ಲಸಿಕೆ ಹಂಚಿಕೆಯಲ್ಲೂ ರಾಜಕೀಯ – ಸೋಮಣ್ಣ, ಅಶೋಕ್, ಅಶ್ವತ್ಥನಾರಾಯಣ ವಲಯಕ್ಕೆ ಸಿಂಹಪಾಲು

ಬೆಂಗಳೂರು: ಕೊರೊನಾ ಕಟ್ಟಿ ಹಾಕಿ ಎಂದು ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಅಷ್ಟ ದಿಕ್ಪಾಲಕರನ್ನು ನೇಮಕ ಮಾಡಿದ್ದಾರೆ. ಆದರೆ ಅವರೇ, ವ್ಯಾಕ್ಸಿನ್ ಹಂಚಿಕೆಯಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿವೆ.

ಬುಧವಾರ ಸಚಿವ ಸೋಮಣ್ಣ ಉಸ್ತುವಾರಿಯ ಪೂರ್ವ ವಲಯಕ್ಕೆ, ಆರ್.ಅಶೋಕ್ ಹೊಣೆ ಹೊತ್ತಿರುವ ದಕ್ಷಿಣ ವಲಯಕ್ಕೆ ಮತ್ತು ಡಿಸಿಎಂ ಅಶ್ವತ್ಥನಾರಾಯಣ ಅವರ ಬೆಂಗಳೂರು ಪಶ್ಚಿಮ ವಲಯಕ್ಕೆ ಸಿಂಹಪಾಲು ಲಸಿಕೆ ಹಂಚಿಕೆಯಾಗಿದೆ.

ಉಳಿದ ವಲಯಗಳಿಗೆ ಅತೀ ಕಡಿಮೆ ಪ್ರಮಾಣದಲ್ಲಿ ವ್ಯಾಕ್ಸಿನ್ ಡೋಸ್ ಹಂಚಿಕೆ ಆಗಿದೆ. ಈ ಬಗ್ಗೆ ಬಿಜೆಪಿಯಲ್ಲಿ ಒಳಗೊಳಗೆ ಅಸಮಾಧಾನ ವ್ಯಕ್ತವಾಗ್ತಿದೆ ಎಂದು ತಿಳಿದುಬಂದಿದೆ.

ಯಾವ ವಲಯಕ್ಕೆ ಎಷ್ಟು?
ಬೆಂಗಳೂರು ಪೂರ್ವ(ಸೋಮಣ್ಣ) ವಲಯಕ್ಕೆ 7,130 ಲಸಿಕೆ ಹಂಚಿಕೆಯಾದರೆ ಬೆಂಗಳೂರು ದಕ್ಷಿಣ (ಆರ್.ಅಶೋಕ್) ವಲಯಕ್ಕೆ 6,970 ಲಸಿಕೆ ಸಿಕ್ಕಿದೆ. ಬೆಂಗಳೂರು ಪಶ್ಚಿಮ(ಅಶ್ವತ್ಥನಾರಾಯಣ) 6,640, ಬೊಮ್ಮನಹಳ್ಳಿ(ಸುರೇಶ್‍ಕುಮಾರ್) ವಲಯಕ್ಕೆ 3,840 ಲಸಿಕೆ ಹಂಚಿಕೆಯಾಗಿದೆ.

ಮಹದೇವಪುರ(ಬೈರತಿ ಬಸವರಾಜ್) 3,690, ಆರ್.ಆರ್.ನಗರ(ಸೋಮಶೇಖರ್) 3,120, ಯಲಹಂಕ ವಲಯ(ಎಸ್.ಆರ್.ವಿಶ್ವನಾಥ್) 2,290, ದಾಸರಹಳ್ಳಿ(ಗೋಪಾಲಯ್ಯ) ವಲಯಕ್ಕೆ 1,870 ಲಸಿಕೆ ಹಂಚಿಕೆಯಾಗಿದೆ.

The post ಲಸಿಕೆ ಹಂಚಿಕೆಯಲ್ಲೂ ರಾಜಕೀಯ – ಸೋಮಣ್ಣ, ಅಶೋಕ್, ಅಶ್ವತ್ಥನಾರಾಯಣ ವಲಯಕ್ಕೆ ಸಿಂಹಪಾಲು appeared first on Public TV.

Source: publictv.in

Source link