ಬೆಂಗಳೂರು: ಪರಪ್ಪನ ಅಗ್ರಹಾರದ ಕೈದಿಗಳಿಗೆ ಕಳೆದ ಒಂದು ತಿಂಗಳಿನಿಂದ ಹಂತ ಹಂತವಾಗಿ ಕೊರೊನಾ ಲಸಿಕೆ ನೀಡಲಾಗ್ತಿದೆ. ಈಗಾಗಲೇ 2500ಕ್ಕೂ ಹೆಚ್ಚು ಕೈದಿಗಳಿಗೆ ಮೊದಲ ಡೋಸ್​ ವ್ಯಾಕ್ಸಿನೇಷನ್​ ಮುಗಿದಿದೆ. ಇದರ ಬೆನ್ನಲ್ಲೇ ಜೈಲಿನಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ ಅಂತ ಹೇಳಲಾಗ್ತಿದೆ.

ಜೈಲಿನಲ್ಲಿ ನೂರಕ್ಕೂ ಹೆಚ್ಚಿದ್ದ ಕೊರೊನಾ ಸೋಂಕಿನ ಪ್ರಮಾಣ ಈಗ ದಿಢೀರ್​ ಇಳಿಕೆಯಾಗಿದೆ. ಕೇವಲ 12 ಮಂದಿ ವಿಚಾರಣಾಧೀನ ಕೈದಿಗಳು ಮಾತ್ರ ಈಗ ಸೋಂಕಿತರಾಗಿದ್ದಾರೆ ಅಂತ ತಿಳಿದುಬಂದಿದೆ. ಜೈಲಧಿಕಾರಿಗಳು ಕೈಗೊಂಡ ಕ್ರಮಗಳು ಸೋಂಕು ನಿಯಂತ್ರಿಸಲು ನೆರವಾಗಿದೆ.

ಸಾಂಕ್ರಾಮಿಕ ಹರಡುವ ಸಾಧ್ಯತೆಯ ಹಿನ್ನೆಲೆ ಜೈಲಿಗೆ ವಿಸಿಟರ್ಸ್ ಭೇಟಿಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಆರೋಪಿಗಳನ್ನ ಕರೆತರುವ ಪೊಲೀಸರಿಗೂ ಆರ್​​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಒಟ್ಟು 4783 ಕೈದಿಗಳು ಪರಪ್ಪನ ಅಗ್ರಹಾರದಲ್ಲಿದ್ದು, 530 ಮಂದಿ 45 ವರ್ಷ ಮೇಲ್ಪಟ್ಟರಾಗಿದ್ದಾರೆ. ಈಗ  2500ಕ್ಕೂ ಹೆಚ್ಚು ಕೈದಿಗಳಿಗೆ ಮೊದಲ ಡೋಸ್​ ಲಸಿಕೆ ನೀಡಲಾಗಿದೆ. ಉಳಿದವರಿಗೆ ನಾಳೆ ವ್ಯಾಕ್ಸಿನೇಷನ್‌ ಮಾಡಲು ಜೈಲಾಧಿಕಾರಿಗಳು ಸಿದ್ದತೆ‌ ನಡೆಸಿದ್ದಾರೆ.

ಈ ಮೂಲಕ ಜೈಲಲ್ಲಿ ಸೋಂಕಿನ ಪ್ರಮಾಣ ಕಂಟ್ರೋಲ್​ಗೆ ತರುವಲ್ಲಿ ಜೈಲಧಿಕಾರಿಗಳು ಯಶಸ್ವಿ‌‌‌‌ಯಾಗಿದ್ದಾರೆ.

The post ಲಸಿಕೆ ಮ್ಯಾಜಿಕ್: ಕೊರೊನಾ ನಿಯಂತ್ರಿಸುವಲ್ಲಿ​​​ ಪರಪ್ಪನ ಅಗ್ರಹಾರ ಅಧಿಕಾರಿಗಳು ಸಕ್ಸಸ್​​ appeared first on News First Kannada.

Source: newsfirstlive.com

Source link