ಲಂಕಾ ವಿರುದ್ಧದ ಸರಣಿಯಲ್ಲಿ ರಹಾನೆ, ಪೂಜಾರ​​ಗೆ ಇಲ್ಲ ಜಾಗ -ಇವ್ರಿಗೆ BCCI ಕೊಟ್ಟ ಹೊಸ ಟಾಸ್ಕ್​ ಏನು ಗೊತ್ತಾ..?


ಫೆಬ್ರವರಿ 24 ರಿಂದ ನಡೆಯಲಿರುವ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಗೆ ಹಿರಿಯ ಆಟಗಾರರಾದ ಅಜಿಂಕ್ಯಾ ರಜಾನೆ, ಚೆತೇಶ್ವರ್ ಪೂಜಾರ ಹಾಗೂ ವೃದ್ಧಿಮಾನ್ ಶಾ, ಇಶಾಂತ್ ಶರ್ಮಾರನ್ನ ಕೈಬಿಡಲಾಗಿದೆ.

ರಹಾನೆ-ಪೂಜಾರಗೆ ಕೊಕ್ ಕೊಡಲು ಕಾರಣ ಏನು..?
ಕಳೆದ ತಿಂಗಳು ನಡೆದ ಸೌತ್​ ಆಫ್ರಿಕಾ ಸರಣಿಯಲ್ಲೇ ರಹಾನೆ-ಪೂಜಾರ ಬೆಂಚ್​​ಗೆ ಸೀಮಿತವಾಗ್ತಾರೆ ಎಂದು ಹೇಳಲಾಗಿತ್ತು. ಹಾಗಿದ್ರೂ ಆಟಗಾರರ ಮೇಲೆ ನಂಬಿಕೆ ಇಟ್ಟಿದ್ದ ಮ್ಯಾನೇಜ್​ಮೆಂಟ್​ ಅವಕಾಶಗಳ ಮೇಲೆ ಅವಕಾಶ ನೀಡಿತ್ತು. ಆದರೆ ಈ ಹಿರಿಯ ಆಟಗಾರರು ಮ್ಯಾನೇಜ್ಮೆಂಟ್​​ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ವಿಫಲರಾದ್ರು. ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿ ತಂಡದ ಹಿನ್ನಡೆಗೂ ಕಾರಣರಾದ್ರು. ಹೀಗಾಗಿ ಈ ಇಬ್ಬರನ್ನ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯ ಆಯ್ಕೆಗೆ ಪರಿಗಣಿಸಿಲ್ಲ.

News First Live Kannada


Leave a Reply

Your email address will not be published. Required fields are marked *