ನಟಿ ರಾಗಿಣಿ ದ್ವಿವೇದಿ ಕಳೆದ ಒಂದು ವಾರದಿಂದ ಜನ ಮನ ಮೆಚ್ಚುವ ಕಾರ್ಯವನ್ನ ಮಾಡ್ತಿದ್ದಾರೆ. ಕೊರೊನಾ ವಾರಿಯರ್ಸ್​​​​ಗಳಿಗೆ ಹಸಿದವರಿಗೆ ಊಟದ ವ್ಯವಸ್ಥೆ , ಬಡವರಿಗೆ ಅದ್ರಲ್ಲು ಚಿತ್ತಾಗಾರಗಳಲ್ಲಿ, ಸ್ಮಶಾನಗಳಲ್ಲಿ ಕೆಲಸ ಮಾಡೋರಿಗೆ ದಿನಸಿ ಕಿಟ್​​​ಗಳನ್ನ ಹಂಚೋ ಕಾರ್ಯಗಳನ್ನ ಮಾಡಿದ್ದಾರೆ.

ಜೊತೆಗೆ ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್ ಹಾಗೂ ಮೆಡಿಷನ್​​ ಇತ್ಯಾದಿಗಳನ್ನ ಒದಗಿಸುವ ಕೆಲಸ ಮಾಡ್ತಿರೋ ನಟಿ ರಾಗಿಣಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ. ಲಸಿಕೆ ಪಡೆದ ಒಂದು ತಿಂಗಳುಗಳ ಕಾಲ ರಕ್ತದಾನ ಮಾಡೋ ಹಾಗಿಲ್ಲ. ಈ ಕಾರಣದಿಂದಾಗಿ ಮೊದಲೇ ರಕ್ತದಾನ ಮಾಡಿ ನಂತರದ ದಿನಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಲು ರಾಗಿಣಿ ನಿರ್ಧರಿಸಿದ್ದಾರೆ. ಇಂದು ಬೆಳಗ್ಗೆ ರಕ್ತದಾನ ಮಾಡಿರುವ ತುಪ್ಪದ ಬೆಡಗಿ ‘‘ರಕ್ತದಾನ ಮಾಡಿ ಜೀವ ಉಳಿಸಿ ’’ ಎಂದು ಸಂದೇಶ ಸಾರಿದ್ದಾರೆ.

 

The post ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ ರಾಗಿಣಿ appeared first on News First Kannada.

Source: newsfirstlive.com

Source link