ಲಂಕಾ ವಿರುದ್ಧ ಟಿ-20 ಸರಣಿ; ನಿಮ್ಮ ಪ್ರಕಾರ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಹೇಗಿರಬೇಕು..?


ಶ್ರೀಲಂಕಾ ವಿರುದ್ಧ ಟಿ20 ಸರಣಿ ಹತ್ತಿರವಾದಂತೆ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​​ ಗೊಂದಲಕ್ಕೆ ಸಿಲುಕಿದೆ. ಪ್ರಮುಖವಾಗಿ ನಾಲ್ಕು ಪ್ರಶ್ನೆಗಳು ತಂಡವನ್ನ ಕಾಡ್ತಿದ್ದು, ಅವುಗಳಿಗೆ ಉತ್ತರದ ಹುಡುಕಾಟ ಜೋರಾಗಿ ನಡೆದಿದೆ.

ಇಂಡೋ-ಶ್ರೀಲಂಕಾ ಟಿ20 ಸರಣಿ ಆರಂಭಕ್ಕೆ ಒಂದೇ ಒಂದು ದಿನ ಬಾಕಿ. ಮೊದಲ ಟಿ20 ಕದನಕ್ಕೆ ಲಖನೌ ಸಜ್ಜಾಗಿದ್ದು, ಟೀಮ್​ ಇಂಡಿಯಾ ಭರ್ಜರಿ ಸಮರಾಭ್ಯಾಸವನ್ನೂ ಆರಂಭಿಸಿದೆ. ಇದರ ಜೊತೆಗೆ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಕಗ್ಗಂಟು ಮತ್ತೆ ಸೃಷ್ಠಿಯಾಗಿದೆ. ಇರೋ 18 ಆಟಗಾರರಲ್ಲಿ ಆಡೋ 11 ಜನ ಯಾರು ಅನ್ನೋದು ತಲೆನೋವು ಸೃಷ್ಠಿಸಿದೆ.

ರೋಹಿತ್​ ಜೊತೆ ಇನ್ನಿಂಗ್ಸ್​ ಆರಂಭಿಸೋದು ಯಾರು?
ಟೀಮ್​ ಇಂಡಿಯಾ ಪರ ನಾಯಕ ರೋಹಿತ್​ ಶರ್ಮಾ ಇನ್ನಿಂಗ್ಸ್​ ಆರಂಭಿಸೋದು ಕನ್​ಫರ್ಮ್​. ಆದ್ರೆ, ಹಿಟ್​ಮ್ಯಾನ್​ ಜೊತೆಗಾರ ಯಾರು ಅನ್ನೋದು ಈಗ ಹುಟ್ಟಿರುವ ಪ್ರಶ್ನೆಯಾಗಿದೆ. ಇಶಾನ್​ ಕಿಶನ್​, ಋತುರಾಜ್​ ಗಾಯಕ್ವಾಡ್​​ ತಂಡದಲ್ಲಿದ್ದಾರೆ. ವಿಂಡೀಸ್ ಸರಣಿಯಲ್ಲಿ ಆರಂಭಿಕನಾಗಿ ಇಶಾನ್​ ಕಿಶನ್​ ಇಂಪ್ಯಾಕ್ಟ್​ಫುಲ್​ ಪ್ರದರ್ಶನ ನೀಡಿಲ್ಲ. ಹೀಗಾಗಿ ಈಗಲಾದ್ರೂ ಋತುರಾಜ್​ ಗಾಯಕ್ವಾಡ್​​ಗೆ ಅವಕಾಶ ಸಿಗುತ್ತಾ ಎಂಬ ಕುತೂಹಲ ಹುಟ್ಟಿದೆ.

ವಿಕೆಟ್​​ ಕೀಪರ್​ ಕೋಟಾದಲ್ಲಿ ಯಾರಿಗೆ ಸ್ಥಾನ?
ಖಾಯಂ ವಿಕೆಟ್​​ ಕೀಪರ್​​ ರಿಷಭ್​ ಪಂತ್​ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇದೀಗ ಇಶಾನ್​ ಕಿಶನ್​, ಸಂಜು ಸ್ಯಾಮ್ಸನ್​ಗೆ ಸ್ಥಾನ ಕಲ್ಪಿಸಲಾಗಿದೆ. ವಿಕೆಟ್​​ ಕೀಪಿಂಗ್​ ಜೊತೆಗೆ ಬ್ಯಾಟಿಂಗ್​ ಆರ್ಡರ್​ ಅನ್ನೋ ಗಮನದಲ್ಲಿರಿಸಿಕೊಂಡು ಈ ಇಬ್ಬರ ನಡುವೆ ಬೆಸ್ಟ್​ ಚಾನ್ಸ್​​ ಆಯ್ಕೆ ಮಾಡಬೇಕಾದ ಸವಾಲು ಮ್ಯಾನೇಜ್​ಮೆಂಟ್​ ಮುಂದಿದೆ.

ಸ್ಪಿನ್ನರ್​​ಗಳ ಆಯ್ಕೆಯಲ್ಲೂ ಇದೆ ಗೊಂದಲ..!
ಟಿ20 ಮಾದರಿಯಲ್ಲಿ ಇಬ್ಬರು ಸ್ಪಿನ್ನರ್​​ಗಳೊಂದಿಗೆ ಕಣಕ್ಕಿಳಿಯೋದು ಟೀಮ್​ ಇಂಡಿಯಾದ ಫಿಕ್ಸ್​ಡ್​​ ಟೆಪ್ಲೇಂಟ್​ ಆಗಿದೆ. ಈಗ ತಂಡದಲ್ಲಿ ರವಿ ಬಿಷ್ನೋಯ್​, ಕುಲ್​ದೀಪ್​ ಯಾದವ್​, ಯುಜುವೇಂದ್ರ ಚಹಲ್​, ರವೀಂದ್ರ ಜಡೇಜಾ ಇದ್ದಾರೆ. ಈ ನಾಲ್ವರಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ಗೊಂದಲವೂ ತಂಡದಲ್ಲಿದೆ.

ಇರೋ 6 ವೇಗಿಗಳಲ್ಲಿ ಆಡೋ ಮೂವರು ಯಾರು?
ಬರೋಬ್ಬರಿ 6 ಜನ ವೇಗಿಗಳಿಗೆ ಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಜಸ್​ಪ್ರಿತ್​ ಬೂಮ್ರಾ, ಭುವನೇಶ್ವರ್​​​ ಕುಮಾರ್​​​ ಅವರಂತ ಅನುಭವಿಗಳ ನಡುವೆ ಆವೇಶ್​ ಖಾನ್​, ಮೊಹಮ್ಮದ್​ ಸಿರಾಜ್​, ಹರ್ಷಲ್​ ಪಟೇಲ್​, ದೀಪಕ್​ ಚಹರ್ ರಂತಹ ಯಂಗ್​​ಸ್ಟರ್​​ಗಳಿದ್ದಾರೆ. ಇರುವ ಮೂರು ಸ್ಲಾಟ್​​ಗಳಿಗೆ 6 ಜನರ ನಡುವೆ ಪೈಪೋಟಿ ಇದ್ದು ಮ್ಯಾನೇಜ್​ಮೆಂಟ್​​ನ ಆಯ್ಕೆಯಾರಾಗಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

News First Live Kannada


Leave a Reply

Your email address will not be published. Required fields are marked *