ಲಖಿಂಪುರ ಖೇರಿ ಪ್ರಕರಣ: ಸುಪ್ರೀಂಕೋರ್ಟ್ ಜಾಮೀನು ತಿರಸ್ಕರಿಸಿದ ನಂತರ ಜಿಲ್ಲಾ ಕಾರಾಗೃಹದಲ್ಲಿ ಶರಣಾದ ಆಶಿಶ್ ಮಿಶ್ರಾ | Ashish Mishra surrenders after supreme court rejected bail in Lakhimpur Kheri violence case


ಲಖಿಂಪುರ ಖೇರಿ ಪ್ರಕರಣ: ಸುಪ್ರೀಂಕೋರ್ಟ್ ಜಾಮೀನು ತಿರಸ್ಕರಿಸಿದ ನಂತರ ಜಿಲ್ಲಾ ಕಾರಾಗೃಹದಲ್ಲಿ ಶರಣಾದ ಆಶಿಶ್ ಮಿಶ್ರಾ

ಆಶಿಶ್ ಮಿಶ್ರಾ (ಸಂಗ್ರಹ ಚಿತ್ರ)

ದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ (Lakhimpur Kheri violence case) ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಪುತ್ರ ಆಶಿಶ್ ಮಿಶ್ರಾ (Ashish Mishra) ಅವರು ಭಾನುವಾರ ಜಿಲ್ಲಾ ಕಾರಾಗೃಹದಲ್ಲಿ ಶರಣಾದರು. ಸುಪ್ರೀಂಕೋರ್ಟ್ (Supreme Court) ಮಿಶ್ರಾ ಅವರ ಜಾಮೀನನ್ನು ರದ್ದುಗೊಳಿಸಿ ಒಂದು ವಾರದಲ್ಲಿ ಶರಣಾಗುವಂತೆ ಸೂಚಿಸಿತ್ತು. ಜೈಲು ಸೂಪರಿಂಟೆಂಡೆಂಟ್ ಪಿಪಿ ಸಿಂಗ್ ಅವರು ಆಶಿಶ್ ಮಿಶ್ರಾ ಮತ್ತೆ ಜೈಲಿಗೆ ಮರಳಿರುವುದನ್ನು ಖಚಿತಪಡಿಸಿದ್ದಾರೆ. ನ್ಯಾಯಾಲಯದ ಆವರಣದೊಳಗೆ ಮಾಧ್ಯಮದವರನ್ನು ಬಿಡಲಿಲ್ಲ. ಏಪ್ರಿಲ್ 18 ರಂದು, ಅಲಹಾಬಾದ್ ಹೈಕೋರ್ಟ್ ಪರಿಹಾರವನ್ನು ನೀಡುವಲ್ಲಿ “ತುಂಬಾ ಆತುರ” ತೋರಿಸಿದೆ ಎಂದು ಸುಪ್ರೀಂಕೋರ್ಟ್ ಗಮನಿಸಿತ್ತು. ಉನ್ನತ ನ್ಯಾಯಾಲಯವು ‘ಸಂತ್ರಸ್ತರಿಗೆ’ ಹೈಕೋರ್ಟ್‌ನಲ್ಲಿ “ನ್ಯಾಯಯುತ ಮತ್ತು ಪರಿಣಾಮಕಾರಿ ವಿಚಾರಣೆ” ನಿರಾಕರಿಸಲಾಗಿದೆ ಎಂದು ಹೇಳಿದೆ. ‘ಸಂತ್ರಸ್ತರು’ ತನಿಖೆಯ ಹಂತದಿಂದ ಮೇಲ್ಮನವಿ ಅಥವಾ ಪರಿಷ್ಕರಣೆಯಲ್ಲಿನ ಪ್ರಕ್ರಿಯೆಯ ಅಂತ್ಯದವರೆಗೆ  ಭಾಗವಹಿಸುವ ಹಕ್ಕುಗಳನ್ನು ಹೊಂದಿದ್ದಾರೆ.  ಅಕ್ಟೋಬರ್ 3, 2021 ರಂದು ನಡೆದ ಹಿಂಸಾಚಾರದಲ್ಲಿ ಎಂಟು ಜನರು ಕೊಲ್ಲಲ್ಪಟ್ಟರು. ಮಿಶ್ರಾ ಅವರಿಗೆ ಸೇರಿದ ಕಾರೊಂದು ನಾಲ್ವರು ರೈತರು ಮತ್ತು ಪತ್ರಕರ್ತರ ಮೇಲೆ ಹರಿದಿತ್ತು. ನಂತರದ ಹಿಂಸಾಚಾರದಲ್ಲಿ ಇಬ್ಬರು ರಾಜಕೀಯ ಕಾರ್ಯಕರ್ತರು ಮತ್ತು ಒಬ್ಬ ಚಾಲಕ ಕೊಲ್ಲಲ್ಪಟ್ಟರು. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಮಿಶ್ರಾ ಅವರಿಗೆ ವಾರದೊಳಗೆ ಶರಣಾಗುವಂತೆ ಸೂಚಿಸಿದೆ. ಜಾಮೀನು ಅರ್ಜಿಯನ್ನು ವಿರೋಧಿಸಲು ಸಾಕಷ್ಟು ಅವಕಾಶವನ್ನು ಒದಗಿಸಿಲ್ಲ ಎಂದು ದೂರಿದ ಸಂತ್ರಸ್ತರ ಕುಟುಂಬಗಳಿಗೆ ಸರಿಯಾದ ವಿಚಾರಣೆಯನ್ನು ನೀಡಿದ ನಂತರ ಅವರ ಜಾಮೀನು ಅರ್ಜಿಯನ್ನು ಹೊಸದಾಗಿ ನಿರ್ಧರಿಸುವಂತೆ ಅದು ಹೈಕೋರ್ಟ್‌ಗೆ ಕೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ವಿಚಾರಣೆ ಮುಗಿಯುವವರೆಗೆ ಪ್ರತಿ ಹಂತದಲ್ಲೂ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಬಂಧಿಕರಿಗೆ ವಿಚಾರಣೆಯನ್ನು ನೀಡುವುದು ಹೈಕೋರ್ಟ್‌ನ ಜವಾಬ್ದಾರಿಯಾಗಿದೆ ಎಂದು ಹೇಳಿದೆ.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published.