ಒಳ್ಳೆಯ ಮನಸ್ಸಿನಿಂದ ಶ್ರಮ ಹಾಕಿ ಸಿನಿಮಾ ಮಾಡಿದರೆ ಕನ್ನಡಿಗರು ಯಾವತ್ತಿಗೂ ಕೈ ಬಿಡೋದಿಲ್ಲ.. ಈ ಮಾತಿಗೆ ತಾಜಾ ಉದಾಹರಣೆ ಪ್ರೇಮಂ ಪೂಜ್ಯಂ ಸಿನಿಮಾ..ಒಂದೊಳ್ಳೆ ಕಥೆ ಜೊತೆಗೆ ಒಂದೊಳ್ಳೆಯ ಮೇಕಿಂಗ್ನ್ನು ಹೊತ್ತು ತಂದ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ಚಿತ್ರಪ್ರೇಮಿಗಳು ಮನಸಾರೆ ಒಪ್ಪಿಕೊಂಡಿದ್ದಾರೆ.
ಪ್ರೇಮಂ ಪೂಜ್ಯಂ ಸಿನಿಮಾವನ್ನು ಎಲ್ಲಾ ವಯೋಮಾನದವರು ನೋಡ್ತಿದ್ದಾರೆ.. ಅಲ್ಲದೆ ಈಗ ಹೃದಯಕ್ಕೆ ಅರೈಕೆ ಮಾಡೋ ವೈದ್ಯರು ಸಹ ಅಪ್ಪಿಕೊಳ್ತಿದ್ದಾರೆ.. ಇದರ ಬೆನ್ನಲೆ ಚಿತ್ರತಂಡ ‘ಪ್ರೇಮಂ ಪೂಜ್ಯಂ’ ಸಿನಿಮಾ ವೈದ್ಯರಿಂದ ವೈದ್ಯರಿಗಾಗಿ ಅನ್ನೋ ಸ್ಲೋಗನ್ ಅನ್ನು ಜಪಿಸ್ತಿದ್ದಾರೆ..
ಅಂತು ಇಂತು ಲವ್ಲಿ ಸ್ಟಾರ್ ಪ್ರೇಮ್ ಅವರ ಎರಡು ವರ್ಷದ ಪರಿಶ್ರಮಕ್ಕೆ, ನಿರ್ದೇಶಕ ರಾಘವೇಂದ್ರ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಒಂದೊಳ್ಳೆ ಪ್ರತಿಫಲ ಸಿಕ್ಕಿದೆ..ಅಂದುಕೊಂಡಂತೆ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ಕನ್ನಡ ಚಿತ್ರ ಪ್ರೇಮಿಗಳು ಎದೆಗಪ್ಪಿ ಜೈ ಎಂದಿದ್ದಾರೆ..ಹೊಡಿ ಬಡಿ ಸಿನಿಮಾಗಳನ್ನು ನೋಡಿ ಬೇಸತ್ತಿದ್ದ ಸಿನಿ ಪ್ರೇಕ್ಷಕರಿಗೆ ‘ಪ್ರೇಮಂ ಪೂಜ್ಯಂ’ ಸಿನಿಮಾ ಒಂದೊಳ್ಳೆ ನವಿರಾದ ಪ್ರೇಮ ಕಥೆಯನ್ನು ನೀಡಿ ಮನಸ್ಸಿಗೆ ಮುದ ನೀಡುವಲ್ಲಿ ಯಶಸ್ವಿಯಾಗಿದೆ..ಅಲ್ಲದೆ ಪ್ರೇಮ್ ಅವರ 25ನೇ ಸಿನಿಮಾ ಪ್ರೇಮ್ ಗೆ ನೆನಪಲ್ಲಿ ಉಳಿಯುವಂತೆ ಮಾಡ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.
