ಲತಾ ಮಂಗೇಶ್ಕರ್ ಅಂತ್ಯಕ್ರಿಯೆಗೆ ಕ್ಷಣಗಣನೆ.. ಭಾರೀ ಜನಸ್ತೋಮ


ಮುಂಬೈ: ಇಂದು ಬೆಳಿಗ್ಗೆ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (93) ಅಂತಿಮ ಸಂಸ್ಕಾರಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಅಗಲಿದ ಗಾಯಕಿಯ ಪಾರ್ಥಿವ ಶರೀರದ ದರ್ಶನಕ್ಕೆ ಲತಾ ಮಂಗೇಶ್ಕರ್​ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.

ಆಸ್ಪತ್ರೆಯಿಂದ ಮುಂಬೈನಲ್ಲಿರೋ ಪ್ರಭುಕುಂಜ್​ನ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗಿತ್ತು. ಅಲ್ಲಿಂದ ಶಿವಾಜಿ ಪಾರ್ಕನಲ್ಲ್ಲಿ ಕೆಲ ಹೊತ್ತು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಮನೆಯಿಂದ ಆರಂಭವಾದ ಅಂತಿಮ ದರ್ಶನದ ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿ ನೆಚ್ಚಿನ ಗಾಯಕಿಗೆ ಅಂತಿಮ ವಿದಾಯ ಹೇಳಿದ್ದಾರೆ.

News First Live Kannada


Leave a Reply

Your email address will not be published.