ಲಂಚ ಪ್ರಕರಣ: ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಯಿಂದ ₹10 ಲಕ್ಷ ನಗದು, ಚಿನ್ನ ವಶಪಡಿಸಿದ ಗುಜರಾತ್ ಎಸಿಬಿ | Gujarat Anti Corruption Bureau seizes cash and gold valuables worth Rs 10 lakhfrom legal metrology dept official


ಲಂಚ ಪ್ರಕರಣ: ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಯಿಂದ ₹10 ಲಕ್ಷ ನಗದು, ಚಿನ್ನ ವಶಪಡಿಸಿದ ಗುಜರಾತ್ ಎಸಿಬಿ

ಪ್ರಾತಿನಿಧಿಕ ಚಿತ್ರ

ಅಹಮದಾಬಾದ್: ಏಜೆನ್ಸಿಯಿಂದ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಸಬರ್ಕಾಂತದಲ್ಲಿರುವ ಹಿಮತ್‌ನಗರದ ಕಾನೂನು ಮಾಪನಶಾಸ್ತ್ರ ಇಲಾಖೆಯ ಹಿರಿಯ ಇನ್ಸ್‌ಪೆಕ್ಟರ್ ಬಳಿಯಿಂದ ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ (ACB) 10 ಲಕ್ಷ ರೂಪಾಯಿ  ನಗದು ಮತ್ತು ಚಿನ್ನದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ. ಎಸಿಬಿ ಅಧಿಕಾರಿಗಳ ಪ್ರಕಾರ, ಕಾನೂನು ಮಾಪನಶಾಸ್ತ್ರ ವಿಭಾಗದ ಹಿರಿಯ ಇನ್ಸ್‌ಪೆಕ್ಟರ್ ಹೇಮಂತ್ ಕುಮಾರ್ ವವಾನಿ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಪೆಟ್ರೋಲ್ ಪಂಪ್ ಮಾಲೀಕರ ವಿರುದ್ಧ ದಂಡದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ₹15,000  ಲಂಚ ಸ್ವೀಕರಿಸಿದ್ದರು. ಅಧಿಕಾರಿಗಳ ಪ್ರಕಾರ, ವವಾನಿ ಸ್ವತಃ ಪೆಟ್ರೋಲ್ ಪಂಪ್ ಮಾಲೀಕರನ್ನು ಸಂಪರ್ಕಿಸಿ ಮಾಪನದ ತೊಡಕುಗಳನ್ನು ತೋರಿಸಿ ಆಸ್ತಿಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದರು.

ಆರೋಪಿಯನ್ನು ಬಂಧಿಸಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ ಎಸಿಬಿ ಬುಧವಾರ ಆರೋಪಿಯ ಮೂರು ಲಾಕರ್‌ಗಳನ್ನು ಜಪ್ತಿ ಮಾಡಿದೆ ಮತ್ತು 10 ಲಕ್ಷ ರೂಪಾಯಿ  ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದೆ. ಎಂದು ಎಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏತನ್ಮಧ್ಯೆ, ಗ್ರಾಮ ಪಂಚಾಯಿತಿ ನಿಧಿಯಿಂದ 1.07 ಲಕ್ಷ ರೂ. ವಂಚನೆ ಮಾಡಿದ್ದಕ್ಕಾಗಿ ಅಮ್ರೇಲಿಯ ಸಾವರಕುಂಡ್ಲಾ ತಾಲೂಕಿನ ಮಾಜಿ ಮಹಿಳಾ ಸರಪಂಚ್ ಮತ್ತು ಅವರ ಪತಿ ವಿರುದ್ಧವೂ ಎಸಿಬಿ ಪ್ರಕರಣ ದಾಖಲಿಸಿದೆ.

ಅಧಿಕಾರಿಗಳ ಪ್ರಕಾರ, ಸಾವರಕುಂಡ್ಲದ ತೊರ್ಡಿ ಗ್ರಾಮದ ಮಾಜಿ ಸರಪಂಚ್ ಹಂಸ ವೆಕಾರಿಯಾ ಮತ್ತು ಅವರ ಪತಿ ಪ್ರಫುಲ್ ವೆಕಾರಿಯಾ ಅವರು ಗ್ರಾಮದಲ್ಲಿ ಸ್ಥಾಪಿಸಲಾದ ನೀರಿನ ಬೋರಿಂಗ್ ಸೌಲಭ್ಯಕ್ಕೆ ಸಂಬಂಧಿಸಿದಂತೆ ನಕಲಿ ಬಿಲ್ ಮತ್ತು ದಾಖಲೆಗಳನ್ನು ಸಲ್ಲಿಸಿ 2018ರಲ್ಲಿ ಗ್ರಾಮ ಪಂಚಾಯಿತಿ ನಿಧಿಯಿಂದ 1.07 ಲಕ್ಷ ರೂ. ವಿತ್ ಡ್ರಾ ಮಾಡಿರುವ ಆರೋಪವಿದೆ.  “ಆರೋಪಿಗಳು ನೀರಿನ ಬೋರ್ ಸೌಲಭ್ಯಕ್ಕಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ, ಬುಧವಾರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: ಉಪಚುನಾವಣೆಯಲ್ಲಿನ ಸೋಲಿನಿಂದಾಗಿಯೇ ಇಂಧನ ಬೆಲೆ ಕಡಿಮೆ ಮಾಡಿದ್ದು: ಕಾಂಗ್ರೆಸ್ ನಾಯಕ ಪಿ ಚಿದಂಬರಂ

TV9 Kannada


Leave a Reply

Your email address will not be published. Required fields are marked *