ದೀಪಕ್ ಚಹಾರ್ ಹಾಗೂ ಸೂರ್ಯಕುಮಾರ್ ಭರ್ಜರಿ ಆಟದ ಪರಿಣಾಮ ಭಾರತ ಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್ ಗಳಲ್ಲಿ 275 ರನ್ ಗಳನ್ನು ಗಳಿಸಿ ಭಾರತದ ಗೆಲುವಿಗೆ 276 ರನ್​ಗಳ ಗುರಿ ನೀಡಿತ್ತು.

ಕಳೆದ ಪಂದ್ಯದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದ್ದ ಪೃಥ್ವಿ ಶಾ ಹಾಗೂ ಇಶಾನ್​ ಕಿಶಾನ್ ಈ ಪಂದ್ಯದಲ್ಲಿ ಬೇಗನೇ ವಿಕೆಟ್​ ಒಪ್ಪಿಸಿದ್ರು. ಧವನ್ ಹಾಗೂ ಮನೀಷ್ ಪಾಂಡೆ ಕೂಡ ಹೆಚ್ಚು ಸಮಯ ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಈ ವೇಳೆ ಅರ್ಧ ಶತಕ ಸಿಡಿಸಿದ ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಆಸರೆಯಾದ್ರು. ಸೂರ್ಯ ಕುಮಾರ್ ಔಟ್​ ಬಳಿಕ ತಂಡ ಸೋಲೋ ಸಾಧ್ಯತೆ ಸೃಷ್ಟಿಯಾಗಿತ್ತು. ಆದ್ರೆ ಸಮಯೋಚಿತ 69 ರನ್​ಗಳಿಸಿದ ದೀಪಕ್ ಚಾಹರ್ ಟೀಮ್ ಇಂಡಿಯಾಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ ಸರಣಿಯನ್ನೂ ಗೆದ್ದುಕೊಂಡಿದೆ.

The post ಲಂಕಾ ವಿರುದ್ಧದ ಟೀಂ ಇಂಡಿಯಾಗೆ ದಿಗ್ವಿಜಯ-ಛಲ ಬಿಡದ ಹೋರಾಟಕ್ಕೆ ಒಲಿದ ರಿಮಾರ್ಕಬಲ್​ ವಿಕ್ಟರಿ! appeared first on News First Kannada.

Source: newsfirstlive.com

Source link