ಲಂಕಾ ಪ್ರವಾಸದಲ್ಲಿ ಮತ್ತೆ ಮೋಡಿ ಮಾಡುತ್ತಾ ‘ಕುಲ್ಚಾ’ ಜೋಡಿ..?

ಲಂಕಾ ಪ್ರವಾಸದಲ್ಲಿ ಮತ್ತೆ ಮೋಡಿ ಮಾಡುತ್ತಾ ‘ಕುಲ್ಚಾ’ ಜೋಡಿ..?

ಕುಲ್​ದೀಪ್​ ಯಾದವ್​, ಯಜುವೇಂದ್ರ ಚಹಲ್​. ಟೀಮ್​ ಇಂಡಿಯಾ ಕಂಡ ಸಕ್ಸಸ್​ಫುಲ್​ ಸ್ಪಿನ್​ ಜೋಡಿ. ಆದ್ರೆ, ಕಳೆದ ಕೆಲ ವರ್ಷಗಳ ಕಳಪೆ ಪ್ರದರ್ಶನದಿಂದ ಬೇರ್ಪಟ್ಟಿದ ಈ ಜೋಡಿ, ಇದೀಗ ಮತ್ತೆ ಮೋಡಿ ಮಾಡೋಕೆ ಸಜ್ಜಾಗಿದೆ. ಸಿಂಹಳೀಯರ ವಿರುದ್ಧದ ಹಣಾಹಣಿಯಲ್ಲಿ ಈ ಕುಲ್ಚಾ ಜೋಡಿ ಕಣಕ್ಕಿಳಿಯೋದು ಕನ್​ಫರ್ಮ್​​. ಇಷ್ಟಕ್ಕೂ ಜೋಡಿಗೆ ಮತ್ತೆ ಅವಕಾಶ ಸಿಗೋದಾದ್ರೂ ಯಾಕೆ..? ಇಲ್ಲಿದೆ ನೋಡಿ ಡಿಟೇಲ್ಸ್​​

ಶ್ರೀಲಂಕಾ ವಿರುದ್ಧದ ಸೀಮಿತ ಓವರ್​​ಗಳ ಸರಣಿಯಲ್ಲಿ ಪ್ರತಿಯೊಂದು ಸ್ಲಾಟ್​​ಗಳಿಗೂ ಇರುವ ಪೈಟ್​ ಎಲ್ಲಿರಿಗೂ ತಿಳಿದಿರೋ ವಿಚಾರವೇ. ಅದರಲ್ಲೂ ಸ್ಪಿನ್​​ ಕೋಟಾದಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಎದುರಾಗಿದೆ. ಯಾರಿಗೆ ಮಣೆ ಹಾಕಬೇಕು ಅನ್ನೋದು ಮ್ಯಾನೇಜ್​ಮೆಂಟ್​​​ ವಲಯದಲ್ಲಿ ಗೊಂದಲ ಮೂಡಿಸಿದೆ.

ಕ್ಯಾಪ್ಟನ್​ ಧವನ್​ ಮುಂದೆ ಸ್ಪಿನ್ನರ್​​ ಆಯ್ಕೆಯ ಕಗ್ಗಂಟು!
ವರುಣ್​ ಚಕ್ರವರ್ತಿ, ರಾಹುಲ್​ ಚಹರ್​ ಒಂದೆಡೆಯಾದ್ರೆ, ಬ್ಯಾಟಿಂಗ್​ ಸಾಮರ್ಥ್ಯವನ್ನ ಹೊಂದಿರುವ ಕೃನಾಲ್​ ಪಾಂಡ್ಯ ಇನ್ನೊಂದೆಡೆ. ಇದೆಲ್ಲದರ ನಡುವೇ ಟೀಮ್​ ಇಂಡಿಯಾ ಸಕ್ಸಸ್​ಫುಲ್​ ಸ್ಪಿನ್​ ಜೋಡಿಯಾದ ಕುಲ್​ದೀಪ್​ ಯಾದವ್​, ಯುಜುವೇಂದ್ರ ಚಹಲ್​ ಕೂಡ ಕಣದಲ್ಲಿದ್ದಾರೆ. ಈ ಪೈಪೋಟಿಯೇ ಟೀಮ್​ ಮ್ಯಾನೇಜ್​ಮೆಂಟ್​​ ಅನ್ನ ಇಕ್ಕಟ್ಟಿಗೆ ಸಿಲುಕಿಸಿರೋದು.

