ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಲಬುರಗಿ ಕಾನ್ಸ್​ಟೇಬಲ್​! | Constable has been caught by ACB officers while receiving bribes in kalaburagi


ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಲಬುರಗಿ ಕಾನ್ಸ್​ಟೇಬಲ್​!

ಕಾನ್ಸ್​ಟೇಬಲ್ ಭೀಮು ನಾಯ್ಕ್

ಅಬ್ದುಲ್ ಮುಸ್ತಫಾ ಈ ವೇಳೆ ಠಾಣೆಗೆ ಕರೆಯಿಸಿ ಹಣ ನೀಡುವುದಾಗಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಅಬ್ದುಲ್ ಮುಸ್ತಾಫಾ ಎಸಿಬಿಗೆ ದೂರು ನೀಡಿದ್ದರು.

ಕಲಬುರಗಿ: ಮೂವತ್ತು ಸಾವಿರ ಲಂಚ (Bribery) ಪಡೆಯುವಾಗ ಕಲಬುರಗಿ ನಗರದ ಬ್ರಹ್ಮಪುರ ಠಾಣೆ ಕಾನ್ಸ್​​ಟೇಬಲ್ ರೆಡ್ ಹ್ಯಾಂಡ್ (Red Hand) ಆಗಿ ಸಿಕ್ಕಿಬಿದ್ದಿದ್ದಾರೆ. ಭೀಮು ನಾಯ್ಕ್ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಕಾನ್ಸ್​​ಟೇಬಲ್. ಅಬ್ದುಲ್ ಮುಸ್ತಫಾ ಅನ್ನೋರ ವಿರುದ್ಧ ಸೈಟ್ ವಿಚಾರವಾಗಿ ಕೆಲವರು ದೂರು ನೀಡಿದ್ದರು. ಅಬ್ದುಲ್ ಮುಸ್ತಫಾ ಈ ವೇಳೆ ಠಾಣೆಗೆ ಕರೆಯಿಸಿ ಹಣ ನೀಡುವುದಾಗಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಅಬ್ದುಲ್ ಮುಸ್ತಾಫಾ ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಎಸಿಬಿ ಅಧಿಕಾರಿಗಳು ಹಣ ಪಡೆಯುವಾಗ ರೆಂಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಭೀಮು ನಾಯ್ಕ್ ಅಬ್ದುಲ್ ಮುಸ್ತಾಫಾ ಅವರಿಗೆ ಒಂದು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ನಿನ್ನೆ ರಾತ್ರಿ ಕಲಬುರಗಿ ನಗರದ ರೈಲ್ವೆ ನಿಲ್ದಾಣದ ಹೋಟೆಲ್ ಬಳಿ ಮೂವತ್ತು ಸಾವಿರ ಪಡೆಯುತ್ತಿದ್ದಂತೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಕಾನ್ಸ್​​ಟೇಬಲ್ ಭೀಮು ನಾಯ್ಕ್​ನನ್ನು ಬಂಧಿಸಿದ್ದಾರೆ.

ಮಾದಕ ವಸ್ತು ಮನೆಯಲ್ಲಿಟ್ಟಿದ್ದ ಆರೋಪಿ ಬಂಧನ:
ಬೆಂಗಳೂರು: ಕೆಜಿಗಟ್ಟಲೆ ಮಾದಕ ವಸ್ತುಗಳನ್ನ ಮನೆಯಲ್ಲಿಟ್ಟಿದ್ದ ಆರೋಪಿಗಳನ್ನ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆಫ್ರಿಕಾ ಮೂಲದ ಜಾನ್ ಅಬ್ರಹಾಂ ಬಂಧಿತ ಆರೋಪಿ. ಬಂಧಿತನಿಂದ 1.4 ಕೆಜಿ MDMA, 6 ಕೆಜಿ ಗಾಂಜಾ, ಏಳು ಮೊಬೈಲ್ ವಶಕ್ಕೆ ಪಡೆದಿದ್ದಾರೆ.

TV9 Kannada


Leave a Reply

Your email address will not be published.