ಲಖೀಂಪುರ್​ ಹಿಂಸಾಚಾರ: ಅ.18 ರಂದು ರೈತರಿಂದ ‘ರೈಲ್ ರೋಕೋ’ ಪ್ರತಿಭಟನೆಗೆ ಕರೆ

ಲಖನೌ: ಉತ್ತರ ಪ್ರದೇಶದ ಲಖೀಂಪುರ್​ನಲ್ಲಿ ನಡೆದ ರೈತರ ಹತ್ಯೆ ಖಂಡಿಸಿ ಅಕ್ಟೋಬರ್​ 18 ರಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ರೈಲ್ ರೋಕೋ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಎಸ್​ಕೆಎಂ ನಾಯಕ ಯೋಗೇಂದ್ರ ಯಾದವ್ ಮಾಹಿತಿ ನೀಡಿದ್ದು, ಅಕ್ಟೋಬರ್​ 18 ರಂದು ರೈಲುಗಳನ್ನ ತಡೆ ಹಿಡಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯೋಗೇಂದ್ರ ಯಾದವ್​, ಪ್ರತಿಭಟನೆಗೆ ಸುಮಾರು 40 ರೈತ ಸಂಘಟನೆಗಳು ಭಾಗಿಯಾಗಲಿವೆ. ಈ ಮೂಲಕ ಅಂದು ಯೋಗಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಅಕ್ಟೋಬರ್​ 26ರಂದು ಲಖನೌನಲ್ಲಿ ಮಹಾಪಂಚಾಯತ್​ ಸಭೆ ನಡೆಸಲಾಗುತ್ತದೆ ಎಂದರು.

ದೇಶದ ವಿವಿಧ ಮೂಲೆಗಳಿಂದ ರೈತರು ಲಖೀಂಪುರ್​​ಗೆ ಅಕ್ಟೋಬರ್​ 12ಕ್ಕೆ ಚಳುವಳಿ ಮೂಲಕ ಆಗಮಿಸಲಿದ್ದಾರೆ. ನಾವು ಎಲ್ಲಾ ಸಾಮಾಜಿಕ ಸಂಘಟನೆಗಳಿಗೂ ಅಕ್ಟೋಬರ್ 12ರ ರಾತ್ರಿ 8 ಗಂಟೆಗೆ ಕ್ಯಾಂಡಲ್​​​ ಬೆಳಗಿಸಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡುಕೊಳ್ಳುತ್ತಿದ್ದೇವೆ. ಇಲ್ಲಿ ನಡೆದ ಘಟನೆ ಜಲಿಯನ್​ವಾಲಾಬಾಗ್​ ಹತ್ಯಾಕಾಂಡದಂತಿದೆ. ಅಕ್ಟೋಬರ್​ 15ರ ದಸರಾ ಆಚರಣೆ ವೇಳೆ ಎಲ್ಲಾ ರೈತರು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ಧಹಿಸಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

The post ಲಖೀಂಪುರ್​ ಹಿಂಸಾಚಾರ: ಅ.18 ರಂದು ರೈತರಿಂದ ‘ರೈಲ್ ರೋಕೋ’ ಪ್ರತಿಭಟನೆಗೆ ಕರೆ appeared first on News First Kannada.

News First Live Kannada

Leave a comment

Your email address will not be published. Required fields are marked *