ಮತ್ತೆ ಒಟ್ಟಾಗಿ ಆಡ್ತಾರಾ ಕುಲ್​ದೀಪ್​, ಚಹಲ್​..?
ಈ ಪೈಪೋಟಿಯ ಹೊರತಾಗಿ ನಿರೀಕ್ಷೆ ಹೆಚ್ಚಿರೋದು ಕುಲ್ಚಾ ಜೋಡಿಯ ಮೇಲೆ..! ಅದು 2017ರಿಂದ 2019ರ ಅವಧಿ. ಎದುರಾಳಿ ಬ್ಯಾಟ್ಸ್​​ಮನ್​ಗಳನ್ನ ತಮ್ಮ ಸ್ಪಿನ್​ ತಂತ್ರದಿಂದಲೇ ಕಾಡಿದ್ದ ಈ ಜೋಡಿ,ಆಲ್​​ ಟೈಮ್​ ಸ್ಟಾರ್​ ಸ್ಪಿನ್ನರ್​​ಗಳಾಗಿದ್ದ ಆರ್​,ಅಶ್ವಿನ್​, ರವಿಂದ್ರ ಜಡೇಜಾಗೆ ಸೀಮಿತ ಓವರ್​​ಗಳ ತಂಡದಿಂದ ಗೇಟ್​ಪಾಸ್​ ನೀಡಿತ್ತು. ಪ್ಲೇಯಿಂಗ್​ ಇಲೆವೆನ್​ನ ಅವಿಭಾಜ್ಯ ಅಂಗ ಎಂದೇ ಈ ಜೋಡಿ ಗುರುತಿಸಿಕೊಂಡಿತ್ತು.

ಆದ್ರೆ, 2019ರ ವಿಶ್ವಕಪ್​ ಟೂರ್ನಿಯ ಇಂಗ್ಲೆಂಡ್​ ವಿರುದ್ಧದ ಏಕದಿನ ಪಂದ್ಯದ ಬಳಿಕ ಈ ಜೋಡಿಗೆ ಅವಕಾಶದ ಕೊರತೆ ಎದುರಾಯ್ತು. ಯುಜುವೇಂದ್ರ ಚಹಲ್​ ತಂಡದೊಂದಿಗೆ ಮುಂದುವರೆದ್ರೆ, ಕಳಪೆ ಫಾರ್ಮ್​​​​ಗೆ ಹೊರಳಿದ ಚೈನಾಮನ್​ ಸ್ಪಿನ್ನರ್​ ​ಕುಲ್​ದೀಪ್​ ಬೆಂಚ್​ಗೆ ಸೀಮಿತವಾದ್ರು. ಅದಾದ ಬಳಿಕ ಈ ಜೋಡಿ ಇದೀಗ ಲಂಕಾ ವಿರುದ್ಧದ ಸರಣಿಯಲ್ಲೇ ಒಟ್ಟಾಗಿ ಆಡೋ ಅವಕಾಶವನ್ನ ಪಡೆದುಕೊಂಡಿರೋದು.

