2021ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕಿಂದು ಕೊನೆಯ ಪಂದ್ಯ. ಇದು ಗೆದ್ದರೂ ಭಾರತ ಲೀಗ್ನಿಂದಲೇ ಹೊರ ಬೀಳಲಿದ್ದು, ಐಸಿಸಿ ಟ್ರೋಫಿ ಕನಸು ಈ ಬಾರಿ ಕಮರಿದೆ. ಟೀಮ್ ಇಂಡಿಯಾ ವಿಶ್ವಕಪ್ ಫೈನಲ್ ಇರಲಿ, ಸೆಮಿ ಫೈನಲ್ ಪ್ರವೇಶಿಸುಲ್ಲಿ ವಿಫಲವಾಯ್ತು. ಇದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
2013ರ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಮುಂದಿನ ವರ್ಷ ನಡೆಯುವ T20 ವಿಶ್ವಕಪ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಈ ಬಗ್ಗೆ ಗೌತಮ್ ಗಂಭೀರ್ ಈ ಬಗ್ಗೆ ಮಾತನಾಡಿದ್ದು, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿ ಭಾರತಕ್ಕೆ ಐಸಿಸಿ ಪ್ರಶಸ್ತಿಯನ್ನ ಗೆದ್ದುಕೊಡುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ವರ್ಷ ಟೀಮ್ ಇಂಡಿಯಾ ಹೊಸ ನಾಯಕ ಮತ್ತು ಹೊಸ ಕೋಚ್‌ನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದೆ. ವಿರಾಟ್ ಕೊಹ್ಲಿಗೆ ಇಂದು ಟಿ20 ನಾಯಕನಾಗಿ ಕೊನೆಯ ಪಂದ್ಯವಾದರೆ, ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅಧಿಕಾರಾವಧಿ ಕೂಡ ಇಂದೇ ಅಂತ್ಯಗೊಳ್ಳಲಿದೆ.
ಸದ್ಯ ಮುಂದಿನ ನಾಯಕ ಯಾರು ಅನ್ನೋದನ್ನ ಕೂಡ ಚರ್ಚೆ ನಡೀತಿದೆ. ಸದ್ಯ ತಂಡದಲ್ಲಿ ಉಪನಾಯಕನಾಗಿದ್ದ ರೋಹಿತ್ಗೆ ಈ ಜವಾಬ್ದಾರಿ ವಹಿಸುವುದು ಖಚಿತ. ಹಾಗಾಗಿ ಗಂಭೀರ್ ಈ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ 5 ಬಾರಿ ಟ್ರೋಫಿ ಗೆದ್ದುಕೊಟಿದ್ದಾರೆ. ಇದೇ ರೀತಿ ಭಾರತಕ್ಕೂ ಐಸಿಸಿ ಗೆಲ್ಲಿಸಿಕೊಡುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ನಾಯಕನಾಗಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಾರೆ. ಗೇಮ್ ಪ್ಲಾನ್, ಸ್ಪಷ್ಟ ಸ್ಟ್ರಾಟರ್ಜಿ, ಬೌಲರ್ಗಳ ಬಳಕೆ, ಚಾಣಾಕ್ಷ ನಾಯಕತ್ವ, ಒತ್ತಡದ ಸಂದರ್ಭದಲ್ಲಿ ನಾಯಕನಾಗಿ ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಅದ್ಭುತವಾಗಿರುತ್ತವೆ. ಇನ್ನು ದ್ರಾವಿಡ್ ಕೂಡ ಭಾರತ ಎ ಮತ್ತು ಅಂಡರ್ – 19 ತಂಡವನ್ನ ಮುನ್ನಡಿಸಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಈ ಇಬ್ಬರ ಕಾಂಬಿನೇಷನ್ನಡಿ ಶೀಘ್ರದಲ್ಲೇ ಭಾರತಕ್ಕೆ ಐಸಿಸಿ ಒಲಿದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
The post ರೋಹಿತ್, ದ್ರಾವಿಡ್ ಕಾಂಬಿನೇಷನ್ನಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿ ಪಕ್ಕಾ- ಗೌತಮ್ ಗಂಭೀರ್ appeared first on News First Kannada.