ರೋಹಿಣಿ V/S ಶಿಲ್ಪಾ ನಾಗ್ ಜಟಾಪಟಿ; ಪ್ರಧಾನಿ ಮೋದಿಗೆ ಪತ್ರ ಬರೆದ ಶಾಸಕ ರಾಮ್​​ದಾಸ್​

ರೋಹಿಣಿ V/S ಶಿಲ್ಪಾ ನಾಗ್ ಜಟಾಪಟಿ; ಪ್ರಧಾನಿ ಮೋದಿಗೆ ಪತ್ರ ಬರೆದ ಶಾಸಕ ರಾಮ್​​ದಾಸ್​

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​​ ಅವರ ನಡುವಿನ ಜಟಾಪಟಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ಎಸ್​​​.ಎ ರಾಮದಾಸ್​​ ಹೇಳಿದ್ದಾರೆ.

ನ್ಯೂಸ್​ಫಸ್ಟ್​​ ನೊಂದಿಗೆ ಮಾತನಾಡಿದ ಶಾಸಕರು, ಕೊರೊನಾ ಆರೋಗ್ಯ ತುರ್ತು ಪರಿಸ್ಥಿತಿಯ ನಡುವೆ ಅಧಿಕಾರಿಗಳು ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ. ಐಎಎಸ್ ಅಧಿಕಾರಿಗಳು ಕೇಂದ್ರದ ಅಡಿ ಬರುತ್ತಾರೆ. ಹೀಗಾಗಿ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಆ ಮೂಲಕ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯ ಮಾಡಿದ್ದೇನೆ. ಮೋದಿ ಅವರೊಂದಿಗೆ ಸಿಎಂ ಬಿಎಸ್​​ವೈ, ಸಿಎಸ್‌ ಅವರಿಗೂ ಪತ್ರ ಬರೆದಿದ್ದೇನೆ ಎಂದರು.

ಇಂದು ಸಿಎಸ್​ ಅವರು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಅವರು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಆದರೆ ಒಬ್ಬ ದಕ್ಷ ಅಧಿಕಾರಿ ರಾಜೀನಾಮೆ ನೀಡುವುದು ಸರಿಯಲ್ಲ. ಅವರ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡುತ್ತೇನೆ. ಸಿಎಸ್​ ಅವರೊಂದಿಗೂ ಈ ಬಗ್ಗೆ ಮಾತನಾಡುತ್ತೇನೆ. ಇದು ಜಿಲ್ಲಾ ಉಸ್ತುವಾರಿ ಅಥವಾ ರಾಜ್ಯ ಸರ್ಕಾರ ವೈಫಲ್ಯವಲ್ಲ. ಕೊರೊನಾ ಕಾರಣದಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕಾಲಕಾಲಕ್ಕೆ ನಾನು ಕೂಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.

The post ರೋಹಿಣಿ V/S ಶಿಲ್ಪಾ ನಾಗ್ ಜಟಾಪಟಿ; ಪ್ರಧಾನಿ ಮೋದಿಗೆ ಪತ್ರ ಬರೆದ ಶಾಸಕ ರಾಮ್​​ದಾಸ್​ appeared first on News First Kannada.

Source: newsfirstlive.com

Source link