ಸ್ನೇಹಾ
ನಟ-ನಟಿಯರು ಪ್ರತಿ ಸಿನಿಮಾಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಾರೆ. ಇದರ ಜತೆಗೆ ಕೆಲ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿ ಹಣ ಗಳಿಕೆ ಮಾಡಿಕೊಳ್ಳುತ್ತಾರೆ. ಹೀಗೆ ಗಳಿಸಿದ ಹಣವನ್ನು ಹೂಡಿಕೆ ಮಾಡೋಕೆ ಇಷ್ಟಪಡುತ್ತಾರೆ. ಇದೇ ರೀತಿ ಹೂಡಿಕೆ ಮಾಡೋಕೆ ಹೋಗಿ ನಟಿಯೊಬ್ಬರು ಮೋಸ ಹೋಗಿದ್ದಾರೆ. ದೊಡ್ಡ ಮೊತ್ತದ ಹಣವನ್ನು ಅವರು ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ. ಹಾಗಾದರೆ ಯಾರು ಆ ನಟಿ? ಬಹುಭಾಷೆ ನಟಿ ಸ್ನೇಹ.
ಕನ್ನಡದ ‘ರವಿ ಶಾಸ್ತ್ರಿ’, ‘ಕುರುಕ್ಷೇತ್ರ’ ಸಿನಿಮಾಗಳಲ್ಲಿ ನಟಿಸಿದ್ದ ಸ್ನೇಹಾ ಈ ರೀತಿ ಮೋಸಕ್ಕೆ ಒಳಗಾಗಿದ್ದಾರೆ. ಸಿನಿಮಾಗಳಲ್ಲಿ ಸಂಭಾವನೆ ರೂಪದಲ್ಲಿ ಬಂದ ಹಣವನ್ನು ಅವರು ಹೂಡಿಕೆ ಮಾಡಿದ್ದರು. ಹಣ ಮರಳಿ ಬರುತ್ತದೆ ಎನ್ನುವ ನಂಬಿಕೆ ಅವರದ್ದಾಗಿತ್ತು. ಈಗ ಅಸಲು ಹಣವೂ ಇಲ್ಲ, ಲಾಭವೂ ಇಲ್ಲ ಎಂಬಂತಾಗಿದೆ. ಈ ಬಗ್ಗೆ ಅವರು ಚೆನ್ನೈ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸ್ನೇಹಾಗೆ ಇಬ್ಬರು ಉದ್ಯಮಿಗಳ ಪರಿಚಯವಾಗಿತ್ತು. ಎಕ್ಸ್ಪೋರ್ಟ್ ಉದ್ಯಮವನ್ನು ಇವರು ಹೊಂದಿದ್ದರು. ಇವರನ್ನು ನಂಬಿ ಸ್ನೇಹಾ ಲಕ್ಷಾಂತರ ರೂಪಾಯಿ ನೀಡಿದ್ದರು. ಸಮಯಕ್ಕೆ ಸರಿಯಾಗಿ ಲಾಭದ ಮೊತ್ತವನ್ನು ನೀಡುವುದಾಗಿ ಉದ್ಯಮಿಗಳು ನಂಬಿಸಿದ್ದರು. ಆದರೆ, ಈಗ ಈ ಪ್ರಾಮಿಸ್ ಸುಳ್ಳಾಗಿದೆ. ನಟಿಗೆ ಮೋಸ ಮಾಡಲಾಗಿದೆ. ಈ ಬಗ್ಗೆ ಅವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಅಲ್ಲದೆ, ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಸ್ನೇಹಾ ಅವರು ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ. ಹಣ ಕೊಡುವುದಿಲ್ಲ ಎಂದು ಹೇಳಿದ್ದು ಮಾತ್ರವಲ್ಲದೆ ಕೊಲೆ ಬೆದರಿಕೆಯನ್ನು ಕೂಡ ಹಾಕಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಮಿಳಿನ ‘ಶಾಟ್ ಬೂತ್ 3’ ಸಿನಿಮಾದಲ್ಲಿ ಸ್ನೇಹಾ ನಟಿಸುತ್ತಿದ್ದಾರೆ. ಅವರು ಮತ್ತಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ.
ಇದನ್ನೂ ಓದಿ: Samantha: ‘ಪುಷ್ಪ’ ಚಿತ್ರದ ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡಲು ಸಮಂತಾ ಕೇಳಿದ ಸಂಬಳ ಎಷ್ಟು ಕೋಟಿ?
Samantha: ಮದುವೆ ಹೆಣ್ಣಿಗೆ ಮೇಕಪ್ ಮಾಡ್ತಾರೆ ಸಮಂತಾ; ಬುಕಿಂಗ್ ಓಪನ್ ಆಗಿದೆ ಎಂದ ನಟಿ