ಹುಬ್ಬಳ್ಳಿ: ಕೊರೊನಾ ಎರಡನೇ ಅಲೆಯ ತೀವ್ರತೆಗೆ ಬ್ರೇಕ್​ ಹಾಕಲು ರಾಜ್ಯ ಸರ್ಕಾರ ಜಾರಿ ಮಾಡಿದ್ದ ಲಾಕ್​​ಡೌನ್​​ ನಿಯಮಗಳನ್ನ ಜೂನ್​​ 14ರ ಬಳಿಕ ಸಡಿಲಿಕೆ ಮಾಡೋ ಚಿಂತನೆ ನಡೆದಿದೆ. ಈ ನಡುವೆ ಅನ್​​ಲಾಕ್​ ಆದ ಬಳಿಕ ಬಸ್​ ಸಂಚಾರ ಆರಂಭ ಮಾಡಲು ಮುಂದಾಗಿರುವ ಸಾರಿಗೆ ಸಂಸ್ಥೆಗಳು, ಲಸಿಕೆ ಪಡೆದ ನೌಕರರಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಲು ಯೋಜನೆ ರೂಪಿಸಿದೆ ಎಂಬ ಮಾಹಿತಿ ಲಭಿಸಿದೆ.

ಲಾಕ್​​ಡೌನ್​ನಲ್ಲಿ ಸಡಿಲಿಕೆ ಆಗುತ್ತಿದಂತೆ ಸಾರಿಗೆ ಸೇವೆ ಪುನರಾರಂಭ ಮಾಡಲು ನಿರ್ಧರಿಸಿರುವ ಹುಬ್ಬಳ್ಳಿಯ NWKRTC , ಮೊದಲ ಡೋಸ್ ಹಾಗೂ ಎರಡನೇ ಡೋಸ್ ಲಸಿಕೆ ಪಡೆದ ಸಿಬ್ಬಂದಿಗೆ ಮಾತ್ರ ಬಸ್ ಓಡಿಸಲು ಅವಕಾಶ ನೀಡಲು ಮುಂದಾಗಿದೆ.

ಇದುವರೆಗೂ 2,216 ಸಾರಿಗೆ ಸಿಬ್ಬಂದಿ ಪೈಕಿ 1,500ಕ್ಕೂ ಹೆಚ್ಚು ಸಿಬ್ಬಂದಿ ಅಂದರೇ ಶೇ.85 ರಷ್ಟು ಸಾರಿಗೆ ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ವಾ.ಕ.ರ.ಸ ಸಂಸ್ಥೆ ಸಿಬ್ಬಂದಿಗೆ ಸೂಚನೆ ನೀಡಿದೆ. ಮೊದಲ ಅಲೆಯಲ್ಲಿ ಬಸ್​ ಸಂಚಾರ ಆರಂಭವಾದ ಬಳಿಕ ಕೊರೊನಾ ಪಾಸಿಟಿವ್​ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

The post ಲಸಿಕೆ ಪಡೆದ ಸಿಬ್ಬಂದಿಗೆ ಮಾತ್ರ ಬಸ್ ಚಾಲನೆಗೆ ಅವಕಾಶ ನೀಡಲು NWKRTC ಚಿಂತನೆ appeared first on News First Kannada.

Source: newsfirstlive.com

Source link