ಮೈಸೂರು ನಿರ್ಗಮಿತ ಡಿ.ಸಿ ರೋಹಿಣಿ ಸಿಂಧೂರಿ ಅವರ ಬಯೋಪಿಕ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ‘ಭಾರತ ಸಿಂಧೂರಿ’ ಹೆಸರಿನಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಅವರ ಜೀವನಾಧಾರಿತ ಸಿನಿಮಾ ಮಾಡಲು ಮಂಡ್ಯದ ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ. ಲಾಕ್​ಡೌನ್ ಅಂತ್ಯಗೊಂಡ ಬಳಿಕ ಚಿತ್ರ ಸೆಟ್ ಏರಲಿದೆ.

ತೆರೆ ಮೇಲೆ ರೋಹಿಣಿ ಸಿಂಧೂರಿ ಲೈಫ್
ಮಂಡ್ಯ ಮೂಲದ ಕೃಷ್ಣ ಸ್ವರ್ಣಸಂದ್ರ ಎನ್ನುವವರು ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಭಾರತ ಸಿಂಧೂರಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. 2020ರ ಜೂನ್ 15ರಂದೇ ಸಿನಿಮಾದ ಟೈಟಲ್ ರಿಜಿಸ್ಟರ್ ಆಗಿದೆ. ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಹೊಣೆಯೂ ಕೃಷ್ಣ ಅವರದ್ದೇ. ಕೃಷ್ಣ ಅವರು ಮಂಡ್ಯ ಜಿಲ್ಲೆ ಕ.ಸಾ.ಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ.

ಅಂದ್ಹಾಗೆ, ರೋಹಿಣಿ ಸಿಂಧೂರಿ ಪಾತ್ರಕ್ಕೆ ಬಿಗ್​ಬಾಸ್​ ಸ್ಪರ್ಧಿ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದಾರೆ. ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್​ನಡಿ ಚಿತ್ರ ನಿರ್ಮಾಣವಾಗಲಿದೆ.

The post ರೋಹಿಣಿ ಸಿಂಧೂರಿ ಬಯೋಪಿಕ್.. IAS ಅಧಿಕಾರಿ ಪಾತ್ರಕ್ಕೆ ಈ ಬಿಗ್​ಬಾಸ್​ ಸ್ಪರ್ಧಿ ಆಯ್ಕೆ appeared first on News First Kannada.

Source: newsfirstlive.com

Source link