ಬೆಂಗಳೂರು: ನಗರದ ಯಲಹಂಕ ಸರ್ಕಾರಿ ಪಿಯು ಕಾಲೇಜ್​ ಬಳಿ ಕೊರೊನಾ ಲಸಿಕೆ ಪಡೆಯಲು ಬೆಳಿಗ್ಗೆಯಿಂದಲೇ ಸರತಿ ಸಾಲು ಶುರುವಾಗಿದೆ. ಬೆಳಿಗ್ಗೆ 4 ಗಂಟೆಯಿಂದಲೇ ಸಾರ್ವಜನಿಕರು ಸರ್ಕಾರಿ ಕಾಲೇಜಿನ ಬಳಿ ಬಂದು ಕ್ಯೂನಲ್ಲಿ ನಿಂತಿದ್ದಾರೆ.

ಈ ಲಸಿಕೆ ಕೇಂದ್ರ ಯಲಹಂಕ ಸರ್ಕಾರಿ ಆಸ್ಪತ್ರೆಯಿಂದ ಪಿ.ಯು ಕಾಲೇಜಿಗೆ ಶಿಫ್ಟ್ ಆಗಿರೋ ಕಾರಣ, ನಮಗೆ ಮೊದಲುವ್ಯಾಕ್ಸಿನ್  ಬೇಕು ಅಂತ ಜನರು ಮುಗಿಬಿದ್ದಿದ್ದಾರೆ. ಅಲ್ಲದೇ, ಮೊದಲ ಕೊವ್ಯಾಕ್ಸಿನ್ ಡೋಸ್​ ಪಡೆದವರಿಗೆ ಇದೀಗ ಎರಡನೇ ಡೋಸೇಜ್ ಅಗತ್ಯವಿದೆ. ಆದ್ರೆ ಸದ್ಯ ಕೋವ್ಯಾಕ್ಸಿನ್ ಲಸಿಕೆಯ ಅಭಾವ ಎದುರಾಗಿದೆ. ಯಲಹಂಕದ ಸರ್ಕಾರಿ ಕಾಲೇಜು ವ್ಯಾಕ್ಸಿನೇಷನ್‌ ಸೆಂಟರ್‌ನಲ್ಲಿ ಕೋವ್ಯಾಕ್ಸಿನ್ ಲಭ್ಯವಿರುವ ಹಿನ್ನೆಲೆ ಕ್ಯೂ ಹೆಚ್ಚಾಗಿದೆ. ಇತ್ತ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯಲ್ಲೂ ವಾಕ್ಸಿನ್ ಹಾಕಿಸಿಕೊಳ್ಳೋದಕ್ಕೆ ಜನ ಕಾದು ನಿಂತಿದ್ದಾರೆ.

ಜೊತೆಗೆ ಇಂದಿನಿಂದ ಇಂದಿರಾ ಕ್ಯಾಂಟೀನ್​ನಲ್ಲಿ ಮೂರು ಹೊತ್ತು ಉಚಿತ ಊಟ ನೀಡಲಾಗ್ತಿರೋ ಹಿನ್ನೆಲೆ, ಬೆಳಗ್ಗಿನ ಉಪಹಾರ ಮಾಡೋದಕ್ಕೆ ನಗರದ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲಿಯೂ ಜನರ ಕ್ಯೂ ಕಂಡು ಬಂತು. ಬೆಳಿಗ್ಗೆ 7:40ರಿಂದ ಸಿಬ್ಬಂದಿ ತಿಂಡಿ ನೀಡುತ್ತಿರೋ ಹಿನ್ನಲೆಯಲ್ಲಿ ಜನ ಸರತಿ ಸಾಲಿನಲ್ಲು ನಿಂತು ಆಹಾರ ಪಡೆದುಕೊಳ್ತಿದ್ದಾರೆ.

The post ಲಸಿಕೆಗೆ, ಇಂದಿರಾ ಕ್ಯಾಂಟೀನ್​ನಲ್ಲಿ ತಿಂಡಿಗೆ ಬೆಳ್ಳಂಬೆಳಗ್ಗೆ ಫುಲ್​​ ಕ್ಯೂ appeared first on News First Kannada.

Source: newsfirstlive.com

Source link