ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಯಡವಟ್ಟು! 3, 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯ | Rohith Chakrathirtha Samiti has included a Poem verse in the 3rd and 4th class books


ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಯಡವಟ್ಟು! 3, 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯ

3, 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯವನ್ನು ಸೇರ್ಪಡೆ ಮಾಡಲಾಗಿದೆ

ಬಾವಿಯಲ್ಲಿ ಚಂದ್ರ ಶೀರ್ಷಿಕೆಯ ಪದ್ಯವನ್ನು ಹಿಂದಿನ ಸಮಿತಿಯು 3ನೇ ತರಗತಿ ನಲಿ-ಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಮುಂದುವರೆಸಿದೆ.

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸಕ್ತ ಪರಿಷ್ಕರಣಾ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ (Rohith Chakrathirtha) ಅವರ ವಿರುದ್ಧ ಕ್ರಮತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ಮತ್ತೊಂದು ಎಡವಟ್ಟು ನಡೆದಿದೆ. 3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿ (Books) ಒಂದೇ ಪದ್ಯವನ್ನು ಸೇರ್ಪಡೆಗೊಳಿಸಿದ್ದು, ದಿನಕ್ಕೊಂದು ಯಡವಟ್ಟು ಬಹಿರಂಗವಾಗುತ್ತಿವೆ. ಬಿ.ಎಂ ಶರ್ಮಾರವರು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು ಎರಡು ತರಗತಿಗಳಲ್ಲಿ ಸೇರಿಸಿ ಸಮಿತಿ ಎಡವಟ್ಟು ಮಾಡಿದೆ.

ಬಾವಿಯಲ್ಲಿ ಚಂದ್ರ ಶೀರ್ಷಿಕೆಯ ಪದ್ಯವನ್ನು ಹಿಂದಿನ ಸಮಿತಿಯು 3ನೇ ತರಗತಿ ನಲಿ-ಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಮುಂದುವರೆಸಿದೆ. ಅಲ್ಲದೆ 4ನೇ ತರಗತಿಯ ಸವಿ ಕನ್ನಡ ಪುಸ್ತಕದಲ್ಲಿಯೂ ಇದೇ ಪದ್ಯ ಸೇರಿಸಲಾಗಿದ್ದು, ಪಾಠ ಮಾಡುವ ಶಿಕ್ಷಕರಿಗೂ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *