ಮದರಂಗಿ ಕೃಷ್ಣ ಹಾಗೂ ಮಿಲನ ನಾಗರಾಜ್ ಲವ್​ ಮಾಕ್ಟೇಲ್ ಲವ್​ ಬರ್ಡ್ಸ್​​ಗಳು ಎಂದೇ ಖ್ಯಾತಿ. ಲವ್​ ಮಾಕ್ಟೇಲ್​ ಚಿತ್ರದ ನಂತ್ರ ಆದಿ, ನಿಧಿಮಾ ನಿಜ ಜೀವನದಲ್ಲೂ ಜೋಡಿಗಳಾಗಿದ್ದಾರೆ. ವ್ಯಾಲೇಂಟೈನ್ಸ್​ ಡೇ ದಿನವೇ ಹೊಸ ಬಾಳಿಗೆ ಎಂಟ್ರಿ ಕೊಟ್ಟಿದ್ದ ಈ ಪ್ರಣಯ ಪಕ್ಷಿಗಳು ಮಾಲ್ಡೀವ್ಸ್​ನಲ್ಲಿ ತಮ್ಮ ಹನಿಮೂನ್​ ಅನ್ನು ಮುಗಿಸಿ ಬಂದಿದ್ರು.

ಅಲ್ಲದೆ ಈಗ ಈ ಲವ್​ ಬರ್ಡ್ಸ್​ಗಳು ಲೇ ಲಡಾಖ್​ನ ಸುಂದರ ತಾಣಗಳಲ್ಲಿ ಸುತ್ತಾಡಿ ಬಂದಿದ್ದಾರೆ. ಇದೇನಪ್ಪ ಈ ಜೋಡಿ ಬ್ಯಾಕ್​ ಟು ಬ್ಯಾಕ್ ಹನಿಮೂನ್​ ಟ್ರಿಪ್ ಮಾಡ್ತಿದ್ದಾರೆ ಅಂತ ಕನ್ಫ್ಯೂಸ್ ಆಗ ಬೇಡಿ. ಆದಿ, ನಿಧಿಮಾ ಲೇ ಲಡಾಕ್​ಕೆ ಹೋಗಿದ್ದು ಸತ್ಯ.

ರೋಮ್ಯಾಟಿಂಕ್​ ಆಗಿ ಫೊಟೋಗೆ ಫೋಸ್​ ಕೊಟ್ಟಿರೋದು ಸತ್ಯ. ಆದರೆ ಈ ಜೋಡಿ ಲೇ ಲಡಾಖ್​ಗೆ ಹೋಗಿದ್ದು ಹನಿಮೂನ್​ಗಲ್ಲ ಬದಲಿಗೆ ಲವ್ ಮಾಕ್ಟೇಲ್ 2 ಚಿತ್ರದ ಪ್ಯಾಚ್​ ವರ್ಕ್​ ಶೂಟಿಂಗ್​​ಗಾಗಿ.

ಲವ್​ ಮಾಕ್ಟೇಲ್​ 2 ಚಿತ್ರದಲ್ಲಿ ಕೃಷ್ಣ ನಾಯಕನಾಶಗಿ ನಟಿಸಿದ್ರೆ ಮಿಲನಾ ನಾಗರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.. ಹಾಗಾಗಿ ಈ ಜೋಡಿ ಕಳೆದ ವಾರ ತಮ್ಮ ಟೀಂ ಜೊತೆ ಲೇ ಲಡಾಕ್​ಗೆ ಹೋಗಿ ಶೂಟಿಂಗ್​ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇನ್ನು ಲೇ ಲಡಾಖ್​ನಲ್ಲಿ ಫ್ರೀ ಟೈಂ ಅಲ್ಲಿ ಈ ಜೋಡಿ ಲಡಾಕ್​ನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ.. ಅಲ್ಲದೆ ಫೋಟೋಗಳ ಕ್ಲಿಕ್ಕಿಸಿ ಸೋಷಿಯಲ್ ಮೀಡಿತಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ಲವ್​ ಬರ್ಡ್ಸ್​ಗಳ ಕಲರ್ ಪುಲ್​ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್​ ಮತ್ತು ಕಮೆಂಟ್​ಗಳ ಸುರಿಮಳೆಯಾಗಿದೆ.

 

View this post on Instagram

 

A post shared by Milana Nagaraj (@milananagaraj)

The post ಲಡಾಖ್​ನಲ್ಲಿ ಲವ್​ ಮಾಕ್ಟೇಲ್ ಲವ್​ ಬರ್ಡ್ಸ್ ಕೃಷ್ಣಾ-ಮಿಲನ appeared first on News First Kannada.

Source: newsfirstlive.com

Source link