ರೋಹಿತ್ ಶರ್ಮಾಗೆ ಸಿಗಲ್ವಾ ಟಿ20 ನಾಯಕತ್ವದ ಹೊಣೆ? ಯುವ ನಾಯಕನಿಗೆ ಮಣೆ ಹಾಕುತ್ತಾ BCCI?

ಟಿ20 ವಿಶ್ವಕಪ್​ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯೋದು ಖಚಿತವಾಗಿದೆ. ಹಾಗಾದ್ರೆ ಆ ಬಳಿಕ ರೋಹಿತ್ ಶರ್ಮಾ ಸಾರಥ್ಯದಲ್ಲಿ ಟೀಮ್ ಇಂಡಿಯಾ ಮುನ್ನಡೆಯುತ್ತಾ? ಈ ಪ್ರಶ್ನೆಗೆ ಕ್ರಿಕೆಟ್ ವಲಯದ ಉತ್ತರ ಹೌದು ಆನ್ನೋದೆ ಆಗಿದೆ. ಆದ್ರೆ, ರೋಹಿತ್​ಗೆ ಟೀಮ್ ಇಂಡಿಯಾದ ನಾಯಕನ ಪಟ್ಟ ಸಿಗೋದು ಅನುಮಾನ ಎನ್ನಲಾಗಿದೆ.

ಟಿ20 ವಿಶ್ವಕಪ್​​ ಬಳಿಕ ವಿರಾಟ್ ಕೊಹ್ಲಿ, ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಅಂದು ಕೊಹ್ಲಿ ತಮ್ಮ ನಿರ್ಧಾರ ತಿಳಿಸಿದ ಬೆನ್ನಲ್ಲೇ ವಿಶ್ವ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ನೆಕ್ಟ್​ ಟಿ20 ಕ್ಯಾಪ್ಟನ್ ಯಾರ್​ ಆಗ್ತಾರೆ ಎಂಬ ಚರ್ಚೆ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿತ್ತು. ವಿರಾಟ್, ಕೆಳಗಿಳಿದರೇ ವೈಸ್​ ಕ್ಯಾಪ್ಟನ್ ರೋಹಿತ್​ ಶರ್ಮಾ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಮುನ್ನಡೆಯುತ್ತೆ ಅಂತಾನೇ ಬಹುಪಾಲು ಮಂದಿ ಉಹಿಸಿದ್ರು. ಆದ್ರೆ, ಇದೀಗ ರೋಹಿತ್​ಗೆ ನಾಯಕತ್ವ ಸಿಗೋಲ್ಲ ಎಂಬ ಅನುಮಾನ ವ್ಯಕ್ತವಾಗ್ತಿದೆ.

ನಾಯಕನಾಗೋ ರೋಹಿತ್​ ಕನಸಿಗೆ ವಯಸ್ಸೇ ಮುಳ್ಳು..!
ಸದ್ಯ ವಿರಾಟ್​ ಕೆಳಗಿಳಿದ ಬಳಿಕ ರೋಹಿತ್ ಟಿ20 ತಂಡವನ್ನ ಮುನ್ನಡೆಸ್ತಾರೆ ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ. ಆದ್ರೆ, ರೋಹಿತ್​ ನಾಯಕನಾಗೋದು ಬಹುತೇಕ ಅನುಮಾನ. ಒಂದು ವೇಳೆ ನಾಯಕನಾದ್ರೂ ಕೆಲ ದಿನಗಳಿಗೆ ಮಾತ್ರ ಸೀಮಿತವಾಗಲಿದ್ದಾರೆ. ಯಾಕಂದ್ರೆ, 2022 ಹಾಗೂ 2024ರಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಒಂದು ವೇಳೆ ರೋಹಿತ್​ ನಾಯಕನಾದ್ರೂ, 2022ರ ವಿಶ್ವಕಪ್​ಗೆ ಮಾತ್ರ ಸೀಮಿತವಾಗಲಿದ್ದಾರೆ. ಈಗಾಗಲೇ ರೋಹಿತ್​ ವಯಸ್ಸು 34ರ ಗಡಿ ದಾಟಿರೋದೆ ಇದಕ್ಕೆ ಕಾರಣವಾಗಿದೆ.

