ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ: ಗುಜರಾತ್​ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ | Bollywood films aim to sow seeds of love jihad poison: Kajal Hindustani


ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ. ಉತ್ತರ ಭಾರತೀಯರು ಬಾಲಿವುಡ್ ಸಿನಿಮಾ ಬಹಿಷ್ಕರಿಸುತ್ತಿದ್ದಾರೆ. ಆದರೆ ನಿಮಗೆ ದಕ್ಷಿಣ ಭಾರತೀಯರಿಗೆ ಏನಾಗಿದೆ ಎಂದು ಪ್ರಶ್ನಿಸಿದರು.

ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ: ಗುಜರಾತ್​ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ

ಗುಜರಾತ್‌ನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ

ಉಡುಪಿ: ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ. ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಿ ಎಂದು ದುರ್ಗಾದೌಡ್ ಸಮಾವೇಶದಲ್ಲಿ ಗುಜರಾತ್‌ನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಹೇಳಿಕೆ ನೀಡಿದರು. ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ. ಉತ್ತರ ಭಾರತೀಯರು ಬಾಲಿವುಡ್ ಸಿನಿಮಾ ಬಹಿಷ್ಕರಿಸುತ್ತಿದ್ದಾರೆ. ಆದರೆ ನಿಮಗೆ ದಕ್ಷಿಣ ಭಾರತೀಯರಿಗೆ ಏನಾಗಿದೆ ಎಂದು ಪ್ರಶ್ನಿಸಿದರು. ಬಾಲಿವುಡ್ ಸಿನಿಮಾ ಮತ್ತು ಧಾರವಾಹಿಗಳ ಮೂಲಕ ಹಿಂದೂ ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿದೆ. ಪ್ರೀತಿ, ಅಕ್ರಮ ಮದುವೆ ಮಾಡಿಕೊಳ್ಳುವವರೆಂದು ಹಿಂದೂ ಮಹಿಳೆಯರನ್ನು ಬಿಂಬಿಸಲಾಗುತ್ತಿದೆ. ಆದರೆ ನಿಜ ಜೀವನದಲ್ಲಿ ಹಿಂದೂ ಮಹಿಳೆಯರು ಎಂದೂ ಹೀಗೆ ಮಾಡುವುದಿಲ್ಲ. ಬಾಲಿವುಡ್​ನ ಕೊಳಕು ಸಿನಿಮಾಗಳನ್ನು ದಕ್ಷಿಣ ಭಾರತೀಯರು ನೋಡಲೇಬೇಡಿ. ಕರಣ್ ಜೋಹರ್​ನನ್ನು ಬಹಿಷ್ಕಾರ ಮಾಡಿ. ಇಸ್ಲಾಮಿಕ್ ಆಕ್ರಮಣ ಹೆಚ್ಚುತ್ತಿದ್ದರೆ ಹಿಂದೂ ಜಾಗೃತನಾದರೂ ಮಲಗಿದ ಸ್ಥಿತಿಯಲ್ಲೇ ಇದ್ದಾನೆ. ಲವ್ ಜಿಹಾದ್ ಮತ್ತು ನಮ್ಮ ಧಾರ್ಮಿಕ ಕೇಂದ್ರಗಳ ವಶ ಪಡಿಸಿಕೊಳ್ಳುವುದು ಮುಸಲ್ಮಾನರ ಕಾರ್ಯತಂತ್ರ. ಪಾಪ್ಯುಲರ್ ಫ್ರಂಟ್ ಅಲ್ಲ ಪಿಎಫ್​ಐ ಅಂದರೆ ಪಾಯಿಸನ್ ಫಾರ್ ಇಂಡಿಯಾ ಎಂದು ಗುಡುಗಿದರು.

ರಾಷ್ಟ್ರದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ. ಹಿಂದುಗಳು ಮೂರು ಮಹತ್ವದ ನಿರ್ಧಾರ ಕೈಗೊಳ್ಳಬೇಕು. ಎಲ್ಲರೂ ಹಿಂದೂ ಸಂಸ್ಕಾರ ಪಾಲಿಸಬೇಕು. ಹಿಂದುಗಳಿಂದಲೇ ಖರೀದಿಸಬೇಕು. ಹಿಂದೂಗಳಿಗೆ ಮಾತ್ರ ನೌಕರಿ ನೀಡಬೇಕು. ನಿಮ್ಮದೇ ಹಣದಲ್ಲಿ ದೇಶದೊಳಗೆ ಜಿಹಾದಿಗಳ ಸೃಷ್ಡಿಯಾಗಲು ಬಿಡಬೇಡಿ. ಪಿಎಫ್​ಐ ಮೂಲಕ ದೇಶ ಒಡೆಯುವ ಕೆಲಸ ಮುಸಲ್ಮಾನರು ಮಾಡುತ್ತಾ ಬಂದಿದ್ದರು. ಇದೀಗ ಮೋದಿಯವರು ಸರಿಯಾದ ಪಾಠ ಕಲಿಸಿದ್ದಾರೆ. ಟಿಪ್ಪು ಮಾನಸಿಕತೆ ಈಗಲೂ ಪಿಎಫ್​ಐ ಮೂಲಕ ಜೀವಂತ ಇತ್ತು. ವಕ್ಫ್ ಬೋರ್ಡ್​ನಲ್ಲೂ ಟಿಪ್ಪೂ ಮಾನಸಿಕತೆಯ ಮತ್ತೊಂದು ಪ್ರತೀಕ. ಓವೈಸಿ ಸಹೋದರರ ಮೂಲಕ ಟಿಪ್ಪು ಮಾನಸಿಕತೆ ಜೀವಂತ ಇರಿಸಲಾಗಿದೆ.

