ಹಾಸನ: ಬಿಲ್ ಕಲೆಕ್ಟರ್ ಲಂಚ ಪಡೆಯುವಾಗ ರೆಡ್​​ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿರೋ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ನಗರಸಭೆಯ ಬಿಲ್ ಕಲೆಕ್ಟರ್ ಕಿರಣಮೋಹನ ಜೀರಿಗೆಹಾಳ ಎಸಿಬಿಗೆ ಸಿಕ್ಕಿಬಿದ್ದ ಅಧಿಕಾರಿ. ಮನೆಗೆ ನಲ್ಲಿ ಕನೆಕ್ಷನ್ ಕೊಡುವ ಸಂಬಂಧ ಕಿರಣ‌ಮೋಹನ್ ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ರಮೇಶ್​ ಎಂಬವರು ಎಸಿಬಿಗೆ ದೂರು ನೀಡಿದ್ದರು.

ದೂರಿನನ್ವಯ ಇಂದು ಡಿವೈಎಸ್​ಪಿ ಕೃಷ್ಣಮೂರ್ತಿ, ಇನ್ಸ್ಪೆಕ್ಟರ್​​ಗಳಾದ ಶಿಲ್ಪಾ ಹಾಗೂ ವೀಣಾ ನೇತೃತ್ವದಲ್ಲಿ ಹಾಸನ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು. ಅಧಿಕಾರಿ ಕಿರಣಮೋಹನ್ 13,800 ರೂಪಾಯಿ ಲಂಚ ಪಡೆಯುವಾಗ ರೆಡ್​​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆ ಕಿರಣಮೋಹನ್​ನನ್ನು ​ಬಂಧಿಸಲಾಗಿದೆ.

 

The post ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಲ್ ಕಲೆಕ್ಟರ್ appeared first on News First Kannada.

Source: newsfirstlive.com

Source link