ಬ್ಯಾಟಿಂಗ್ ಲೆಜೆಂಡ್ ಸುನಿಲ್ ಗವಾಸ್ಕರ್ ಅವರು ರೋಹಿತ್ ಶರ್ಮಾರ ಟೆಸ್ಟ್ ನಾಯಕತ್ವದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲೇ ರೋಹಿತ್ ತನ್ನ ಚಾಣಾಕ್ಷತನ ತೋರಿದ್ದಾರೆ ಎಂದು ಹೇಳಿದ್ದಾರೆ.
ರೋಹಿತ್ ನಾಯಕನಾಗಿ ಅದ್ಭುತ ಪದಾರ್ಪಣೆ ಮಾಡಿದ್ದಾರೆ. ಒಬ್ಬ ಕ್ಯಾಪ್ಟನ್ 3 ದಿನಗಳ ಒಳಗೆ ಟೆಸ್ಟ್ ಜಯಿಸಿದ್ರೆ, ಅದು ಆತನ ಶ್ರೇಷ್ಠತೆ ತೋರುತ್ತದೆ. ಅತಿ ಮುಖ್ಯವಾಗಿ ಭಾರತದ ಫೀಲ್ಡಿಂಗ್, ಬೌಲಿಂಗ್ ಬದಲಾವಣೆ ಅತ್ಯಾಕರ್ಷಕವಾಗಿತ್ತು ಎಂದರು.
ಫೀಲ್ಡರ್ ಎಲ್ಲಿ ನಿಲ್ಲುತ್ತಿದ್ದರೋ ಅಲ್ಲಿಗೆ ಕ್ಯಾಚ್‌ಗಳು ಹೋಗುತ್ತಿದ್ದವು. ಫೀಲ್ಡರ್ಗಳು ಹೆಚ್ಚೇನೂ ಓಡುವ ಅಗತ್ಯವಿರಲಿಲ್ಲ. ಇದು ಕ್ಷೇತ್ರರಕ್ಷಣೆಯ ಸಂಯೋಜನೆಯನ್ನು ಎತ್ತಿ ತೋರಿಸುತ್ತದೆ ಎಂದು ಗವಾಸ್ಕರ್ ವಿವರಿಸಿದ್ದಾರೆ.
The post ರೋಹಿತ್ ನಾಯಕತ್ವಕ್ಕೆ ಸುನಿಲ್ ಗವಾಸ್ಕರ್ ಕೊಟ್ಟ ಮಾರ್ಕ್ಸ್ ಎಷ್ಟು ಗೊತ್ತಾ..? appeared first on News First Kannada.