ಲಖಿಂಪುರ್ ಖೇರಿ ಪ್ರಕರಣವು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಅವಕಾಶವನ್ನು ಹೆಚ್ಚಿಸಲಿದೆಯೇ? ಪ್ರಶಾಂತ್ ಕಿಶೋರ್ ಏನಂತಾರೆ? | People hoping for revival of Congress led opposition based on the Lakhimpur Kheri incident are setting themselves up for a disappointment says Prashant Kishor

ಲಖಿಂಪುರ್ ಖೇರಿ ಪ್ರಕರಣವು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಅವಕಾಶವನ್ನು ಹೆಚ್ಚಿಸಲಿದೆಯೇ? ಪ್ರಶಾಂತ್ ಕಿಶೋರ್ ಏನಂತಾರೆ?

ಪ್ರಶಾಂತ್ ಕಿಶೋರ್

ದೆಹಲಿ: ಇತ್ತೀಚಿನ ಲಖಿಂಪುರ್ ಖೇರಿ (Lakhimpur Kheri) ಹಿಂಸಾಚಾರದಿಂದಾಗಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಚೇತರಿಕೆಯ ನಿರೀಕ್ಷೆಯಲ್ಲಿರುವ ಜನರಿಗೆ ಭಾರೀ ನಿರಾಶೆಯಾಗಲಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಶುಕ್ರವಾರ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಪ್ರಶಾಂತ್ ಕಿಶೋರ್, ” ಯಾವುದೇ ತ್ವರಿತ ಪರಿಹಾರವಿಲ್ಲದೆ ಗ್ರ್ಯಾಂಡ್ ಓಲ್ಡ್ ಪಾರ್ಟಿ” (GOP) ಯಲ್ಲಿ ಸಮಸ್ಯೆಗಳು ಆಳವಾಗಿ ಬೇರೂರಿವೆ ಎಂದು ಹೇಳಿದ್ದಾರೆ. ಲಖಿಂಪುರ್ ಖೇರಿ ಘಟನೆಯ ಆಧಾರದ ಮೇಲೆ ಗ್ರ್ಯಾಂಡ್ ಓಲ್ಡ್ ಪಾರ್ಟಿ ನೇತೃತ್ವದ ವಿರೋಧ ಪಕ್ಷದಲ್ಲಿ ತ್ವರಿತ, ಸ್ವಾಭಾವಿಕ ಚೇತರಿಕೆ ಹುಡುಕುತ್ತಿರುವ ಜನರಿಗೆ ನಿರಾಶೆಯಾಗಲಿದೆ. ದುರದೃಷ್ಟವಶಾತ್ ಜಿಒಪಿಯ ಆಳವಾಗಿ ಬೇರೂರಿರುವ ಸಮಸ್ಯೆಗಳು ಮತ್ತು ರಚನಾತ್ಮಕ ದೌರ್ಬಲ್ಯಗಳಿಗೆ ಯಾವುದೇ ತ್ವರಿತ ಪರಿಹಾರಗಳಿಲ್ಲ “ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ. ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವಿಗೀಡಾಗಿದ್ದರು.

ಡಿಸೆಂಬರ್ 1885 ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಅನ್ನು ಸಾಮಾನ್ಯವಾಗಿ “ಗ್ರ್ಯಾಂಡ್ ಓಲ್ಡ್ ಪಾರ್ಟಿ” ಎಂದು ಕರೆಯಲಾಗುತ್ತದೆ. ಈ ವರ್ಷದ ಆರಂಭದಲ್ಲಿ ಮಮತಾ ಬ್ಯಾನರ್ಜಿ ಮತ್ತು ಎಂಕೆ ಸ್ಟಾಲಿನ್ ಅವರ ಇತ್ತೀಚಿನ ಚುನಾವಣೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಕಿಶೋರ್, ಸೋನಿಯಾ ಗಾಂಧಿ ನೇತೃತ್ವದ ಪಕ್ಷಕ್ಕೆ ಸೇರುತ್ತಾರೆ ಎಂದು ವರದಿಗಳು ಕೇಳಿ ಬಂದಿದ್ದವು.

ಲಖಿಂಪುರ್ ಖೇರಿ ಘಟನೆಯ ವಿರುದ್ಧದ ಪ್ರತಿಭಟನೆಗಳಲ್ಲಿ “ಜಿಒಪಿ” ಮುನ್ನಡೆ ಸಾಧಿಸಿತು, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಜ್ಯಸಭಾ ಸಂಸದ ದೀಪೇಂದರ್ ಹೂಡಾ ಅವರನ್ನು ಸೀತಾಪುರದಲ್ಲಿ ನಿಲ್ಲಿಸಿ ಪ್ರಾಂತೀಯ ಸಶಸ್ತ್ರ ಕಾನ್ ಸ್ಟಾಬ್ಯುಲರಿಯಲ್ಲಿ (PAC) ಬಂಧನದಲ್ಲಿಡಲಾಯಿತು. ಅಕ್ಟೋಬರ್ 5 ರಂದು ಇಬ್ಬರನ್ನು ಔಪಚಾರಿಕವಾಗಿ ಬಂಧಿಸಲಾಯಿತು.

ಉತ್ತರ ಪ್ರದೇಶ ಸರ್ಕಾರವು ಅಂತಿಮವಾಗಿ ಪ್ರತಿಪಕ್ಷದ ರಾಜಕಾರಣಿಗಳನ್ನು ಜಿಲ್ಲೆಗೆ ಭೇಟಿ ನೀಡಲು ಅನುಮತಿಸಿತು ಹಾಗಾಗಿ ಒಂದು ದಿನದ ನಂತರ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಲಖಿಂಪುರದಲ್ಲಿ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾದರು. ರಾಹುಲ್, ಪ್ರಿಯಾಂಕಾ, ಗಾಂಧಿ ಜತೆ ಪಂಜಾಬ್ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳಾದ ಚರಣ್​​ಜಿತ್ ಸಿಂಗ್ ಚನ್ನಿ ಮತ್ತು ಭೂಪೇಶ್ ಬಘೇಲ್ ಇದ್ದರು. ಇಬ್ಬರು ಮುಖ್ಯಮಂತ್ರಿಗಳು ನಾಲ್ಕು ರೈತರ ಕುಟುಂಬಗಳಿಗೆ ಆರ್ಥಿಕ ಪರಿಹಾರವನ್ನು ಘೋಷಿಸಿದರು. ಸಂತ್ರಸ್ತ ಸ್ಥಳೀಯ ಪತ್ರಕರ್ತರ ಕುಟುಂಬಕ್ಕೆ ಕೂಡಾ ಅವರು ಪರಿಹಾರವನ್ನು ಘೋಷಿಸಿದರು.

ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ: ಯೋಗಿ ಆದಿತ್ಯನಾಥ್​ ಸರ್ಕಾರದ ಕ್ರಮ ತೃಪ್ತಿದಾಯಕವಾಗಿಲ್ಲವೆಂದ ಸುಪ್ರೀಂಕೋರ್ಟ್

TV9 Kannada

Leave a comment

Your email address will not be published. Required fields are marked *