ಪ್ರತಿ ಮನೆಯಲ್ಲೂ ದುರ್ಗೆಯರು ತಯಾರಾಗಬೇಕು

ಜಿಹಾದಿ ವೈರಸ್ ಎದುರಿಸಲು ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು. ದೇಶದಲ್ಲಿ ಇನ್ನು ಮುಂದೆ ಹಿಂದೂ ಕಾರ್ಯಕರ್ತರು ಕೊಲೆಯಾಗಬಾರದು. ನಮ್ಮ ದೇವಾಲಯಗಳ ಭೂಮಿಯ ಅಕ್ರಮ ವಶ ಮಾಡಿಕೊಳ್ಳುವುದರಲ್ಲಿ ವಕ್ಫ್ ಬೋರ್ಡ್ ನಿರತವಾಗಿದೆ.
ಪ್ರತಿ ಮನೆಯಲ್ಲೂ ದುರ್ಗೆಯರು ತಯಾರಾಗಲಿ. ನಮ್ಮ ಯುವತಿಯರು ಲವ್ ಜಿಹಾದಿಗೆ ಹೇಗೆ ಬಲಿಯಾಗುತ್ತಾರೆ. ಜೀನ್ಸ್ ಧರಿಸುವ ನಮ್ಮ ಯುವತಿಯರು ಬುರ್ಖಾ ಧರಿಸಲು ಹೇಗೆ ಮಾರುಹೋಗುತ್ತಾರೆ. ಮನೆಯಲ್ಲಿ ಗೋವುಗಳಿಗೆ ಗೋಗ್ರಾಸ ಕೊಟ್ಟ ಹುಡುಗಿಯರು ಗೋಮಾಂಸ ಹೇಗೆ ತಿನ್ನುತ್ತಾರೆ. ಮೂವರು ಸವತಿಯರ ಜೊತೆ ಸಂಸಾರ ನಡೆಸಲು ಯಾಕೆ ಮುಂದಾಗುತ್ತಾರೆ. ನಮ್ಮ ಯುವತಿಯರಿಗೆ ಸಂಸ್ಕಾರ ನೀಡದಿರುವುದೇ ಲವ್ ಜಿಹಾದ್​ಗೆ ಕಾರಣ.

ಹಂದಿಗಳಿಗೆ ಟಿಪ್ಪು ಎಂದು ಹೆಸರಿಡುತ್ತೇವೆ

ಗುಜರಾತ್​ನಲ್ಲಿ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಮುಸ್ಲಿಂ ಯುವಕರು ಬರುತ್ತಾರೆ. ಮುಸ್ಲಿಂ ಹುಡುಗರಿಗೆ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಏನು ಕೆಲಸ? ಬೇಕಿದ್ದರೆ ತಮ್ಮ ಮಡದಿಯರನ್ನು ಕರೆತಂದು ಗರ್ಭಾ ನೃತ್ಯ ಮಾಡಲಿ. ತಮ್ಮ ಮಹಿಳೆಯರನ್ನು ಮಸೀದಿ ಒಳಗೆ ಬಿಡದವರು ನವರಾತ್ರಿಯ ವೇಳೆ ಹಿಂದೂ ಹುಡುಗಿಯರ ಜೊತೆ ಗರ್ಭಾ ನೃತ್ಯ ಮಾಡುತ್ತಾರೆ. ನಿಮ್ಮ ನಾಡಿನಲ್ಲಿ ಟಿಪ್ಪುವನ್ನು ಏನಂತ ಕರೀತೀರಿ ಗೊತ್ತಿಲ್ಲ. ಆದರೆ ಗುಜರಾತಿನಲ್ಲಿ ಹಂದಿಗಳಿಗೆ ಟಿಪ್ಪು, ಔರಂಗಜೇಬ್, ಬಾಬರ್ ಹೆಸರಿಡುತ್ತೇವೆ. ಕರ್ನಾಟಕದಲ್ಲಿ ಲಿಂಗಾಯಿತ ವಿವಾದ ಎಬ್ಬಿಸಿ ಹಿಂದೂಗಳಲ್ಲಿ ಬಿಕ್ಕಟ್ಟು ಸೃಷ್ಟಿಸಿದರು. ಗುಜರಾತಿನಲ್ಲೂ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದರು. ಹಿಂದುಗಳು ಜಾತಿಯ ವಿಚಾರ ಇಟ್ಟುಕೊಂಡು ಹಂಚಿ ಹೋಗಿದ್ದೇವೆ ಕಾಜಲ್ ಹಿಂದೂಸ್ತಾನಿ ಹೇಳಿದರು.

