ಬೆಂಗಳೂರು: ಉದ್ಯಮಿಯಿಂದ ಲಂಚ ಪಡೆದ ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಎಎಸ್ಐ ದಯಾನಂದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಿನ್ನೆಯಷ್ಟೆ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆ ದಯಾನಂದಸ್ವಾಮಿ ಅವರನ್ನ ಅಮಾನತು ಮಾಡಿ ಎಸಿಬಿ ತನಿಖೆಗೆ ಕಮಿಷನರ್ ಆದೇಶಿಸಿದ್ದರು. ಈ ಹಿನ್ನೆಲೆ ಇಂದು ಯಲಹಂಕ ನ್ಯೂಟೌನ್​​ನಲ್ಲಿರೋ ಎಎಸ್ಐ ಮನೆ ಮೇಲೆ 10 ಅಧಿಕಾರಿಗಳ ತಂಡದಿಂದ ರೇಡ್​ ಮಾಡಲಾಗಿದೆ.

ಮನೆ ಮೇಲೆ ದಾಳಿ ಮಾಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

The post ಲಂಚ ಪ್ರಕರಣ: ಕೊಡಿಗೇಹಳ್ಳಿ ASI ದಯಾನಂದ್ ಮನೆ ಮೇಲೆ ಎಸಿಬಿ ದಾಳಿ appeared first on News First Kannada.

Source: newsfirstlive.com

Source link