ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿ ಕಂಡು ಪೊದೆ ಸೇರಿದ ರೈತ!

ರಾಯಚೂರು: ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೆ ಕೊರೊನಾ ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. ಕೊರೊನಾ ಲಸಿಕೆಯಿಂದ ತಪ್ಪಿಸಿಕೊಳ್ಳಲು ಜನರು ನಾನಾ ರೀತಿಯ ನೆಪಗಳನ್ನ ಹೇಳುತ್ತಿದ್ದಾರೆ. ಹೀಗೆ ಲಸಿಕೆ ನೀಡಲು ಬಂದ ಆರೋಗ್ಯ ಸಿಬ್ಬಂದಿಯನ್ನ ಕಂಡ ರೈತನೋರ್ವ ಪೊದೆಯಲ್ಲಿ ಅಡಗಿ ಕುಳಿತ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮೀಣ ಭಾಗದಲ್ಲಿ ಲಸಿಕಾ ಅಭಿಯಾನದ ಗುರಿ ಸಾಧಿಸಲು ಆರೋಗ್ಯ ಕಾರ್ಯಕರ್ತರು ಮನೆ ಮನೆಗೂ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಹಸಮಕಲ್ ಗ್ರಾಮಕ್ಕೆ ಆಗಮಿಸಿದ ಸಿಬ್ಬಂದಿಗೆ ಶಾಕ್​ ಕಾದಿತ್ತು. ಲಸಿಕೆ ನೀಡಲು ಹರಸಾಹಸ ಪಡುತ್ತಿರುವ ಸಿಬ್ಬಂದಿ ಜಮೀನಿಗೆ ಬಂದಿದ್ದಾರೆ. ಜಮೀನಿಗೆ ಬಂದ ಸಿಬ್ಬಂದಿಯನ್ನು ಕಂಡ ರೈತ ಆಂಜನೇಯ ಪೊದೆಯಲ್ಲಿ ಅಡಗಿ ಕುಳಿತಿದ್ದಾನೆ.

ಇನ್ನು ಅಡಗಿ ಕುಳಿತ ರೈತನಿಗೆ ಆರೋಗ್ಯ ಸಿಬ್ಬಂದಿ ಎಷ್ಟೇ ಮನವೊಲಿಸಿದರು ಹೊರಗೆ ಬಂದು ಲಸಿಕೆ ಪಡೆಯಲು ನಿರಾಕರಿಸಿದ್ದಾನೆ. ಕೆಲಹೊತ್ತಿನ ಬಳಿಕ ವೈದ್ಯಾಧಿಕಾರಿಗಳ ಸತತ ಪ್ರಯತ್ನದಿಂದ ಆಂಜನೇಯ ಪೊದೆಯಿಂದ ಹೊರಗೆ ಬಂದಿದ್ದಾನೆ. ನಂತರ ಆತನಿಗೆ ಲಸಿಕೆ ಕುರಿತು ಜಾಗೃತಿ ಮೂಡಿಸಿ ಲಸಿಕೆ ನೀಡಿ ಆರೋಗ್ಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ:ಕೋಡಿ ಹರಿದ ಕೆರೆ ನೋಡಲು ಬಂದವರಿಗೆ ಕೋವಿಡ್ ವ್ಯಾಕ್ಸಿನೇಷನ್‌

News First Live Kannada

Leave a comment

Your email address will not be published. Required fields are marked *