ಬಾಗಲಕೋಟೆ: ಕೋವಿಡ್​ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್​​ಡೌನ್​ ಜಾರಿ ಮಾಡಿದೆ. ಪರಿಣಾಮ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗ್ತಿದೆ. ಆದರೆ ಕೊರೊನಾ ವಿರುದ್ಧ ಹೋರಾಟಕ್ಕೆ ಲಸಿಕೆ ಪಡೆದುಕೊಳ್ಳುವುದೇ ಏಕೈಕ ಮಾರ್ಗವಾಗಿದ್ದು, ಸರ್ಕಾರ ಲಸಿಕೆ ಅಭಿಯಾನಕ್ಕೆ ವೇಗ ತುಂಬಲು ಪ್ರಯತ್ನಿಸುತ್ತಿದೆ. ಇದರ ನಡುವೆ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ವಿನೂತನ ಪ್ಲಾನ್​ ಮಾಡಿದ್ದಾರೆ.

ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ ರಾಜ್ಯ ಸರ್ಕಾರ ಲಾಕ್​ಡೌನ್​ ಸಡಿಲಿಕೆ ಮಾಡಲು ಮುಂದಾಗಿದೆ. ಅನ್​ಲಾಕ್​ ಬಳಿಕವೂ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಜಿಲ್ಲಾಧಿಕಾರಿಗಳು, ನೋ ವ್ಯಾಕ್ಷಿನ್.. ನೋ ಶಾಪ್ ಓಪನ್ ಎಂಬ ನಿಯಮ ತಂದಿದ್ದಾರೆ. ಅಂದ್ರೆ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ‌ಮಾತ್ರ ಅಂಗಡಿ ತೆರೆಯಲು ಅವಕಾಶ ಕೊಡಲು ಮುಂದಾಗಿದ್ದಾರೆ.

ನಗರದಲ್ಲಿರುವ ದಿನಸಿ ಅಂಗಡಿ, ಹೋಟೆಲ್​, ಚಹಾದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್, ಎಲೆಕ್ಟ್ರಿಕ್ ಅಂಗಡಿ, ಸಲೂನ್, ಬಟ್ಟೆ ಅಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿದ್ದು, ಅಂಗಡಿ ಮಾಲೀಕರು ಹಾಗೂ ಕೆಲಸ ಮಾಡುವ ಕಾರ್ಮಿಕರು ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಂಡಿರಲೇಬೇಕು. ಲಸಿಕೆ ಹಾಕಿಸಿಕೊಳ್ಳದೆ ಯಾವುದೇ ಅಂಗಡಿ ತೆರೆಯಲು ಅವಕಾಶವಿಲ್ಲ. ಒಂದು ವೇಳೆ ಲಸಿಕೆ ಪಡೆಯದೆ ಅಂಗಡಿ ತೆರೆದರೆ ಅಂಗಡಿ ಬಂದ್ ಮಾಡಿಸಲಾಗುವುದು. ಕಡ್ಡಾಯವಾಗಿ ಲಸಿಕೆ ಪಡೆದ ಬಗ್ಗೆ ದಾಖಲೆ ತೋರಿಸಬೇಕು. ಅನ್ ಲಾಕ್​​ಗೂ ಮುನ್ನ ಆದ್ಯತೆ ಮೇರೆಗೆ ಇಂತಹ ವರ್ಗದವರಿಗೆ ಲಸಿಕೆ ಪಡೆಯಲು ಅನುಕೂಲ ಕಲ್ಪಿಸುತ್ತೇವೆ. ಜನರೊಂದಿಗೆ ನಿಕಟ ಸಂಪರ್ಕ ಹೊಂದುವ ಹಿನ್ನೆಲೆ ಲಸಿಕೆ ಪಡೆದವರಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

The post ‘ಲಸಿಕೆ ಪಡೆಯದಿದ್ರೆ​​​, ಅಂಗಡಿ ತೆರೆಯಲು ಅನುಮತಿ ಇಲ್ಲ​​’ -ಬಾಗಲಕೋಟೆ ಡಿಸಿಯಿಂದ ವಿನೂತನ ಪ್ಲಾನ್ appeared first on News First Kannada.

Source: newsfirstlive.com

Source link