ಬೆಂಗಳೂರು: ಅಗತ್ಯ ಸೇವೆಯಲ್ಲಿ ಚಿಕಿತ್ಸೆ ಕೊಡುವುದು ಮತ್ತು ಲಸಿಕೆ ಕೊಡುವುದು ಅಭಾದಿತ. ಯಾರಿಗೂ ಗೊಂದಲ ಬೇಡ. ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತೆ. ಕೊರೊನಾದಿಂದ ರಕ್ಷಣೆ ಇರಬೇಕು ಅಂದ್ರೆ ಎರಡು ಡೋಸ್ ಲಸಿಕೆ ಪಡೆದುಕೊಳ್ಳಿ ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಲಸಿಕೆ ವಿತರಣೆ ನಿಂತೋಗುತ್ತೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆ ಇಂದು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಲಸಿಕೆ ಕೊರತೆ ಇಲ್ಲ. ಕೇಂದ್ರ ಸರ್ಕಾರ ಸಮಾನವಾಗಿ, ಜನಸಂಖ್ಯೆ ಆಧಾರದ ಮೇಲೆ ಲಸಿಕೆ ಪೂರೈಸುತ್ತಿದೆ. ರಾಜ್ಯ ಸರ್ಕಾರದಿಂದ ಪ್ಯಾರ್ಲಲ್ ಆಗಿ ಲಸಿಕೆ ನೀಡುತ್ತೇವೆ. ಲಸಿಕೆ‌ ಒಂದೇ ಇವತ್ತು ನಮ್ಮ ಜನರನ್ನು ಕಾಪಾಡುವುದು. 18 ವರ್ಷದ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಿ ಎಂದರು.

ಕೊರೊನಾ ‌ಕಂಟ್ರೋಲ್ ಆಗ್ಬೇಕು ಅಂದ್ರೆ ರಾಜ್ಯದಲ್ಲಿ 16 ದಿನ ಬಿಗಿ ಕ್ರಮ ಅನಿವಾರ್ಯ ಎಂದು ಇದೇ ವೇಳೆ ಸುಧಾಕರ್ ಹೇಳಿದ್ರು. ಮೂರನೇ ಅಲೆ ಬರುವುದನ್ನ ತಡೆಯಲು ದೊಡ್ಡ ಮಟ್ಟದ ಸಿದ್ಧತೆ ಆಗಬೇಕು. ಯಾವುದೋ ಹಂತದಲ್ಲಿ ನಾವು ಸ್ವಲ್ಪ ಪ್ರಮಾಣದ ತ್ಯಾಗಕ್ಕೆ ಸಿದ್ಧವಾಗಬೇಕು.
ಸಂಪೂರ್ಣ 14 ದಿನ ಚೈನ್ ಬ್ರೇಕ್ ಹಾಕಲು ಈ ಕ್ರಮ ಅನಿವಾರ್ಯ. ಹೀಗಾಗಿ ಸರ್ಕಾರದ ಜೊತೆ ಸಹಕರಿಸಿ ಎಂದು ಮನವಿ ಮಾಡಿದರು.

ಇನ್ನು ಕೋಲಾರದಲ್ಲಿ ಆಕ್ಸಿಜನ್ ಇಲ್ಲದೇ ರೋಗಿ ಸಾವನ್ನಪ್ಪಿಲ್ಲ.  40 ವೆಂಟಿಲೇಟರ್ ಬೆಡ್ ನೀಡಲಾಗಿತ್ತು. ಆಕ್ಸಿಜನ್ ಪೈಪ್‌ನಲ್ಲಿ ಸಮಸ್ಯೆ ಇದ್ದು, ಅದನ್ನ ಸರಿಪಡಿಸಬೇಕಿತ್ತು. ಸಮಸ್ಯೆಯನ್ನ ಸರ್ಕಾರದ ಗಮನಕ್ಕೆ ತರಬೇಕಿತ್ತು. ಇದರಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ಬಹಳ ತಡವಾಗಿ ನಮ್ಮ ಗಮನಕ್ಕೆ ಬಂದಿದೆ. ಅಲ್ಲಿರುವ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದೇನೆ. ಸ್ಥಳದಲ್ಲೇ ಇಬ್ಬರನ್ನೂ ಸಸ್ಪೆಂಡ್ ಮಾಡಿದ್ದೇನೆ. ಕೆಲವರಿಂದ ಇಂತಹ ಘಟನೆ ನಡೆದಿದೆ. ಕೆಲವರು ಮಾಡುವ ಈ ಘಟನೆಯಿಂದ ಅಪವಾದ ತರುವಂತೆ ಮಾಡಬೇಡಿ ಎಂದರು. ಕಳೆದ ಒಂದು ವರ್ಷದಿಂದ ವೈದರು ಸಲ್ಲಿಸುತ್ತಿರೋ ಸೇವೆಗೆ ಸುಧಾಕರ್ ಶ್ಲಾಘನೆ ವ್ಯಕ್ತಪಡಿಸಿದ್ರು.

The post ಲಸಿಕೆ ಕೊರತೆ ಇಲ್ಲ, ಗೊಂದಲ ಬೇಡ.. ಎಲ್ಲರೂ 2 ಡೋಸ್ ವ್ಯಾಕ್ಸಿನ್ ಪಡೆದುಕೊಳ್ಳಿ -ಸುಧಾಕರ್ appeared first on News First Kannada.

Source: News First Kannada
Read More