ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತಕ್ಕೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.

ದುರಂತ ಸಂಭವಿಸಿದ ಬಳಿಕ ಸಿಎಂ ಯಡಿಯೂರಪ್ಪನವರು ಸುಧಾಕರ್ ಅವರನ್ನು ಕರೆದು ಮಾತನಾಡಿದ್ದಾರೆ. ಈ ವೇಳೆ, ಮೈಸೂರು ಜಿಲ್ಲಾಧಿಕಾರಿಯೇ ನೇರ ಕಾರಣ. ಆಕ್ಸಿಜನ್ ಇದೆ ಸರ್, ಸರಬರಾಜು ಆಗಿಲ್ಲ. ಏನ್ ಮಾಡೋದು ಹೇಳಿ. ರೋಹಿಣಿ ಸಿಂಧೂರಿ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಸಿಎಂ ಯಡಿಯೂರಪ್ಪ ಮುಂದೆ ಚಾರ್ಜ್ ಶೀಟ್ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಸಿಎಂ ಯಡಿಯೂರಪ್ಪ ಸಹ ರೋಹಿಣಿ ಸಿಂಧೂರಿ ವಿರುದ್ಧ ಈ ವಿಚಾರದ ಬಗ್ಗೆ ಗರಂ ಆಗಿದ್ದು, ಇಂದೇ ಸಿಂಧೂರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಚಾಮರಾಜನಗರದ ಘಟನೆ ನೋವಿನ ಸಂಗತಿಯಾಗಿದೆ. ಸಿಎಂ ಜೊತೆ ಚರ್ಚಿಸಿದ್ದೇನೆ. ತಕ್ಷಣ ಚಾಮರಾಜನಗರ, ಮಂಡ್ಯ,ಮೈಸೂರಿಗೆ ಭೇಟಿ ನೀಡುತ್ತೇನೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ನಿನ್ನೆ ರಾತ್ರಿ 12.30ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ ಎಂದು ಮೈಸೂರು ಜಿಲ್ಲಾಡಳಿತದಿಂದ ಮಾಹಿತಿ ನೀಡಿದೆ. ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿರುವ ಕುರಿತಾಗಿ ಮಾಧ್ಯಮದವರೊಂದಿಗೆ ಮತನಾಡಿದ ಅವರು, ಹೊಂದಾಣಿಕೆ, ನೂನ್ಯತೆಗಳನ್ನು ಸರಿ ಮಾಡುವ ಕೆಲಸ ಮಾಡ್ತೇನೆ. ಸ್ಪಷ್ಟ ಮಾಹಿತಿಯೊಂದಿಗೆ ಚಾಮರಾಜನಗರದಲ್ಲೇ ಮಾತನಾಡುತ್ತೇನೆ. ಗೊಂದಲದ ಹೇಳಿಕೆಗಳನ್ನು ಕೊಡುವುದು ಬೇಡ ಎಂದು ಹೆಳಿದ್ದಾರೆ.

The post ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಗರಂ appeared first on Public TV.

Source: publictv.in

Source link