ಟಿ20ಯಲ್ಲಿ ನಾಯಕನ ಪಟ್ಟ ಸಿಕ್ಕರೂ ಏಕದಿನದಲ್ಲಿ ಡೌಟ್​.!
ಟಿ20 ಮಾದರಿಯಲ್ಲಿ ಕೆಲ ದಿನಗಳ ಮಟ್ಟಿಗಾದ್ರೂ ರೋಹಿತ್​ಗೆ ನಾಯಕನಾಗೋ ಅವಕಾಶವಿದೆ. ಆದ್ರೆ, ಏಕದಿನ ತಂಡದ ನಾಯಕತ್ವ ರೋಹಿತ್​ ಪಾಲಿಗೆ ಕೈಗೆಟುಕುವುದು ಕಷ್ಟಕರವಾಗಿದೆ. ಯಾಕಂದ್ರೆ, 2023ರ ವಿಶ್ವಕಪ್​​ ತನಕ ಏಕದಿನ ತಂಡದ ನಾಯಕನಾಗಿ ಕೊಹ್ಲಿ ಮುಂದುವರಿಯೋದು ಖಚಿತವಾಗಿದೆ. ಆ ಬಳಿಕ ಕೊಹ್ಲಿ ಕೆಳಗಿಳಿದರೂ ಈ ವೇಳೆಗೆ ರೋಹಿತ್​​​ ವಯಸ್ಸು 36 ವರ್ಷದ ಗಡಿ ದಾಟಿರುತ್ತೆ. ಹೀಗಾಗಿ ವಯಸ್ಸಾದ ಆಟಗಾರನಿಗೆ ನಾಯಕತ್ವ ನಿಡೋದು ಅನುಮಾನ ಎನ್ನಲಾಗ್ತಿದೆ.

ಯುವ ನಾಯಕನಿಗೆ ಪಟ್ಟ ಕಟ್ಟುತ್ತಾ ಬಿಸಿಸಿಐ..?
ಎಲ್ಲಾ ಲೆಕ್ಕಾಚಾರಗಳನ್ನ ಮೀರಿ ಯುವ ಆಟಗಾರನಿಗೆ ಬಿಸಿಸಿಐ ನಾಯಕನ ಪಟ್ಟ ಕಟ್ಟೋ ಸಾಧ್ಯತೆಯೂ ದಟ್ಟವಾಗಿದೆ. ಯಾಕಂದ್ರೆ 2023ರ ಬಳಿಕ ಕೊಹ್ಲಿ, ಏಕದಿನ ಮಾದರಿಯೊಂದಿಗೆ ಟೆಸ್ಟ್​ ಮಾದರಿಯಲ್ಲೂ ನಾಯಕತ್ವ ಗುಡ್​ ಬೈ ಹೇಳೋ ಸಾಧ್ಯತೆಯಿದೆ. ಹೀಗಾಗಿ ವಿಶ್ವಕಪ್​ ಬಳಿಕ ಕೊಹ್ಲಿ ಸ್ಥಾನಕ್ಕೆ ಯುವ ಆಟಗಾರನನ್ನ ನೇಮಿಸಿ ತಂಡವನ್ನ ಸಮರ್ಥವಾಗಿ ಮುನ್ನಡೆಸೋ ಆಟಗಾರನನ್ನ ಬೆಳೆಸುವ ಗುರಿಯನ್ನ ಬಿಸಿಸಿಐ ಹೊಂದಿದೆ. ಹೀಗಾಗಿ ಕ್ಯಾಪ್ಟೆನ್ಸಿ ರೇಸ್​ನಲ್ಲಿ ರಿಷಭ್​​ ಪಂತ್, ಕೆ.ಎಲ್​.ರಾಹುಲ್​ ಅಥವಾ ಶ್ರೇಯಸ್ ಅಯ್ಯರ್​​ ಮುಂಚೂಣಿಯಲ್ಲಿದ್ದಾರೆ ಎನ್ನಲಾಗ್ತಿದೆ. ಸದ್ಯ ಟಿ20 ನಾಯಕತ್ವದ ಸ್ಥಾನಕ್ಕೆ ರೋಹಿತ್, ಪರ್ಫೆಕ್ಟ್​ ಆಗಿ ಕಾಣಿಸಿದ್ರೂ, ಭವಿಷ್ಯದ ದೃಷ್ಠಿಯಿಂದ ಯುವ ಆಟಗಾರರ ಬಿಸಿಸಿಐ ಒಲವು ತೋರೋ ಸಾಧ್ಯತೆಯೆ ದಟ್ಟವಾಗಿದೆ.

News First Live Kannada

Leave a comment

Your email address will not be published. Required fields are marked *