ಲವ್​ ಕಹಾನಿ ಹೇಳುವಂತೆ ಬೇಡಿಕೆ ಇಟ್ಟ ಅಭಿಮಾನಿ; ಕಿರುತೆರೆ ನಟಿ ಕೊಟ್ರು ಖಡಕ್ ಉತ್ತರ | Marathi Actress Veena Jagtap Sharp reply to those who ask about her relationship


ವೀಣಾ ಅವರು 2019ರಲ್ಲಿ ಪ್ರಸಾರವಾದ ‘ಮರಾಠಿ ಬಿಗ್​ ಬಾಸ್​ 2’ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ಅವರ ಬಗ್ಗೆ ಈ ಮೊದಲಿನಿಂದಲೂ ವದಂತಿ ಒಂದಿದೆ. ಈ ಬಗ್ಗೆ ಅಭಿಮಾನಿ ಪ್ರಶ್ನೆ ಮಾಡಿದ್ದಾನೆ.

ಸೆಲೆಬ್ರಿಟಿಗಳು (Celerity) ತಮ್ಮ ಖಾಸಗಿ ಬದುಕಿನ ವಿಚಾರವನ್ನು ಆದಷ್ಟು ಗುಟ್ಟಾಗಿ ಇಡೋಕೆ ಪ್ರಯತ್ನಿಸುತ್ತಾರೆ. ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಪ್ರೀತಿಪಾತ್ರರರ ಜತೆ ಸುತ್ತಾಟ ನಡೆಸಿದ ಹೊರತಾಗಿಯೂ ಆ ಬಗ್ಗೆ ಹೇಳಿಕೊಳ್ಳೋಕೆ ಹಿಂದೇಟು ಹಾಕುತ್ತಾರೆ. ಈ ರೀತಿಯ ವಿಚಾರಗಳು ಮಾಧ್ಯಮ ಅಥವಾ ಫ್ಯಾನ್ಸ್ ಕಿವಿಗೆ ಬಿದ್ದರೆ ಅದು ನಾನಾ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವ ಭಯ ಅವರನ್ನು ಸದಾ ಕಾಡುತ್ತಿರುತ್ತದೆ. ಈಗ ಮರಾಠಿ ಕಿರುತೆರೆ ನಟಿ ವೀಣಾ ಜಗ್​ತಾಪ್​ಗೆ (Veena Jagtap) ಅಭಿಮಾನಿಯೋರ್ವ ವೈಯಕ್ತಿಕ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ನಟಿ ಖಡಕ್ ಉತ್ತರ ನೀಡಿದ್ದಾರೆ.

ವೀಣಾ ಅವರು 2019ರಲ್ಲಿ ಪ್ರಸಾರವಾದ ‘ಮರಾಠಿ ಬಿಗ್​ ಬಾಸ್​ 2’ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ಈ ರಿಯಾಲಿಟಿ ಶೋನಿಂದ ಅವರಿಗೆ ಆಫರ್​​ಗಳು ಹೆಚ್ಚಿದವು. ಸುಮಾರು 4 ಲಕ್ಷ ಜನರು ವೀಣಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸುತ್ತಿದ್ದಾರೆ. ಅವರ ಬಗ್ಗೆ ಈ ಮೊದಲಿನಿಂದಲೂ ವದಂತಿ ಒಂದಿದೆ. ಈ ಬಗ್ಗೆ ಅಭಿಮಾನಿ ಪ್ರಶ್ನೆ ಮಾಡಿದ್ದಾನೆ.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರೀತಿ ಮೂಡಿದ ಸಾಕಷ್ಟು ಉದಾಹರಣೆ ಇದೆ. ಈ ಸಾಲಿನಲ್ಲಿ ವೀಣಾ ಕೂಡ ಇದ್ದಾರೆ. ಬಿಗ್ ಬಾಸ್​ನ ಸಹ ಸ್ಪರ್ಧಿ ಆಗಿದ್ದ ಶಿವ್ ಠಾಕ್ರೆ ಜತೆ ವೀಣಾಗೆ ಪ್ರೀತಿ ಮೂಡಿದೆ ಎನ್ನುವ ಮಾತು ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಆದರೆ, ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಆಸ್ಕ್​ ಮಿ ಎನಿಥಿಂಗ್​ ಸೆಶನ್ ನಡೆಸಿದ್ದರು. ಈ ವೇಳೆ ಅವರಿಗೆ ನಾನಾ ರೀತಿಯ ಪ್ರಶ್ನೆಗಳು ಎದುರಾಗಿದ್ದವು. ಆ ಪೈಕಿ ರಿಲೇಶನ್​ಶಿಪ್​ ಬಗ್ಗೆಯೂ ಪ್ರಶ್ನೆ ಎದುರಾಯಿತು. ಇದಕ್ಕೆ ಅವರು ಉತ್ತರ ನೀಡದೇ ಇರಬಹುದಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ ಬದಲಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *