ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ವೇತನ 64ಲಕ್ಷ | ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿ | LPU B.Tech engineering student Salary Package INR 64 Lakh


ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ವೇತನ 64ಲಕ್ಷ | ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿ

ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ

Image Credit source: India Today

ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ 2022ರಲ್ಲಿ ಪಾಸಾದ ಬ್ಯಾಚ್​ನ ವಿದ್ಯಾರ್ಥಿ 64ಲಕ್ಷ ಸಂಭಾವನೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾನೆ.

ನವದೆಹಲಿ: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ (Lovely Professional University) ಮತ್ತೊಮ್ಮೆ ಎರಡು ದಾಖಲೆಗಳನ್ನು ಬರೆದಿದೆ. ಈ ವಿಶ್ಚವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಬಹುತೇಕ ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ಆಗಿದೆ. ಜತೆಗೆ ಜೂನ್ 2022ರಲ್ಲಿ ಪಾಸಾದ ಬ್ಯಾಚ್​ನ ವಿದ್ಯಾರ್ಥಿ 64ಲಕ್ಷ ಸಂಭಾವನೆ ಪಡೆಯುವ ಮೂಲಕ ದಾಖಲೆ ಬರೆದಿದ್ದಾನೆ.

PUನ ಬಿ.ಟೆಕ್ CSE ವಿದ್ಯಾರ್ಥಿ ಹರೇ ಕೃಷ್ಣ (Hare Krishna)  ವಿಶ್ವದ ಟಾಪ್ ಟೆಕ್ ದೈತ್ಯ ಗೂಗಲ್​ನ (Google) ಬೆಂಗಳೂರು ಕಚೇರಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಈತನ ವೇತನ 64 ಲಕ್ಷ ರೂಪಾಯಿ. ಇದು ದೇಶದಲ್ಲೇ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪಡೆಯುತ್ತಿರುವ ಅತ್ಯಧಿಕ ವೇತನ ಪ್ಯಾಕೇಜ್‌ ಆಗಿದೆ. 2022 ರ ಬ್ಯಾಚ್‌ನ ಇನ್ನೊಬ್ಬ LPU ವಿದ್ಯಾರ್ಥಿ ಅರ್ಜುನ್, AI/ML ಡೊಮೇನ್‌ನಲ್ಲಿ 63 ಲಕ್ಷ ರೂಪಾಯಿ ಪ್ಯಾಕೇಜ್ ಅನ್ನು ಸ್ವೀಕರಿಸಿದ್ದು, ಇವರು ಕೂಡಾ ಬೆಂಗಳೂರಿನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ: XUV700 ಬೇಗ ಕಳಿಸಿ ಎಂದ ಥಾಮಸ್ ಕಪ್ ವಿನ್ನರ್​ಗೆ ಆನಂದ್ ಮಹೀಂದ್ರ ಉತ್ತರ ಹೀಗಿತ್ತು

LPU ತನ್ನ ಹಿಂದಿನ ದಾಖೆಯನ್ನು ಮುರಿದಿದೆ, ಏಕೆಂದರೆ ಈ ಪ್ಯಾಕೇಜ್ ಫ್ರೆಶರ್‌ಗಾಗಿ ಹಿಂದಿನ ವರ್ಷದ ಅತ್ಯಧಿಕ 42 ಲಕ್ಷಕ್ಕಿಂತ 1.5 ಪಟ್ಟು (50%) ಹೆಚ್ಚಾಗಿದೆ. ಈ ಹಿಂದೆ ಅಮೇಜಾನ್ (Amazon) ಕಂಪನಿ LPU ವಿದ್ಯಾರ್ಥಿಗಳನ್ನು 46.4 ಲಕ್ಷ ರೂಪಾಯಿ ಪ್ಯಾಕೇಜ್‌ನಲ್ಲಿ ನೇಮಿಸಿಕೊಂಡಿತ್ತು. ಈ ವಿಶ್ವವಿದ್ಯಾಲಯದ 2022ನೇ ಸಾಲಿನ 8400 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗು ಮುನ್ನವೇ ಉದ್ಯೋಗ ಅಥವಾ ಇಂರ್ಟನಶಿಪ್ ವನ್ನು ಪಡೆದಿದ್ದಾರೆ. ಈ ವರ್ಷ 1190 ಕ್ಕೂ ಹೆಚ್ಚು ಕಂಪನಿಗಳು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು LPU ಕ್ಯಾಂಪಸ್‌ಗೆ ತಲುಪಿವೆ. ಇದು ನೇಮಕಾತಿಗಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಭೇಟಿ ನೀಡಿದ ಕಂಪನಿಗಳ ಸಂಖ್ಯೆಗೆ ಮತ್ತೊಮ್ಮೆ ಮತ್ತೊಂದು ದಾಖಲೆಯಾಗಿದೆ.

ಇದನ್ನು ಓದಿ: ಆಮ್ ಆದ್ಮಿ ಪಕ್ಷ ಸೇರಿದ್ರಾ ಕಪಿಲ್ ದೇವ್? ಸೋಶಿಯಲ್ ಮೀಡಿಯಾದಲ್ಲಿ ವಿಶ್ವಕಪ್ ಹೀರೋ ಕೊಟ್ಟ ಉತ್ತರವಿದು

ಹೆಚ್ಚಿನ ವಿದ್ಯಾರ್ಥಿಗಳು Amazon, Google, VMware, Lowe’s, Infineon, Target, Bajaj Fineserv, What fix, ZS Associates, Zscaler, Practo, Palo Alto ಇತ್ಯಾದಿಗಳನ್ನು ಒಳಗೊಂಡಂತೆ ಉನ್ನತ ಅಂತಾರಾಷ್ಟ್ರೀಯ ಕಂಪನಿಗಳಿಗೆ ಮೊರೆ ಹೋಗಿದ್ದು, ಅವರ ವೇತನ ಪ್ಯಾಕೇಜ್ 10 ರಿಂದ 48 ಲಕ್ಷ ರೂಪಾಯಿ ಇದೆ. ಕಾಗ್ನಿಜೆಂಟ್‌ನಂತಹ ಮಾರ್ಕ್ಯೂ ರಿಕ್ರೂಟರ್‌ಗಳು 670 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು, ಕ್ಯಾಪ್‌ಜೆಮಿನಿ 310 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು, ವಿಪ್ರೋ 310 ಕ್ಕೂ ಹೆಚ್ಚು , ಎಂಫಾಸಿಸ್ 210 ಕ್ಕೂ ಹೆಚ್ಚು, ಅಕ್ಸೆಂಚರ್ 150 ಕ್ಕೂ ಹೆಚ್ಚು ಮತ್ತು ಲೀಡ್ ಸ್ಕ್ವೇರ್ಡ್, ಇತರರ ಪೈಕಿ 6.1075 ಲಕ್ಷದ ನಡುವೆ ಡಿಫರೆನ್ಷಿಯಲ್ ಪ್ಯಾಕೇಜ್‌ಗಳಲ್ಲಿ ನೇಮಕಾತಿ ಮಾಡಿಕೊಂಡಿವೆ.

TV9 Kannada


Leave a Reply

Your email address will not be published. Required fields are marked *