ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೆ ರೌಡಿಶೀಟರ್ ಸಾವು


ನಗರದ ಶೇಷಾದ್ರಿಪುರಂನ ನಟರಾಜ್ ಥಿಯೇಟರ್ ಬಳಿ ಇಂದು ಬೆಳಿಗ್ಗೆ ಹಲ್ಲೆಗೊಳಗಾಗಿದ್ದ ರೌಡಿಶೀಟರ್​ ಗಣೇಶ (40) ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಸಾಂಧರ್ಬಿಕ ಚಿತ್ರ

ಬೆಂಗಳೂರು: ನಗರದ ಶೇಷಾದ್ರಿಪುರಂನ ನಟರಾಜ್ ಥಿಯೇಟರ್ ಬಳಿ ಇಂದು ಬೆಳಿಗ್ಗೆ ಹಲ್ಲೆಗೊಳಗಾಗಿದ್ದ ರೌಡಿಶೀಟರ್​ ಗಣೇಶ (40) ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಹಳೇ ದ್ವೇಷದ ಹಿನ್ನೆಲೆ  ಗಣೇಶನ ಮೇಲೆ ಲಾಂಗ್​ನಿಂದ ನಾಲ್ವರು ಹಲ್ಲೆ ಮಾಡಿದ್ದರು. ಇದರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ರೌಡಿಶೀಟರ್​ ಗಣೇಶ ಸಾವನ್ನಪ್ಪಿದ್ದಾನೆ.

ಸಾವಿನ ಮನೆಯನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ ಆರೋಪಿಯ ಬಂಧನ

ಒಂಟಿ ಮಹಿಳೆಯರು, ವೃದ್ದರನ್ನೇ ಟಾರ್ಗೇಟ್ ಮಾಡಿ ಚಿನ್ನಾಭರಣ ಎಗರಿಸ್ತಿದ್ದ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಹೆಗ್ಗನಹಳ್ಳಿ ನಿವಾಸಿ ಆನಂದ್ ಬಂಧಿತ ಆರೋಪಿ. ಆರೋಪಿ ಆನಂದ್ ಸಾವಿನ ಮನೆಯನ್ನೇ ಟಾರ್ಗೆಟ್ ಮಾಡಿಕೊಂಡು, ಬುಡುಬುಡುಕೆ ಹೇಳುತ್ತೇನೆ ಅಂತ ನೆಪದಲ್ಲಿ ಮನೆ ಬಳಿ ಬಂದಿದ್ದನು.

ಆಗ ಸ್ಮಶಾನದಲ್ಲಿ ಪೂಜೆ ಮಾಡಿಸುತ್ತೇನೆ ಅಂತ ಹೇಳಿ ದಂಪತಿಗಳ ಬಳಿಯಿದ್ದ ಚಿನ್ನಾಭರಣ 50 ಗ್ರಾಂ ಚಿನ್ನಾಭರಣ ಆರೋಪಿ ದೋಚಿದ್ದನು. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.