ಹಿಜಾಬ್ ವಿವಾದದಿಂದ ಕರಾವಳಿಯ ಮಾನ ತೆಗೆದರು: ಶ್ರೀಕಾಂತ್ ಶೆಟ್ಟಿ ಕಾರ್ಕಳ 

ಹಿಂದೂ ಜಾಗರಣಾ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಹಿಜಾಬ್ ವಿವಾದದಲ್ಲಿ ಆರು ಯುವತಿಯರು ಕರಾವಳಿಯ ಮಾನ ಮರ್ಯಾದೆ ತೆಗೆದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಉಡುಪಿಯ ಮರ್ಯಾದೆಯನ್ನು ಹರಾಜು ಹಾಕಿದರು. ಹಿಜಬ್ ಯುವತಿಯರ ಬಣ್ಣ ಬಯಲು ಮಾಡಿದ್ದು ಹಿಂದೂ ಜಾಗರಣ ವೇದಿಕೆ. ದುರ್ಗಾ ದೌಡ್​ನ ಪೇಟಗಳು ಕಾಲೇಜಿನಲ್ಲಿ ಕಾಣಿಸಿಕೊಂಡಿದ್ದೆವು. ಕೇಸರಿ ಪೇಟಗಳು ಸಮಾಜದ ಜಾಗೃತಿಗಾಗಿ ಶೋಕಿಗಾಗಿ ಹಾಕಿದ್ದಲ್ಲ. ವಿವಾದ ಎದ್ದರೆ ಪೇಟಗಳ ಜೊತೆ ಒಂದು ಸಾವಿರ ಕತ್ತಿಗಳು ಕಾಣಿಸಿಕೊಳ್ಳುತ್ತವೆ. ಇದು ಹಿಂದೂ ಜಾಗರಣ ವೇದಿಕೆಯ ಎಚ್ಚರಿಕೆ ಎಂದು ಪರಿಗಣಿಸಿ.

ಇಂತಿಫಿದಾ ಎಂದರೆ ಏನು?

ಪಿಎಫ್​ಐ ನಿಷೇಧ ಮಾಡಿದ ಕೂಡಲೇ ಹೊಸ ವರಸೆ ಶುರುವಾಗಿದೆ. ಇಂತಿಫಿದಾ ಎಂದು ಪಿಎಫ್​ಐ ಕಾರ್ಯಕರ್ತರು ಬರೆದುಕೊಂಡಿದ್ದಾರೆ. ಇಂತಿಫಿದಾ ಎಂದರೆ ನಾಗರಿಕ ಸಂಘರ್ಷದ ಮುನ್ಸೂಚನೆ. ಇಂತಿಫಿದಾ ಎಂದರೆ ಕ್ರಾಂತಿಯ ಮುನ್ಸೂಚನೆ. ಇಸ್ರೇಲ್​ನ ನಾಗರೀಕ ಹೋರಾಟದ ಇಂತಿಫಿದಾ ಭಾರತದಲ್ಲಿ ಕೇಳಿಬರುತ್ತಿದೆ. ಪಾಕಿಸ್ತಾನದ ಏಂಜಂಟರ ವಿರುದ್ಧ ಹೋರಾಟ ಆರಂಭಕ್ಕಾಗಿ ದುರ್ಗಾದೌಡ್ ಮಾಡಲಾಗಿದೆ. ಕಾಂಗ್ರೆಸ್ ಹಿಂದೂಗಳ ಮೇಲೆ ಸುಳ್ಳು ಉಗ್ರವಾದದ ನೂರಾರು ಕೇಸು ದಾಖಲಿಸಿದೆ. ಖಡ್ಗ ಹಿಡಿದು ಮೆರವಣಿಗೆ ಮಾಡಲು ಅನುಮತಿ ಸಿಗಲಿಲ್ಲ. ಮೆರವಣಿಗೆಯಲ್ಲಿ ನಾವು ಬಹಿರಂಗವಾಗಿ ಶಸ್ತ್ರಾಸ್ತ್ರ ಬಳಕೆ ಮಾಡಿಲ್ಲ. ಸಂದರ್ಭ ಒದಗಿ ಬಂದಾಗ ಶಸ್ತ್ರಾಸ್ತ ಬಳಕೆ ಮಾಡುತ್ತೇವೆ ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

TV9 Kannada


Leave a Reply

Your email address will not be published.