ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ಯಂಗ್ ಇಂಡಿಯಾ ಪ್ರಕಟಗೊಂಡಿದೆ. ಯುವ ಹಾಗೂ ಹೊಸ ಪ್ರತಿಭೆಗಳಿಗೆ ಮಣೆಹಾಕಿರುವ ಆಯ್ಕೆ ಸಮಿತಿ, ಅನುಭವಿ ಶಿಖರ್ ಧವನ್​ಗೆ ನಾಯಕತ್ವದ ಪಟ್ಟ ಕಟ್ಟಿದೆ. ಬಹುತೇಕ ಹೊಸ ಮುಖಗಳಿಗೆ ಬುಲಾವ್ ನೀಡಿರುವ ಬಿಸಿಸಿಐ, ಟೀಮ್ ಇಂಡಿಯಾ ಭವಿಷ್ಯವನ್ನ ಗಮನದಲ್ಲಿಟ್ಟುಕೊಂಡೇ, ಆರು ಮಂದಿ ಫ್ಯೂಚರ್​​​ ಸ್ಟಾರ್​ಗಳಿಗೆ ಚೊಚ್ಚಲ ಕರೆ ನೀಡಿದೆ. ಈ ಪೈಕಿ ಮೂವರು ಬ್ಯಾಟ್ಸ್​ಮನ್ಸ್, ಓರ್ವ ಆಲ್​ರೌಂಡರ್, ಓರ್ವ ವೇಗಿ, ಸ್ಪಿನ್ನರ್​ ಆಗಿದ್ದಾರೆ.

                                                                   01 
                                                       ದೇವದತ್ ಪಡಿಕ್ಕಲ್
ದೇವದತ್​ ಪಡಿಕ್ಕಲ್, ಕರ್ನಾಟಕ ತಂಡದ ಸ್ಟಾರ್​ ಬ್ಯಾಟ್ಸ್​ಮನ್.. ಕಳೆದ ಮೂರು ವರ್ಷಗಳಿಂದ ಕರ್ನಾಟದ ಸೆನ್ಸಷನ್ ಬ್ಯಾಟ್ಸ್​ಮನ್​​ ಆಗಿರುವ ಪಡಿಕ್ಕಲ್, ದೇಶಿ ಕ್ರಿಕೆಟ್​ನಲ್ಲಿ ರನ್ ಮಷಿನ್ ಅಂತಾನೇ ಖ್ಯಾತಿ ಪಡೆದಿದ್ದಾರೆ. 2020 ಮುಷ್ತಾಕ್ ಆಲಿ, ವಿಜಯ್ ಹಜಾರೆ ಟೂರ್ನಿಯ ಲೀಡಿಂಗ್ ರನ್ ಸ್ಕೋರರ್ ಆಗಿದ್ದ ಪಡಿಕ್ಕಲ್, ಮೋಸ್ಟ್​ ಕನ್ಸಿಸ್ಟೆನ್ಸಿ ಬ್ಯಾಟಿಂಗ್​​ನಿಂದಲೇ, ಎಲ್ಲರ ಗಮನ ಸೆಳೆದಿದ್ದಾರೆ. 2020ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ್ದ ಎಮರ್ಜಿಂಗ್ ಪ್ಲೇಯರ್, ಸಾಲಿಡ್ ಪರ್ಫಾಮೆನ್ಸ್ ನೀಡಿದ್ದರು. ಇದಾದ ನಂತರ ಮತ್ತೊಮ್ಮೆ 2021ರ ವಿಜಯ್ ಹಜಾರೆ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ ಪಡಿಕ್ಕಲ್, ಪ್ರಸಕ್ತ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಚೊಚ್ಚಲ ಶತಕ ದಾಖಲಿಸಿ ಗಮನ ಸೆಳೆದಿದ್ದರು. ಈ ವೈಟ್​ಬಾಲ್ ಕ್ರಿಕೆಟ್​​ನಲ್ಲಿ ದಿನದಿಂದ ದಿನಕ್ಕೆ ಪಳಗುತ್ತಿರುವ ಪಡಿಕ್ಕಲ್, ಟಿ20, ಏಕದಿನ ಫಾರ್ಮೆಟ್​​ಗೆ ಪರ್ಫೆಕ್ಟ್​ ಪ್ಲೇಯರ್.!

                                                              02
                                                     ನಿತೀಶ್ ರಾಣಾ
ಸದ್ಯ ಟೀಮ್ ಇಂಡಿಯಾ ಕರೆ ಸ್ವೀಕರಿಸಿರುವ ಹೊಸ ಮುಖಗಳ ಪೈಕಿ, ಹೆಚ್ಚು ಚಿರಪರಿಚಿತ ಹೆಸರು ನಿತೀಶ್ ರಾಣಾ, ದೇಶಿ ಕ್ರಿಕೆಟ್​ನಲ್ಲಿ ಅತ್ಯದ್ಬುತ ಪ್ರದರ್ಶನ ನೀಡಿದ್ದಾರೆ. ಅಷ್ಟೆ ಅಲ್ಲ..! ಕೆಕೆಆರ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್ ಆಗಿರುವ ನಿತೀಶ್, ವೈಟ್​​ಬಾಲ್ ಕ್ರಿಕೆಟ್​ನ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್ ಆಗಿದ್ದಾರೆ. ಪ್ರಸಕ್ತ ವರ್ಷದ ಐಪಿಎಲ್​ನಲ್ಲಿ ಅರಂಭದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಈ ಲೆಫ್ಟ್​ಹ್ಯಾಂಡ್​ ಬ್ಯಾಟ್ಸ್​ಮನ್, ಕೊಲ್ಕತ್ತಾ ನೈಟ್​​ ರೈಡರ್ಸ್​ನ ಟಾಪ್ ಸ್ಕೋರರ್ ಆಗಿದ್ದಾರೆ. ಕಳೆದ ಮೂರು ವರ್ಷಗಳ ಪ್ರದರ್ಶನದ ಪರಿಣಾಮ, ರಾಣಾಗೆ ಲಂಕಾ ಪ್ರವಾಸದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

                                                              03
                                               ರುತುರಾಜ್ ಗಾಯಕ್ವಾಡ್​​
ಚೆನ್ನೈ ಸೂಪರ್ ಕಿಂಗ್ಸ್​ನ ಪ್ರಬುದ್ಧ ಯುವ ಆಟಗಾರ ರುತುರಾಜ್ ಗಾಯಕ್ವಾಡ್​​​, ಕ್ಲಾಸ್ ಜೊತೆಗೆ ಮಾಸ್​ ಬ್ಯಾಟಿಂಗ್ ಮಾಡಬಲ್ಲ ಈತನ ಟೆಕ್ನಿಗ್ ಬಗ್ಗೆ, ಹೇಳಬೇಕಾದ ಅಗತ್ಯ ಇಲ್ಲ..! ಚೆನ್ನೈ ಸೂಪರ್​ ಕಿಂಗ್ಸ್​ನ ಆರಂಭಿಕನಾಗಿ ಸಾಲಿಡ್ ಪರ್ಫಾಮೆನ್ಸ್ ನೀಡಿರುವ ರುತುರಾಜ್, 7 ಇನ್ನಿಂಗ್ಸ್​ಗಲ್ಲಿ ಎರಡು ಅರ್ಥಶತಕಗಳನ್ನ ಒಳಗೊಂಡ 196 ರನ್ ಕಲೆಹಾಕಿದ್ದಾರೆ. ಇನ್ನು ದೇಶಿ ಕ್ರಿಕೆಟ್​​ನಲ್ಲೂ ಬೊಂಬಾಟ್ ಪ್ರದರ್ಶನ ನೀಡಿರುವ ರುತುರಾಜ್, ಶ್ರೀಲಂಕಾ ಸರಣಿಯಲ್ಲಿ ಅತ್ಯದ್ಬುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

                                                            04
                                                   ಕೃಷ್ಣಪ್ಪ ಗೌತಮ್
ಪ್ರಸಕ್ತ ಐಪಿಎಲ್​​​ನಲ್ಲಿ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳದ ಕೃಷ್ಣಪ್ಪ ಗೌತಮ್, ಕರ್ನಾಟಕ ತಂಡದ ಸ್ಟಾರ್​ ಆಲ್​ರೌಂಡರ್.! 2016 ರಣಜಿ ಟ್ರೋಫಿಯಿಂದ ಉತ್ತಮ ಪ್ರದರ್ಶನ ನೀಡ್ತಿರುವ ಕೃಷ್ಣಪ್ಪ ಗೌತಮ್, ತನ್ನ ಆಫ್​​ ಸ್ಪಿನ್​​​ ಮೂಲಕ ಸ್ಟಾರ್​ ಬ್ಯಾಟ್ಸ್​ಮನ್​ಗಳನ್ನ ಕಾಡೋದರ ಜೊತೆಗೆ, ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್​​ನಿಂದ ಗೆಲುವು ತಂದುಕೊಡಬಲ್ಲ ತಾಕತ್ತಿದೆ. ಅದ್ರಲ್ಲೂ ಲಂಕಾ ವಿರುದ್ಧದ ಪಂದ್ಯಗಳು ಪ್ರೇಮದಾಸ ಪಿಚ್​ನಲ್ಲಿ ನಡೆಯುತ್ತಿದ್ದು, ಈ ಸ್ಪಿನ್ ಪಿಚ್​ನಲ್ಲಿ ಗೌತಮ್ ಜಾದೂ ನಡೆಯೋ ಸಾಧ್ಯತೆ ಇದೆ..

