ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಜನಪ್ರೀಯತೆ ಪಡೆದ ನಟಿ ರಶ್ಮಿ ಪ್ರಭಾಕರ್ ಈಗ ಇನ್ನೊಂದು ಮನೆಯ ಗೃಹ ಲಕ್ಷ್ಮೀಯಾಗಲು ಸಜ್ಜಾಗಿದ್ದು, ಚಂದದ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಯೆಸ್, ಕಾರ್ತಿಕ ಮಾಸದ ಶುಭ ಸೋಮವಾರ ಅಂದ್ರೆ ನಿನ್ನೆ ರಶ್ಮಿಯವರ ಅದ್ಧೂರಿ ನಿಶ್ಚಿತಾರ್ಥ ಜರುಗಿದ್ದು, ನಿಖಿಲ್ ಭಾರ್ಗವ್ ಅವರ ಜೊತೆ ರಶ್ಮಿ ಸಪ್ತಪದಿ ತುಳಿಯಲಿದ್ದು, ಶಾಸ್ತ್ರೋಕ್ತವಾಗಿ ಕುಟುಂಬದವ ಸಮ್ಮುಖದಲ್ಲಿ ನಿಖಿಲ್-ರಶ್ಮಿ ನಿಶ್ಚಿತಾರ್ಥ ನಡೆಯಿತು..
ಮುದ್ದಾದ ಗೊಂಬೆಯಂತಿರುವ ರಶ್ಮಿ ಅವರು ಬಂಗಾರ ಬಾರ್ಡರ್ ಇರುವ ಹಸಿರು ಬಣ್ಣದ ಸೀರೆ ಅದಕ್ಕೊಪ್ಪುವ ಪಿಂಕ್ ಬ್ಲೌಸ್ ತೊಟ್ಟಿದ್ದರು. ಇನ್ನೂ ನಿಖಿಲ್ ಅವರು ರಶ್ಮಿ ಅವರ ಕಾಸ್ಟೂಮ್ಗೆ ಮ್ಯಾಚ್ ಆಗುವಂತೆ ಕ್ರೀಮ್ ಮಿಕ್ಸಡ್ ಗೋಲ್ಡ್ನ್ ಬಣ್ಣದ ಕುರ್ತಾದಲ್ಲಿ ಮಿಂಚುತ್ತಿದ್ದರು.
ಹೊಸ ಬಾಳಿಗೆ ಕಾಲಿಡುತ್ತಿರುವ ರಶ್ಮಿ ಅವರು ಸದ್ಯ ಕನ್ನಡದಲ್ಲಿ ಜನಪ್ರೀಯತೆ ಪಡೆದ ಸೀರಿಯಲ್ ಕಾವ್ಯಾಂಜಲಿ ತೆಲುಗುಗೆ ರೀಮೆಕ್ ಆಗಿದ್ದು, ತೆಲುಗಿನ ಕಾವ್ಯಾಂಜಲಿ ಸೀರಿಯಲ್ನಲ್ಲಿ ಕಾವ್ಯಾ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ…
ಕಲಾ ಬದುಕಿನಲ್ಲಿ ಬ್ಯುಸಿಯಾಗಿದ್ದ ರಶ್ಮಿ ಅವರು ಸದ್ದಿಲ್ಲದೇ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿ, ತಮ್ಮ ಮದುವೆಯ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದು, ನಿಖಿಲ್ ಅವರ ಜೊತೆ ಎಂಗೇಜ್ಡ್ ಆಗಿದ್ದಾರೆ. ಒಟ್ನಲ್ಲಿ ಮದುವೆ ಎಂಬ ಪವಿತ್ರ ಬಂಧನದಲ್ಲಿ ಬಂದಿಯಾಗುತ್ತಿರುವ ನವ ಜೋಡಿ ನಿಖಿಲ್-ರಶ್ಮಿಗೆ ಕಂಗ್ರಾಟ್ಸ್.