
ರೋಹಿತ್ ಚಕ್ರತೀರ್ತ
ರೋಹಿತ್ ಚಕ್ರತೀರ್ತ ಅವರ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ಕಾರ್ಯ ಮುಗಿದಿರುವುದರಿಂದ ಕರ್ನಾಟಕ ಸರಕಾರವು ರೋಹಿತ್ ಚಕ್ರತೀರ್ತ ಸಮಿತಿಯನ್ನು ವಿಸರ್ಜಿಸಿದೆ.
ಬೆಂಗಳೂರು: ರೋಹಿತ್ ಚಕ್ರತೀರ್ತ ಅವರ ನೇತೃತ್ವದಲ್ಲಿ ಪಠ್ಯಪುಸ್ತಕ ಪರೀಷ್ಕರಣೆ ನಡೆದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಪಠ್ಯ ಪರಿಷ್ಕರಣೆ ಸಮಿತಿ ಕಾರ್ಯ ಮುಗಿದಿರುವುದರಿಂದ ಕರ್ನಾಟಕ ಸರಕಾರವು ರೋಹಿತ್ ಚಕ್ರತೀರ್ತ ಸಮಿತಿಯನ್ನು ವಿಸರ್ಜಿಸಿದೆ. ಅಷ್ಟೇ ಅಲ್ಲದೇ ಬಸವಣ್ಣನವರು ಕುರಿತಾದ ಗೊಂದಲ ಪರಿಹರಿಸಲು ಮತ್ತೊಂದು ಸಮಿತಿ ರಚಿಸಿ ಆ ಸಮಿತಿಯ ಮೂಲಕ ಪಾಠವನ್ನು ಪರಿಶೀಲಿಸುವ ಉದ್ದೇಶವನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಿದ್ದಾರೆ.