ರಾಯಚೂರು: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕುರಿತಂತೆ ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತ ಲಸಿಕಾ ಅಭಿಯಾನವನ್ನು ನಡೆಸುತ್ತಿದೆ. ಈ ನಡುವೆ ಅಭಿಯಾನಕ್ಕೆ ವೇಗ ತುಂಬಲು ಕ್ರಮ ಕೈಗೊಳ್ಳಲಾಗ್ತಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮಾಹಿತಿ ನೀಡಲು ಅಸಹಕಾರ ತೋರಿದ 16 ಕಾಲೇಜುಗಳಿಗೆ ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮಗೌಡರಿಂದ ನೋಟಿಸ್ ಜಾರಿ ಮಾಡಲಾಗಿದೆ.

ಲಸಿಕೆ ಕುರಿತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಮರ್ಪಕ ಮಾಹಿತಿ ನೀಡಿದ ಒಟ್ಟು 16 ಖಾಸಗಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಗೆ ಕಾರಣ ಕೇಳಿ‌ ನೋಟಿಸ್ ಮಾಡಲಾಗಿದೆ. ಅಲ್ಲದೇ ಡಿಎಂಎ ಆ್ಯಕ್ಟ್​ ಹಾಗೂ  ಐಪಿಸಿ ಸೆಕ್ಷನ್ 188, 269, 270 ಮತ್ತು ಇತರ ಸಕ್ಷಮ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತರು ಮುಂದಾಗಿದ್ದಾರೆ.

24 ಗಂಟೆಯಲ್ಲಿ ನೋಟಿಸ್​ಗೆ ಉತ್ತರಿಸಲು ಸೂಚನೆ ನೀಡಲಾಗಿದೆ. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಿದ್ದಾರೆ.

The post ಲಸಿಕಾ ಅಭಿಯಾನ: ಸಿಬ್ಬಂದಿ, ವಿದ್ಯಾರ್ಥಿಗಳ ಮಾಹಿತಿ ನೀಡದ 16 ಕಾಲೇಜುಗಳಿಗೆ ನೋಟಿಸ್​ appeared first on News First Kannada.

Source: newsfirstlive.com

Source link