ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಬಿಬಿಎಂಪಿ ನಕಲಿ ಟ್ಯಾಕ್ಸ್ ಇನ್ಸ್​ಪೆಕ್ಟರ್​​ | BBMP fake tax inspector caught in the ACB trap while accepting a bribe


ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಬಿಬಿಎಂಪಿ ನಕಲಿ ಟ್ಯಾಕ್ಸ್ ಇನ್ಸ್​ಪೆಕ್ಟರ್​​

ಎಸಿಬಿ ದಾಳಿ

ಬೆಂಗಳೂರು: ಬೆಂಗಳೂರಲ್ಲಿ ಬಿಬಿಎಂಪಿ ನಕಲಿ ಟ್ಯಾಕ್ಸ್ ಇನ್ಸ್​ಪೆಕ್ಟರ್​​ ಲಂಚ ಪಡೆಯುತ್ತಿದ್ದಾಗ ಎಸಿಬಿ (ACB) ಬಲೆಗೆ ಸಿಕ್ಕಿಬಿದಿದ್ದಾನೆ. ಫ್ಲ್ಯಾಟ್ ಖಾತೆ ಬದಲಾವಣೆಗೆ ಚಂದ್ರು 25 ಸಾವಿರ ಲಂಚ ಕೇಳಿದ್ದಾನೆ. ಸರ್ಕಾರಿ ಅಧಿಕಾರಿ ಎಂದುಕೊಂಡು ಎಸಿಬಿಗೆ ವ್ಯಕ್ತಿಯೋರ್ವ ದೂರು ನೀಡಿದ್ದಾನೆ. ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು, ದಾಳಿ ವೇಳೆ ಚಂದ್ರು ಬಿಬಿಎಂಪಿ ಅಧಿಕಾರಿ ಅಲ್ಲ ಅನ್ನೋದು ಪತ್ತೆಯಾಗಿದೆ. ಆರೋಪಿಗೆ ಬಿಬಿಎಂಪಿ ಅಧಿಕಾರಿಗಳು ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಚಂದ್ರುನನ್ನು ಬಂಧಿಸಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಅಬಕಾರಿ ಇಲಾಖೆ ಮೇಲೆ ಎಸಿಬಿ ದಾಳಿ; ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಬಕಾರಿ ಇಲಾಖೆ ಮೇಲೆ ಎಸಿಬಿ ಡಿವೈಎಸ್ಪಿ ಪ್ರಕಾಶ್ ನೇತೃತ್ವದಲ್ಲಿ ದಾಳಿ ಮಾಡಿದ್ದು, 20,000 ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಅಬಕಾರಿ ಪಿಎಸ್‌ಐ ಪ್ರೀತಿ ರಾಥೋಡ್‌ ಸಿಕ್ಕಿಬಿದಿದ್ದಾರೆ. ಕಾರವಾರ ಕೋಡಿಭಾಗ ಮೂಲದ ಮುಸ್ತಾಕ್ ಹಸನ್ ಬೇಗ್ ಎಂಬವದರಿಂದ ಲಂಚ ಪಡೆಯುತ್ತಿದ್ದ ಪ್ರೀತಿ, 50 ಸಾವಿರಕ್ಕೆ ಲಂಚ ಬೇಡಿಕೆ ಇಟ್ಟು ಸಿಕ್ಕಿಬಿದಿದ್ದಾರೆ.

TV9 Kannada


Leave a Reply

Your email address will not be published.