ಲತಾ ಮಂಗೇಶ್ಕರ್ ನಿಧನ -ಮುಂಬೈನ ಆಸ್ಪತ್ರೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ


ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಮುಂಬೈನ ಬ್ರಿಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಕುರಿತ ಮಾಹಿತಿ ಲಭಿಸುತ್ತಿದಂತೆ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಆಸ್ಪತ್ರೆ ಬಳಿ ಮಾತನಾಡಿದ ನಿತಿನ್​ ಗಡ್ಕರಿ, ಲತಾಮಂಗೇಶ್ಕರ್ ಅವರ ನಿಧನದಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಂಗೀತ ಅನೇಕ ತಲೆಮಾರುಗಳವರೆಗೂ ನೆನಪಿನಲ್ಲಿ ಉಳಿಯುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕೊರೊನಾ ಹಾಗೂ ನ್ಯೂಮೋನಿಯದಿಂದ ಬಳಲುತ್ತಿದ್ದ ಅವರು ಕಳೆದ 29 ದಿನಗಳಿಂದ ಆಸ್ಪತ್ರೆಯ ಪಡೆಯುತ್ತಿದ್ದರು. ನಿನ್ನೆ ಅವರ ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

News First Live Kannada


Leave a Reply

Your email address will not be published.