ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಇಲ್ಲದೇ ನಡೆದ ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯೇ ಜವಾಬ್ದಾರಿ ವಹಿಸಬೇಕು ಎಂದು ಬಿಜೆಪಿ ನಾಯಕ ಅಮ್ಮನಪುರ ಮಲ್ಲೇಶ್​ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲೇಶ್​, ಸರ್ಕಾರ ರೋಹಿಣಿ ಸಿಂಧೂರಿಯನ್ನ ವರ್ಗಾವಣೆ ಮಾಡಿದೆ. ಆದರೆ ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತಕ್ಕೆ ಯಾರನ್ನ ಹೊಣೆ ಮಾಡಬೇಕು? ಇದಕ್ಕೆ ರೋಹಿಣಿ ಸಿಂಧೂರಿಯೇ ಹೊಣೆ ಹೊರಬೇಕು. ಏಕೆಂದರೆ ರೋಹಿಣಿ ಸಿಂಧೂರಿ ಚಾಮರಾಜನಗರಕ್ಕೆ ಆಕ್ಸಿಜನ್ ಕೊಡಬಾರದೆಂದು ಮಾತನಾಡಿರುವ ಫೋನ್ ಸಂಭಾಷಣೆ ಸಿಕ್ಕಿದೆ. ಸರ್ಕಾರ ರೋಹಿಣಿ ಸಿಂಧೂರಿ ಮೇಲೆ ಕೊಲೆ ಮೊಕದ್ದಮೆ ಹಾಕಬೇಕು ಎಂದಿದ್ದಾರೆ.

ಅಲ್ಲದೇ ಚಾಮರಾಜನಗರ ಜಿಲ್ಲೆಯ ಜನತೆ ಪರವಾಗಿ ಹೈಕೋರ್ಟ್ ಮೊರೆ ಹೋಗುತ್ತೇನೆ. ಗ್ಯಾಸ್ ಏಜೆನ್ಸಿ ಅವರಿಗೆ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ. ರೋಹಿಣಿ ಸಿಂಧೂರಿಗೆ ವಿಕೃತ ಮನಸ್ಸಿದೆ. ಅವರು ಬ್ಯೂಟಿಫುಲ್ಲಾಗಿದ್ರೆ ಬ್ಯೂಟಿ ಕಂಪಿಟೇಷನ್ನಲ್ಲಿ ಸ್ಪರ್ಧಿಸಲಿ. ಅವರನ್ನು ಸಸ್ಪೆಂಡ್ ಮಾಡಿ ಬಂಧಿಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ಜವಾಬ್ದಾರಿ ನೀಡಬಾರದು ಎಂದು ಆಗ್ರಹಿಸಿದರು.

The post ರೋಹಿಣಿ ಸಿಂಧೂರಿಗೆ ಬ್ಯೂಟಿಫುಲ್ಲಾಗಿದ್ರೆ ಬ್ಯೂಟಿ ಕಂಪಿಟೇಷನ್ನಲ್ಲಿ ಸ್ಪರ್ಧಿಸಲಿ- ಬಿಜೆಪಿ ನಾಯಕ ವಾಗ್ದಾಳಿ appeared first on News First Kannada.

Source: newsfirstlive.com

Source link