ಯಾದಗಿರಿ: ಸದ್ಯ ಜನ ನಾ ಮುಂದು ನೀ ಮುಂದು ಅಂತ ಓಡಿಬಂದು ಕೊರೊನಾ ಲಸಿಕೆ ಹಾಕಿಸಿಕೊಳ್ತಾರೆ. ನನಗೂ ಇರಲಿ ನಮ್ಮ ಮನೆಯವರಿಗೆ ಇರಲಿ ಅಂತ ಕುಟುಂಬ ಸಮೇತವಾಗಿ ಬಂದು ವ್ಯಾಕ್ಸಿನ್ ತೆಗೆದುಕೊಳ್ಳತ್ತಾರೆ. ಆದರೆ ಯಾದಗಿರಿಯಲ್ಲಿ ಮಾತ್ರ ಫುಲ್ ಡಿಫೆರೆಂಟ್.

ವ್ಯಾಕ್ಸಿನ್‍ಗಾಗಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಬಡಿದಾಡಿಕೊಳ್ತಿರೋದು ಕಂಡಿದ್ದೇವೆ. ಆದರೆ ಯಾದಗಿರಿಯಲ್ಲಿ ಮನೆಗೆ ಹೋಗಿ ಲಸಿಕೆ ಕೊಟ್ಟರೂ ಜನ ಮಾತ್ರ ನೋ ಎನ್ನುತ್ತಿದ್ದಾರೆ. ಯಾದಗಿರಿ ಜನ ವ್ಯಾಕ್ಸಿನ್ ತೆಗೆದುಕೊಳ್ಳಲು ಹೆದರಿಕೊಳ್ಳುತ್ತಿದ್ದು, ಜನರ ವರ್ತನೆ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ನಾವು ವ್ಯಾಕ್ಸಿನ್ ತಗೊಳಲ್ಲ ಅಂತ ಜನ ಓಡಿ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿನ ಸೋಂಕು ತಡೆಗೆ ಜಿಲ್ಲಾಡಳಿತ ಬೃಹತ್ ಲಸಿಕೆ ಅಭಿಯಾನವನ್ನು ಹಮ್ಮಿಕೊಂಡಿದೆ. ಯಾದಗಿರಿ ನಗರದ ಗಾಂಧಿ ಚೌಕ್, ಚಕ್ರಗಟ್ಟ, ಕೊಳ್ಳಿವಾಡದಲ್ಲಿ ಜನರ ಮನೆ-ಮನೆಗೆ ಮತ್ತು ವ್ಯಾಪಾರ ಸ್ಥಳಕ್ಕೆ ತೆರಳಿ ಲಸಿಕೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಜನ ಮಾತ್ರ ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಜಿಲ್ಲಾಡಳಿತ ಅಧಿಕಾರಿಗಳೇ ಖುದ್ದು ಫೀಲ್ಡ್‍ಗಿಳಿದ್ದಾರೆ. ನಗರಸಭೆ ಕಮಿಷನರ್ ಸೇರಿ ಅಧಿಕಾರಿಗಳ ಮಾತಿಗೂ ಡೊಂಟ್‍ಕೇರ್ ಎನ್ನುತ್ತಿರುವ ಜನ, ಅಧಿಕಾರಿಗಳನ್ನು ನೋಡಿದ ತಕ್ಷಣ ಹೆದರಿ ಓಡುತ್ತಿದ್ದಾರೆ.

ಜನರ ಭಯ ನೋಡಿ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ವಿಶೇಷ ಲಸಿಕೆ ಅಭಿಯಾನ ಆರಂಭಿಸಿದೆ. ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರಿಗೆ ಮನೆಯ ಬಳಿಗೆ ತೆರಳಿ ಲಸಿಕೆ ವಿತರಣೆ ಮಾಡಲಾಗ್ತಿದೆ. ಹೊಲಿಗೆ ಯಂತ್ರ ನಡೆಸುವವರು, ಮಡಿವಾಳ, ಸವಿತಾ ಸಮಾಜ ಮತ್ತು ಕಟ್ಟಡ ಕಾರ್ಮಿಕರಿಗೆ ಈ ಸೌಲಭ್ಯ ನೀಡಿದ್ದು, ಕಾರ್ಮಿಕರು ಇದ್ದಲ್ಲಿಗೆ ಹೇಳಿದ ಸಮಯಕ್ಕೆ ವ್ಯಾಕ್ಸಿನೇಷನ್ ಮಾಡಲಾಗ್ತಿದೆ. ಇದನ್ನೂ ಓದಿ: ಕಾಫಿನಾಡಲ್ಲಿ ವ್ಯಾಕ್ಸಿನ್ ಹೆಸರಲ್ಲಿ ಭಾರೀ ಕಳ್ಳಾಟ -ಅಧಿಕಾರಿಗಳ ಮನೆಯವ್ರಿಗೆ ಸುಲಭವಾಗಿ ಸಿಗುತ್ತೆ ಲಸಿಕೆ..!

ಒಟ್ಟಿನಲ್ಲಿ ಲಸಿಕೆ ವಿಚಾರಕ್ಕೆ ಯಾದಗಿರಿ ಮಂದಿ ಅದ್ಯಾಕೆ ಹೆದರಿಕೊಂಡಿದ್ದಾರೋ ಗೊತ್ತಿಲ್ಲ. ಜಿಲ್ಲಾಡಳಿತ ಅಭಿಯಾನ ಜನರಲ್ಲಿ ಜಾಗೃತಿ ಮೂಡಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಕೊರೋನಾ ಗೆಲ್ಲಿ ಅನ್ನೋದು ನಮ್ಮ ಕಾಳಜಿ.

The post ಲಸಿಕೆ ಅಂದ್ರೆ ಸಾಕು ಯಾದಗಿರಿಯಲ್ಲಿ ಮಾರುದ್ದ ಓಡಿಹೋಗ್ತಾರೆ – ಜನರ ವರ್ತನೆಗೆ ಜಿಲ್ಲಾಡಳಿತ ಸುಸ್ತು..! appeared first on Public TV.

Source: publictv.in

Source link