ಕೊರೊನಾ ವ್ಯಾಕ್ಸಿನ್​​ ಅಭಿಯಾನಕ್ಕೆ ವೇಗ ತುಂಬಲು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಅಧಿಕಾರಿಗಳು ವಿಶೇಷ ಸೂಚನೆಯನ್ನು ನೀಡಿದ್ದು, ಮದ್ಯ ದಂಗಡಿಗಳ ಎದುರು ‘ನೋ ಲಿಕ್ಕರ್​ ವಿಥ್​​ಔಟ್​ ವ್ಯಾಕ್ಸಿನ್​ ಸರ್ಟಿಫಿಕೇಟ್​​’ ನಾಮಫಲಕಗಳನ್ನು ಅಂಟಿಸಲಾಗಿದೆ. ಈ ಕಾರಣದಿಂದಾಗಿ ಹಿಂಗಾದ್ರೆ ಹೆಂಗೆ.. ಅಂತಾ ಕುಡುಕರು ಫುಲ್ ಟೆನ್ಶನ್ ಆಗಿದ್ದಾರೆ.

ಇಟಾವಾ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) ಹೇಮಾಕುಮಾರ್ ಸಿಂಗ್​ ಹೊಸ ಸೂಚನೆ ನೀಡಿದ್ದಾರೆ. ಕಳೆದ ವಾರವಷ್ಟೇ ನಕಲಿ ಮದ್ಯ ಸೇವನೆ ಮಾಡಿ 50ಕ್ಕೂ ಜನರು ಸಾವನ್ನಪ್ಪಿದ ಘಟನೆ ಬಳಿಕ ಜಿಲ್ಲಾ ಪೊಲೀಸ್​ ಅಧಿಕಾರಿಗಳೊಂದಿಗೆ ಮದ್ಯದಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಮದ್ಯದಂಗಡಿ ಮಾಲೀಕರಿಗೆ ಕೋವಿಡ್​ ವ್ಯಾಕ್ಸಿನ್ ಪಡೆದುಕೊಂಡವರಿಗೆ ಮಾತ್ರ ಮದ್ಯ ಮಾರಾಟ ಮಾಡುವಂತೆ ಸೂಚನೆ ನೀಡಿದ್ದರು.

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಟಾವಾ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿ ಕಮಲ್​ ಕುಮಾರ್ ಶುಕ್ಲಾ, ವ್ಯಾಕ್ಸಿನ್​ ಪಡೆದುಕೊಳ್ಳ ಜನರಿಗೆ ಮದ್ಯ ಮಾರಾಟ ಮಾಡದಂತೆ ನಾವು ಯಾವುದೇ ಅಧಿಕೃತ ಆದೇಶ ನೀಡಿಲ್ಲ. ಮದ್ಯ ಖರೀದಿ ಮಾಡಲು ವ್ಯಾಕ್ಸಿನ್​​ ಪಡೆದ ದೃಡಿಕರನ ಪತ್ರ ತೋರಿಸುವುದು ಅಗತ್ಯವಿಲ್ಲ ಎಂದು ಎಂದಿದ್ದಾರೆ.

ಅಂದಹಾಗೇ, ಇತ್ತೀಚೆಗಷ್ಟೇ ಫಿರೋಜಾಬಾದ್ ಜಿಲ್ಲಾಧಿಕಾರಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಲಸಿಕೆ ಪಡೆದುಕೊಳ್ಳಲೇ ಬೇಕು. ಲಸಿಕೆ ಪಡೆದುಕೊಳ್ಳದಿದ್ದರೇ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಹೇಳಿದ್ದರು. ಉತ್ತರ ಪ್ರದೇಶ ಸರ್ಕಾರ ಜೂನ್​​ ತಿಂಗಳಿನಲ್ಲಿ ಒಂದು ಕೋಟಿ ಲಸಿಕೆ ನೀಡಬೇಕು ಗುರಿಯನ್ನು ಹೊಂದಿದೆ.

The post ‘ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಎಣ್ಣೆ’ ಕುಡುಕರಿಗೆ ಫುಲ್ ಟೆನ್ಶನ್ appeared first on News First Kannada.

Source: newsfirstlive.com

Source link