ಬೆಂಗಳೂರು: ಕೊರೊನಾ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಎಲ್ಲಾ ನಾಗರೀಕರಿಗೂ ಉಚಿತ ವ್ಯಾಕ್ಸಿನ್​ ನೀಡುತ್ತಿದೆ. ಈ ನಡುವೆ ಹಲವು ಭಾಗಗಳಲ್ಲಿ ವ್ಯಾಕ್ಸಿನ್ ವಿಚಾರದಲ್ಲಿ ರಾಜಕೀಯ ನಡೆಯುತ್ತಿದ್ದು, ಮಾಜಿ ಕಾರ್ಪೊರೇಟರ್​​ ಒಬ್ಬರು ಲಸಿಕೆ ಪಡೆಯಲು ಅಗತ್ಯವಿರುವ ಟೋಕನ್​ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿರುವ ಘಟನೆ ನಗರದ ಶ್ರೀನಗರದಲ್ಲಿ ಕೇಳಿ ಬಂದಿದೆ.

ಶ್ರೀನಗರ ವಾರ್ಡ್ ಮಾಜಿ ಕಾರ್ಪೊರೇಟರ್ ಸವಿತ ಮಾಯಣ್ಣ ವಿರುದ್ಧ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಲಸಿಕಾ ಅಭಿಯಾವನ್ನು ಚುರುಕುಗೊಳಿಸುವ ನಿಟ್ಟನಲ್ಲಿ 18 ವರ್ಷ ಮೇಲ್ಪಟ್ಟ ಆಟೋ ಡ್ರೈವರ್, ಮನೆ ಕೆಲಸದವರು, ಬೆಸ್ಕಾ ಸಿಬ್ಬಂದಿ, ಮೆಡಿಕಲ್ ಶಾಪ್, ಬ್ಯಾಂಕ್ ಸಿಬ್ಬಂದಿ ಸೇರಿ ಕೊರೊನಾ ವಾರಿಯರ್ಸ್​​​ಗೆ ವ್ಯಾಕ್ಸಿನ್​ ಪಡೆಯಲು ವಾರ್ಡ್​ ಹಂತದಲ್ಲಿ ಅವಕಾಶ ನೀಡಲಾಗಿದೆ.

ಆದರೆ ಕೊರೊನಾ ವಾರಿಯರ್ಸ್ ಅಲ್ಲದಿದ್ರು ಮಾಜಿ ಕಾರ್ಪೊರೇಟರ್ ತನ್ನ ಕಡೆಯವರಿಗೆ ಟೋಕನ್ ನೀಡಿ ವ್ಯಾಕ್ಸಿನೇಷನ್‌ ಮಾಡಿಸುತ್ತಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತ ಕೃಷ್ಣಮೂರ್ತಿ ಹಾಗೂ ಶ್ರೀನಗರದ ಸ್ಥಳೀಯರು ಮಾಜಿ ಕಾರ್ಪೊರೇಟರ್ ಸವಿತ ವಿರುದ್ದ ಆರೋಪ ಮಾಡಿದ್ದಾರೆ.

ಕಳೆದ ಕೆಲ ದಿನಗಳಿಂದ ಶ್ರೀನಗರದ ಸಮುದಾಯ ಭವನದಲ್ಲಿ ಬಿಬಿಎಂಪಿ ಕಡೆಯಿಂದ ವಾರ್ಡ್ ಆರೋಗ್ಯಾಧಿಕಾರಿ ಮಧುಸೂಧನ್ ನೇತೃತ್ವದಲ್ಲಿ ವ್ಯಾಕ್ಸಿನೇಷನ್‌ ಅಭಿಯಾನ ನಡೆಯುತ್ತಿದೆ. ಮಾಜಿ ಕಾರ್ಪೊರೇಟರ್ ಸವಿತಮಾಯಣ್ಣ ಆಫೀಸ್ ನಲ್ಲಿ ಬೇಕಾದವರಿಗೆ ಮಾತ್ರ ವ್ಯಾಕ್ಸಿನ್ ಪಡೆಯಲು ಟೋಕನ್ ನೀಡ್ತಿದ್ದಾರೆ. ಕೊರೊನಾ ವಾರಿಯರ್ಸ್ ಅಲ್ಲದಿದ್ರು, ತಮಗೆ ಬೇಕಾದವರಿಗೆ ಮಾತ್ರ ವ್ಯಾಕ್ಸಿನೇಷನ್‌ ಮಾಡಿಸ್ತಿದ್ದಾರೆ. ಇದರಿಂದ ಸಾಮಾನ್ಯ ಜನ ಹಾಗೂ 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಗಾಗಿ ಪರದಾಡಬೇಕಿದೆ ಎಂದು ಆರೋಪಿಸಿದ್ದಾರೆ.

The post ಲಸಿಕೆ ಟೋಕನ್​ ನೀಡ್ತಿರೋ ಮಾಜಿ ಕಾರ್ಪೊರೇಟರ್.. ಇದೆಂಥ ಸಿಸ್ಟಂ? ಸ್ಥಳೀಯರ ಆಕ್ರೋಶ appeared first on News First Kannada.

Source: newsfirstlive.com

Source link