ಮೈಸೂರು: ಕಳೆದ ರಾತ್ರಿ ನಡೆದ ವರ್ಗಾವಣೆಯಂತೆ ಇಂದು ಗೌತಮ್ ಬಗಾದಿ ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ರೋಹಿಣಿ ಸಿಂಧೂರಿಯವರೇ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದ್ರೆ ಅವರಿಗಾಗಿ ಒಂದು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ಕಾದರೂ ರೋಹಿಣಿ ಸಿಂಧೂರಿ ಕಚೇರಿಗೆ ಬಂದಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಅಧಿಕಾರಿಗಳೇ ಗೌತಮ್ ಬಗಾದಿಯವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಅವರು ಬಗಾದಿಗೆ ಅಧಿಕಾರವನ್ನ ಹಸ್ತಾಂತರ ಮಾಡಿದರು. ನಿರ್ಗಮಿತ ರೋಹಿಣಿ ಸಿಂಧೂರಿ ಹಾಗೂ ಮತ್ತೊಬ್ಬ ಐಎಎಸ್​ ಅಧಿಕಾರಿ ಶಿಲ್ಪಾ ನಾಗ್ ನಡುವೆ ಕಿತ್ತಾಟ ನಡೆದಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಸರ್ಕಾರ ಇಬ್ಬರು ಐಎಎಸ್​ ಅಧಿಕಾರಿಗಳನ್ನ ನಿನ್ನೆ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ನೂತನ ಡಿಸಿಯಾಗಿ ನೇಮಕಗೊಂಡಿದ್ದ ಗೌತಮ್ ಬಗಾದಿ ಅವರು ಇಂದು ಅಧಿಕಾರವನ್ನ ಸ್ವೀಕರಿಸಿದರು.

The post ರೋಹಿಣಿ ಸಿಂಧೂರಿ ಅನುಪಸ್ಥಿತಿ.. ಗೌತಮ್​ ಬಗಾದಿಗೆ ಮೈಸೂರು ಡಿಸಿ ಅಧಿಕಾರ ಹಸ್ತಾಂತರ appeared first on News First Kannada.

Source: newsfirstlive.com

Source link