                                                                05
                                                     ವರುಣ್ ಚಕ್ರವರ್ತಿ
ತಮಿಳುನಾಡು ಪ್ರೀಮಿಯರ್​ ಲೀಗ್​ನಲ್ಲಿ ಬೆಳಕಿಗೆ ಬಂದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಪ್ರಯೋಗಾತ್ಮಕ ಎಸೆತಗಳಿಂದ ಐಪಿಎಲ್​​ನಲ್ಲಿ ಛಾಪು ಮೂಡಿಸಿದ ಆಟಗಾರ.! 2020ರ ಐಪಿಎಲ್ ಟೂರ್ನಿಯಲ್ಲಿ ಅದ್ಬುತ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಈತ, ಘಟಾನುಘಟಿ ಬ್ಯಾಟ್ಸ್​ಮನ್​ಗಳ ನಿದ್ದೆ ಗೆಡಿಸಿದ್ದ.. ಈ ಸೀಸನ್​ನಲ್ಲಿ 17 ವಿಕೆಟ್ ಉರುಳಿಸಿದ್ದ ಚಕ್ರವರ್ತಿ, ಅದೇ ವರ್ಷ ಆಸ್ಟ್ರೇಲಿಯಾ ಪ್ರವಾಸದ ಟಿಕೆಟ್ ಗಿಟ್ಟಿಸಿದ್ದರು. ಆದ್ರೆ ಫಿಟ್ನೆಸ್ ಸಮಸ್ಯೆಯಿಂದ ಹೊರಬಿದ್ದಿದ್ದ ವರುಣ್, ಈಗ ಲಂಕಾ ಪ್ರವಾಸದ ತಂಡದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ..! ಒಂದೇ ಒಂದು ದೇಶಿ ಕ್ರಿಕೆಟ್​ ಆಡದೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟರ್, ವರುಣ್ ಚಕ್ರವರ್ತಿ.. ಅದ್ರಲ್ಲೂ ಥೇಟ್​ ಲಂಕನ್​​ ಸ್ಪಿನ್ನರ್​​ ಅಂಜತಾ ಮೆಂಡಿಸ್​ ಬೌಲಿಂಗ್ ಶೈಲಿಯಲ್ಲೇ ಬೌಲಿಂಗ್ ಮಾಡುವ ಚಕ್ರವರ್ತಿ, ದ್ವೀಪರಾಷ್ಟ್ರದಲ್ಲಿ ಚಾನ್ಸ್ ಸಿಕ್ಕರೆ ಲಂಕಾ ದಹನ ಮಾಡುವ ನಿರೀಕ್ಷೆಯಲ್ಲಿದ್ದಾರೆ.

                                                             06
                                                ಚೇತನ್ ಸಕಾರಿಯಾ
ಐಪಿಎಲ್ ಸೀಸನ್​​ನ ಮೊದಲ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದ ಎಡಗೈ ವೇಗಿ ಚೇತನ್ ಸಕಾರಿಯಾ, ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ರಾಜಸ್ಥಾನ್ ರಾಯಲ್ಸ್​ ತಂಡದ ನಿರ್ಣಾಯಕ ಡೆತ್ ಬೌಲರ್ ಕೂಡ ಆಗಿದ್ದಾರೆ. ಅಷ್ಟೇ ಅಲ್ಲ.! ಇತ್ತೀಚಿಗೆ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲೂ 4.90ರ ಏಕಾನಮಿಯಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದ ಚೇತನ್ ಸಕಾರಿಯಾ, 5 ಪಂದ್ಯಗಳಿಂದ 12 ವಿಕೆಟ್ ಉರುಳಿಸಿದ್ದಾರೆ. ನಂತರ ಐಪಿಎಲ್​​ನಲ್ಲಿ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡಿರುವ ಸಕಾರಿಯಾ, ಈಗ ಟೀಮ್ ಇಂಡಿಯಾಕ್ಕೆ ಆಯ್ಕೆ ಆಗಿದ್ದಾರೆ.

ಒಟ್ನಲ್ಲಿ.. ಐಪಿಎಲ್​ ಹಾಗೂ ದೇಶಿ ಕ್ರಿಕೆಟ್​​​ನಲ್ಲಿ ಕಮಾಲ್ ಮಾಡಿರೋ ಈ ಯಂಗ್ ಪ್ಲೇಯರ್ಸ್​, ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲೂ ಪ್ರತಿಭೆ ಅನಾವರಣಗೊಳಿಸಿ, ಮತ್ತಷ್ಟು ಎತ್ತರಕ್ಕೆ ಏರಲಿ ಅನ್ನೋದೆ ಕ್ರಿಕೆಟ್ ಅಭಿಮಾನಿಗಳ ಆಶಯ…

The post ಲಂಕಾ ಸರಣಿಗೆ ಈ 6 ಮಂದಿ ಯುವ ಕ್ರಿಕೆಟಿಗರು ಆಯ್ಕೆಯಾಗಿದ್ದೇಗೆ..? appeared first on News First Kannada.

Source: newsfirstlive.com

Source link