ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಎ.ಮಂಜು ಇಂದು ವಾಗ್ದಾಳಿ ನಡೆಸಿದ್ದಾರೆ.

ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಜೊತೆಗಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಎ ಮಂಜು.. ‘ಇವತ್ತು ಡಿಸಿ ಮನೆಗೆ ಎಲ್ಲಾ ಡಿಪಾರ್ಟ್​ಮೆಂಟ್​ಗಳಿಂದ 10 ಜನ, 20 ಜನ.. ನನಗೆ ಗೊತ್ತಿರುವ ಮಾಹಿತಿ ಪ್ರಕಾರ 30 ರಿಂದ 40 ಜನ ಜಿಲ್ಲಾಧಿಕಾರಿಗಳ ಮನೆಯಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ನಮ್ಮ ಮಕ್ಕಳಿಗೆಲ್ಲಾ ಆನ್​ಲೈನ್​ ಕ್ಲಾಸ್​, ಅವರ ಮಕ್ಕಳಿಗೆಲ್ಲಾ ಮನೆಗೆ ಹೋಗಿ ಪಾಠನಾ? ಹಾಗಾದ್ರೆ ನಮ್ಮವ್ರೆಲ್ಲಾ ಮಕ್ಕಳಲ್ವಾ? ಯಾಕೆ ಈ ಇಬ್ಬಗೆಯ ತನ? ಅವರೇ ಹೇಳುತ್ತಾರೆ.. ಆನ್​​ಲೈನ್​ ಕ್ಲಾಸ್​ ಇರಲಿ, ಅಂತರ ಇರಲಿ, ದೂರ ಇರಿ ಅಂತಾರೆ. ಡಿಸಿ ಮಕ್ಕಳಿಗೆ ಸ್ಪೆಷಲ್ಲಾ? ಇಲ್ಲಿ ಮಿಸ್​​ ಯೂಸ್ ಅನ್ನೋದಕ್ಕಿಂತ ಅಧಿಕಾರವನ್ನ ಹೇಗೆ ಬಳಸಿಕೊಳ್ತಾರೆ ಅನ್ನೋದು ಮುಖ್ಯ. ಅವರ ಅನುಕೂಲಕ್ಕೆ ಮಾಡಿದಾಗ ಅದು ಮಿಸ್​ ಯೂಸ್ ಅಲ್ಲ, ಅದನ್ನೇ ಬೇರೆಯವರು ಮಾಡಿದ್ರೆ ಮಿಸ್​​ ಯೂಸ್ ಎಂದು ಕಿಡಿಕಾರಿದರು.

The post ‘ರೋಹಿಣಿ ಸಿಂಧೂರಿ ಮನೇಲಿ 40 ನೌಕರರು ಕೆಲ್ಸ ಮಾಡ್ತಿದ್ದಾರೆ.. ನಮ್ಗೊಂದು, ಅವ್ರಿಗೊಂದು ನ್ಯಾಯನಾ? appeared first on News First Kannada.

Source: newsfirstlive.com

Source link