‘ಕುಲ್ಚಾ’ ಜೋಡಿಯ ಪರ ವಿವಿಎಸ್​​ ಬ್ಯಾಟಿಂಗ್​..!
ಲಂಕಾ ಪ್ರವಾಸಕ್ಕೆ ತಂಡ ಪ್ರಕಟವಾದ ಬಳಿಕ ಯುಜುವೇಂದ್ರ ಚಹಲ್​ ನೀಡಿದ ಮೊದಲ ಪ್ರತಿಕ್ರಿಯೆಯೇ ಕುಲ್​​ದೀಪ್​ ಹಾಗೂ ತಾನು ಒಟ್ಟಾಗಿ ಆಡೋ ವಿಚಾರದ ಬಗ್ಗೆ. ಈ ಬಗ್ಗೆ ಮಾತನಾಡಿದ್ದ ಯುಜುವೇಂದ್ರ ಚಹಲ್​, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ನಾನು ಕುಲ್​ದೀಪ್​ ಒಟ್ಟಾಗಿ ಆಡೋದು ಖಚಿತ. ಬಹಳ ಅಂತರದ ಬಳಿಕ ಒಟ್ಟಾಗಿ ಆಡೋದಕ್ಕೆ ಸಜ್ಜಾಗಿದ್ದೇವೆ ಎಂದು ಹೇಳಿದ್ರು. ಇದೀಗ ಈ ಬಗ್ಗೆ ಮಾತನಾಡಿರುವ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​ ಕೂಡ ಈ ಜೋಡಿಯ ಪರ ಬ್ಯಾಟಿಂಗ್​ ನಡೆಸಿದ್ದಾರೆ.

ಅಂಕಿ-ಅಂಶಗಳು ಕೂಡ ಕುಲ್​ದೀಪ್​- ಚಹಲ್​ ಪರವಾಗಿಯೇ ಇವೆ. ಚಹಲ್​ ಏಕದಿನ ಪಂದ್ಯಗಳಲ್ಲಿ 5.21ರ ಎಕಾನಮಿ ಹೊಂದಿದ್ರೆ, ಕುಲ್​ದೀಪ್​ ಎಕಾನಮಿ 5.22 ಆಗಿದೆ. ಇನ್ನು ಟಿ20 ಮಾದರಿಯಲ್ಲಿ ಚಹಲ್​ 8.4 ಹಾಗೂ ಕುಲ್​ದೀಪ್​ 7.11ರ ಎಕಾನಮಿ ಹೊಂದಿದ್ದಾರೆ. ವಿಕೆಟ್​ ಕಬಳಿಕೆಯ ವಿಚಾರದಲ್ಲೂ ಇಬ್ಬರೂ ಸಾಮರ್ಥ್ಯ ಮರೆದಿದ್ದಾರೆ. ಆದ್ರೆ, ಸ್ಥಾನಕ್ಕೆ ಪೈಪೋಟಿ ನಡೆಸ್ತಾ ಇರೋ ಉಳಿದ ಆಟಗಾರರಿಗೆ ಅನುಭವದ ಕೊರತೆಯಿದೆ. ಹೀಗಾಗಿ ಸಿಂಹಳೀಯರ ಬೇಟೆಗೆ ಈ ಜೋಡಿಗೆ ಮಣೆ ಹಾಕೋದು ಎನ್ನಲಾಗ್ತಿದೆ.

ಈಗಾಗಲೇ ಕೋಚ್​ ರಾಹುಲ್​ ದ್ರಾವಿಡ್​​ ಕೂಡ ಎಲ್ಲಾ ಯುವ ಆಟಗಾರರಿಗೂ ಅವಕಾಶ ಸಿಗಲ್ಲ ಎಂದು ನೇರವಾದ ಮಾತುಗಳಲ್ಲೇ ಹೇಳಿದ್ದಾರೆ. ಇದೂ ಕೂಡ ಅನುಭವಿಗಳಾದ ಕುಲ್ಚಾ ಜೋಡಿಗೆ ಮಣೆ ಹಾಕೋ ಸಾಧ್ಯತೆಯಿದೆ ಅನ್ನೋ ಸುಳಿವನ್ನ ನೀಡಿದೆ. ಕಳೆದ 2 ವರ್ಷಗಳಿಂದ ಬೇರ್ಪಟ್ಟಿರುವ ಈ ಜೋಡಿ ಲಂಕಾ ಸರಣಿಯಲ್ಲಿ ಒಟ್ಟಿಗೆ ಆಡುತ್ತಾ..? ಕಾದು ನೋಡಬೇಕಿದೆ.

The post ಲಂಕಾ ಪ್ರವಾಸದಲ್ಲಿ ಮತ್ತೆ ಮೋಡಿ ಮಾಡುತ್ತಾ ‘ಕುಲ್ಚಾ’ ಜೋಡಿ..? appeared first on News First Kannada.

Source: newsfirstlive.com

Source link