ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ, ರೋಚಕ ಗೆಲುವು ಸಾಧಿಸಿದೆ. ಸತತ ವಿಕೆಟ್​ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ತಂಡವನ್ನ, ದೀಪಕ್​ ಚಹರ್​ ಪಾರು ಮಾಡಿದ್ರು. ಆದರೆ ಈ ಗೆಲುವು ಕೇವಲ ಗೆದ್ದಂತಹ ಆಟಗಾರರು ಮಾತ್ರವಲ್ಲ, ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದೆ. ಹಾಗೆಯೇ ಇಂಗ್ಲೆಂಡ್​​ನಲ್ಲಿ ಬೀಡು ಬಿಟ್ಟಿರುವ ವಿರಾಟ್ ಕೊಹ್ಲಿ ನೇತೃತ್ವದ ತಂಡ ಕೂಡ ಸಂಭ್ರಮಿಸಿ, ಯುವ ಆಟಗಾರರಿಗೆ ಚಿಯರ್​​​ಅಪ್​​​ ಮಾಡಿದೆ. ಅಭ್ಯಾಸ ಪಂದ್ಯದ ನಡುವೆಯೇ ಶ್ರೀಲಂಕಾ – ಭಾರತ ಪಂದ್ಯ ವೀಕ್ಷಿಸುತ್ತಿದ್ದ ವಿರಾಟ್​ ಬಾಯ್ಸ್​, ದೀಪಕ್​ ಚಹರ್​ ಬೊಂಬಾಟ್​ ಬ್ಯಾಟಿಂಗ್​ ನೋಡಿ ಸಖತ್​ ಎಂಜಾಯ್​ ಮಾಡಿದ್ರು.

ವಿರಾಟ್ ​ಕೊಹ್ಲಿ, ಶಾರ್ದೂಲ್​ ಠಾಕೂರ್​ ಕುಳಿತು ಪಂದ್ಯ ವೀಕ್ಷಿಸುತ್ತಿದ್ರೆ, ಅಜಿಂಕ್ಯಾ ರಹಾನೆ ಮತ್ತು ಉಮೇಶ್​ ಯಾದವ್​ ನಿಂತೇ ಪಂದ್ಯವನ್ನ ಕಣ್ತುಂಬಿಸಿಕೊಂಡ್ರು. ಮತ್ತೊಂದೆಡೆ ರೋಹಿತ್​ ಶರ್ಮಾ, ಮಯಾಂಕ್ ಅಗರ್ವಾಲ್, ಮೊಹಮ್ಮದ್​ ಸಿರಾಜ್​, ಅಕ್ಷರ್ ಪಟೇಲ್​, ಹನುಮ ವಿಹಾರಿ ಕೂಡ ಪಂದ್ಯ ನೋಡ್ತಿರೋದನ್ನ ಬಿಸಿಸಿಐ ತನ್ನ ಟ್ವಿಟರ್​​ನಲ್ಲಿ ಹಂಚಿಕೊಂಡಿದೆ. ಇನ್ನು ವಿರಾಟ್​ ಕೊಹ್ಲಿ, ಟ್ವೀಟ್​ ಮೂಲಕ ಶುಭಾಶಯ ಕೂಡ ತಿಳಿಸಿದ್ದು, ಗ್ರೇಟ್​ ವಿನ್​ ಬೈ ದ ಬಾಯ್ಸ್​ ಅಂತ ಶಹಬ್ಬಾಸ್​ಗಿರಿ ಕೂಡ ನೀಡಿದ್ದಾರೆ.

The post ಲಂಕಾದಲ್ಲಿ ದೀಪಕ್ ಚಹರ್ ಘರ್ಜನೆ- ಇಂಗ್ಲೆಂಡ್​ನಿಂದ ಧವನ್ ಬಾಯ್ಸ್​ಗೆ ಅಭಿನಂದನೆ appeared first on News First Kannada.

Source: newsfirstlive.com

Source link