಕ್ರಮದ ಬಗ್ಗೆ ಮಾತನಾಡಿದ್ದೇ ತಪ್ಪಾ? appeared first on News First Kannada.

Source: newsfirstlive.com

Source link