ಕಳೆದ ಶುಕ್ರವಾರ ವಿಶ್ವಾದ್ಯಂತ ತೆರೆಕಂಡ ‘‘ಪ್ರೇಮಂ ಪೂಜ್ಯಂ’’ಗೆ ಅಮೆರಿಕಾ, ದುಬೈ, ಹೈದ್ರಾಬಾದ್ , ಚೆನ್ನೈ ನಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.., ಪ್ರೀತಿಗೆ ಭಾಷೆಯ ಅಗತ್ಯ ಇಲ್ಲ ಅನ್ನೋದನ್ನು ಸಾಭೀತು ಮಾಡಿದೆ ‘ಪ್ರೇಮಂ ಪೂಜ್ಯಂ’. ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಸ್ಕ್ರೀನ್ಸ್ಗಳಲ್ಲಿ ದರ್ಶನ ಕೊಟ್ಟಿರುವ ‘‘ಪ್ರೇಮಂ ಪೂಜ್ಯಂ’’ಸಿನಿಮಾಕ್ಕೆ ಹದಿಹರೆಯವರು, ಪ್ರೇಮಿಗಳಷ್ಟೇ ಅಲ್ಲ, ಹಿರಿಯ ವಯಸ್ಕರೂ ಕೂಡ ಮೆಚ್ಚಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ ಈಗ ನಾಡಿನ ಯುವ ವೈದ್ಯರು ಕೂಡ ‘ಪ್ರೇಮಂ ಪೂಜ್ಯಂ’ ಸಿನಿಮಾ ಗೆ ಶರಣಾಗಿದ್ದಾರೆ..
ವೈದ್ಯರಿಂದ ವೈದ್ಯರಿಗಾಗಿ ‘ಪ್ರೇಮಂ ಪೂಜ್ಯಂ’
‘ಪ್ರೇಮಂ ಪೂಜ್ಯಂ’ ಗೆ ಶರಣಾದ ಯುವ ವೈದ್ಯರು
‘ಪ್ರೇಮಂ ಪೂಜ್ಯಂ’ ಪ್ರೇಮಿಗಳಿಗೆ ಮಾತ್ರವಲ್ಲ, ವೈದ್ಯರಿಂದ ವೈದ್ಯರಿಗಾಗಿ ಮಾಡಿರುವ ದೃಶ್ಯಕಾವ್ಯ ಅಂದ್ರೆ ತಪ್ಪಾಗಲಿಕ್ಕಿಲ್ಲ..ಸಿನಿಮಾ ರಿಲೀಸ್ ಆದಾಗಿನಿಂದ ಇಂದಿನ ವರೆಗೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ..ಯುವ ಪ್ರೇಮಿಗಳು ಸಿನಿಮಾವನ್ನು ಈಗಾಗಲೇ ಮೆಚ್ಚಿ ಕೊಂಡಾಡಿದ್ದಾರೆ..ಆದ್ರೆ ಈಗ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ವೈದ್ಯರು ಸಹ ಮೆಚ್ಚಿ ಕೊಂಡಾಡಿದ್ದಾರೆ..ಸ್ವತಃ ವೈದ್ಯರಾಗಿರುವ ನಿರ್ದೇಶಕ ಡಾ.ರಾಘವೇಂದ್ರ ಮೊದಲ ಪ್ರಯತ್ನದಲ್ಲೇ ಎಲ್ಲಾ ವರ್ಗದವರಿಗೂ ಇಷ್ಟವಾಗುವಂತೆ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ..ಈ ಸಿನಿಮಾವನ್ನು ಪ್ರೇಕ್ಷಕರು ಹಾಡಿ ಹೊಗಳಿದ್ದು ಒಂದು ಕಡೆಯಾದರೆ,ಈಗ ವೈದ್ಯರು ಸಹ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ..
ಸೈಕ್ಲೋನ್ನಿಂದ ರಾಜ್ಯದಲ್ಲಿ ಮಳೆ ಬರ್ತಿದ್ರೆ. ‘ಪ್ರೇಮಂ ಪೂಜ್ಯಂ’ ಸಿನಿಮಾದ ಲವ್ ಸೈಕ್ಲೋನ್ಗೆ ಮನಸೋತು ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡ್ತಿದ್ದಾರೆ.. ಒಟ್ಟಿನಲ್ಲಿ ‘ಪ್ರೇಮಂ ಪೂಜ್ಯಂ’ ಸಿನಿಮಾವನ್ನ ಪ್ರೇಕ್ಷಕ ಮಹಾಶಯ ಮನಸಾರೆ ಮೆಚ್ಚಿದ್ದಾನೆ. ಮುಂದಿನ ದಿನಗಳಲ್ಲಿ ‘ಪ್ರೇಮಂ ಪೂಜ್ಯಂ’ ಸಿನಿಮಾ ಮತ್ತಷ್ಟು ಯಶಸ್ಸು ಗಳಿಸಲಿ, ಮತ್ತಷ್ಟು ಒಳ್ಳೆ ಸಿನಿಮಾ ಚಿತ್ರತಂಡದ ಕಡೆಯಿಂದ ಬರಲಿ ಎಂಬುದು ಚಿತ್ರ ಪ್ರೇಮಿಗಳ ಆಶಯ.