ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದು ಫುಲ್​ ಜೋಷ್​​ನಲ್ಲಿರುವ ಶಿಖರ್ ಧವನ್ ಪಡೆ, ಇಂದು ಮತ್ತೊಂದು ಗೆಲುವಿಗೆ ಹೆಜ್ಜೆ ಇಟ್ಟಿದೆ. ಆದರೆ ತಂಡದಲ್ಲಿ ಕ್ಯಾಪ್ಟನ್ ಧವನ್ ಬದಲಾವಣೆ ಮಾಡ್ತಾರಾ? ಇಲ್ಲ ಅದೇ ಗೆಲುವಿನ ತಂಡವನ್ನ ಮುಂದುವರೆಸುತ್ತಾರಾ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.

ಮೊದಲ ಏಕದಿನ ಪಂದ್ಯದಲ್ಲಿ ಯಂಗ್​ ಟೀಮ್​ ಇಂಡಿಯಾ, ಲಂಕನ್ನರನ್ನ ಬಗ್ಗು ಬಡಿದಿದೆ. ಇಂದು ನಡೆಯುವ 2ನೇ ಏಕದಿನ ಪಂದ್ಯದಲ್ಲಿ ಸಿಂಹಳೀಯರ ಬೇಟೆಗೆ ಸಜ್ಜಾಗ್ತಿರುವ ಧವನ್ ಪಡೆ, ಸರಣಿ ವಶಪಡಿಸಿಕೊಳ್ಳಲು ತವಕದಲ್ಲಿದೆ. ಹೌದು..! ಇಂದಿನ ಪಂದ್ಯದಲ್ಲಿ ಭಾರತ, ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ.

ಲಂಕಾ ಪ್ರವಾಸದಲ್ಲಿ ಟೀಮ್​ ಇಂಡಿಯಾ, ಏಕದಿನ-ಟಿ20 ಸರಣಿ ಸೇರಿ ಆಡೋದು 6 ಪಂದ್ಯಗಳನಷ್ಟೆ. ಶಾರ್ಟ್​​ ಸೀರಿಸ್​ಗೆ ಟೀಮ್ ಇಂಡಿಯಾದಲ್ಲಿ ಆಯ್ಕೆಯಾಗಿರೋದು, ಒಟ್ಟು 24 ಮಂದಿ ಆಟಗಾರರು. ಸರಣಿಯಲ್ಲಿ ಯಾವ ಆಟಗಾರನೂ ನಿರಾಸೆಗೊಳಗಾಗಬಾರದು ಅಂತ, ಎಲ್ಲಾ ಆಟಗಾರರಿಗೂ ಚಾನ್ಸ್​ ನೀಡೋ ಚಿಂತನೆಯಲ್ಲಿ, ಕೋಚ್ ರಾಹುಲ್​ ದ್ರಾವಿಡ್​​ ಇದ್ದಾರೆ. ಹೀಗಾಗಿ ಇವತ್ತಿನ ಪಂದ್ಯದಲ್ಲಿ, ಒಂದೆರೆಡು ಬದಲಾವಣೆ ಆದ್ರೂ, ಆಶ್ಚರ್ಯ ಪಡಬೇಕಿಲ್ಲ.

ಫೇಲಾದ ಮನೀಷ್​ ಪಾಂಡೆ – ಕಣಕ್ಕಿಳಿತಾರಾ ಸಂಜು-ರಾಣಾ.?
ಮನೀಷ್​ ಪಾಂಡೆ ಸಿಕ್ಕ ಅವಕಾಶವನ್ನ ಮತ್ತೆ ಕೈ ಚೆಲ್ಲಿದ್ದಾರೆ. ಹೀಗಾಗಿ ಫ್ಲಾಪ್​ ಆದ ಮನೀಷ್​​ರನ್ನ ಇಂದು ಕೈಬಿಡುವ ಸಾಧ್ಯತೆ ಇದೆ. ಮನೀಷ್​​ ಜಾಗಕ್ಕೆ ಎಡಗೈ ಬ್ಯಾಟ್ಸ್​ಮನ್​ ನಿತೀಶ್​ ರಾಣಾ ಅಥವಾ ಇಂಜುರಿಯಿಂದಾಗಿ ಮೊದಲ ಪಂದ್ಯವನ್ನ ಮಿಸ್​ ಮಾಡ್ಕೊಂಡಿದ್ದ​ ಸಂಜು ಸ್ಯಾಮ್ಸನ್, ಕಣಕ್ಕಿಳಿಯುವ ಸಾಧ್ಯತೆ ಇದೆ.

ಬೌಲಿಂಗ್​​ ವಿಭಾಗಕ್ಕೂ ಸರ್ಜರಿಯಾಗೋ ನಿರೀಕ್ಷೆಯಿದೆ. 2 ವರ್ಷಗಳ ಬಳಿಕ ಒಂದಾದ ಕುಲ್ಚಾ ಜೋಡಿ, ಭರ್ಜರಿ ಕಮ್​ಬ್ಯಾಕ್​ ಮಾಡಿದೆ. ಆದರೆ ಈ ಪಂದ್ಯದಲ್ಲಿ ಇಬ್ಬರೂ ಮತ್ತೆ ಜೊತೆಯಾಗಿ ಆಡ್ತಾರಾ..? ಅಥವಾ ವರುಣ್ ಚಕ್ರವರ್ತಿಗೆ ಚಾನ್ಸ್​ ನೀಡ್ತಾರಾ ಅನ್ನೋದನ್ನೂ ನೋಡಬೇಕಿದೆ. ಫಾಸ್ಟ್ ಬೌಲಿಂಗ್ ಡಿಪಾರ್ಟ್​ಮೆಂಟ್​ನಲ್ಲಿ ನವದೀಪ್​ ಸೈನಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ ಯಾರನ್ನ ಡ್ರಾಪ್ ಮಾಡ್ತಾರೆ ಅನ್ನೋದು, ಕುತೂಹಲ ಕೆರಳಿಸಿದೆ. ಒಟ್ನಲ್ಲಿ ಪ್ರಯೋಗಕ್ಕೆ ಮುಂದಾಗಿರುವ ಮ್ಯಾನೇಜ್​ಮೆಂಟ್​, ಏನೆಲ್ಲಾ ಬದಲಾವಣೆ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

The post ಲಂಕಾ ವಿರುದ್ಧ 2ನೇ ಏಕದಿನ ಪಂದ್ಯ- ಫೇಲಾದ ಪಾಂಡೆ.. ಸಂಜು-ರಾಣಾಗೆ ಚಾನ್ಸ್​​? appeared first on News First Kannada.

Source: newsfirstlive.com

Source link