ಬೆಂಗಳೂರು: ಸ್ಯಾಂಡಲ್​ವುಡ್ ನಟ ಕೋಮಲ್ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಗ್ಗೇಶ್.. ಕೋಮಲ್​ ಕೊರೊನಾಗೆ ಒಳಗಾಗಲು ಬೆಂಗಳೂರು ಕಾರ್ಪೋರೇಷನ್​ನಲ್ಲಿನ ಲಂಚಬಾಕ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ತನ್ನ ಪಾಡಿಗೆ ತಾನು ಕೆಲಸಮಾಡಿಕೊಂಡಿದ್ದ ಕೋಮಲ್​ನನ್ನು ಬಿಲ್​ ಪಾವತಿ ಮಾಡದೇ ಲಂಚಬಾಕ ಅಧಿಕಾರಿಗಳು ಅಲೆಸಿಬಿಟ್ಟರು. ಪದೇ ಪದೆ ತೆರಳಿ ಅವರನ್ನು ಭೇಟಿ ಮಾಡಿ ಬರುತ್ತಿದ್ದ ಕೋಮಲ್​ಗೆ ಕೊರೊನಾ ಬಂತು ಅಂತ ನಟ ಹಾಗೂ ಕೋಮಲ್ ಅಣ್ಣ ಜಗ್ಗೇಶ್ ಗಂಭೀರ ಆರೋಪ ಮಾಡಿದ್ದಾರೆ.

ಜಗ್ಗೇಶ್ ಆರೋಪವೇನು..?

ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯವಹಾರವನ್ನ ಬೆಂಗಳೂರಿನ ಕಾರ್ಪೊರೇಷನ್​ನಲ್ಲಿ ಶುರುಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್​ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಅದ ಪಡೆಯಲು ದಿನವೂ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬ ಸೀರಿಯಸ್ ಆಗಿಬಿಟ್ಟ. ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ.- ಜಗ್ಗೇಶ್, ನಟ

 

The post ಲಂಚ ಬಾಕ ಅಧಿಕಾರಿಗಳಿಂದಲೇ ನಟ ಕೋಮಲ್​ಗೆ ಕೊರೊನಾ ಬಂತಾ..? appeared first on News First Kannada.

Source: newsfirstlive.com

Source link